ನಾಯಕನಹಟ್ಟಿ:: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶ್ರೀ ಶಸ್ತ್ರ ತಜ್ಞರು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ನಗರ ಘಟಕ ಅಧ್ಯಕ್ಷ ಕಾಟಯ್ಯ ಹೇಳಿದ್ದಾರೆ.
ಅವರು ಸೋಮವಾರ ಪಟ್ಟಣದ ನಾಡ ಕಚೇರಿಯ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣ ವತಿಯಿಂದ ಸ್ರ‍್ತೀ ಶಸ್ತ್ರ ರೋಗ ತಜ್ಞರನ್ನು ಕೂಡಲೇ ನಿಯೋಜನೆ ಮಾಡುವಂತೆ ರಾಜಸ್ವ ನಿರೀಕ್ಷೆಕ ಚೇತನ್ ಕುಮಾರ್ ಅವರಿಗೆ ಮನವಿ ನೀಡಿ ಮಾತನಾಡಿದ್ದಾರೆ. ನಮ್ಮ ನಾಯಕನಹಟ್ಟಿ ಹೋಬಳಿ ಅತಿದೊಡ್ಡ ಜನಸಂಖ್ಯೆಯನ್ನು ಇರುವಂತ ಹೋಬಳಿ ಈ ಭಾಗದ
ಗ್ರಾಮೀಣ ಪ್ರದೇಶದಿಂದ ಸಾಕಷ್ಟು ರೋಗಿಗಳು ಪ್ರತಿದಿನವೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ ಇಂತಹ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀರೋಗ ತಜ್ಞರು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ ಇದರಿಂದ ನಾಯಕನಹಟ್ಟಿ ಗ್ರಾಮೀಣ ಜನರಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಆಗ್ರಹಿಸಿದರು ಕೂಡಲೇ ಸ್ತ್ರೀರೋಗ ತಜ್ಞರು ಸರಿಯಾಗಿ ಕರ್ತವ ನಿರ್ವಹಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರವೇ ಯುವ ಘಟಕದ ಅಧ್ಯಕ್ಷ ಸುರೇಶ್, ನಗರ ಘಟಕ ಅಧ್ಯಕ್ಷ ಕಾಟಯ್ಯ, ಗೌರವ ಅಧ್ಯಕ್ಷ ಜಾಗನೂರಹಟ್ಟಿ ಮುತ್ತಯ್ಯ, ಉಪಾಧ್ಯಕ್ಷ ಬೋರಯ್ಯ, ಯುವ ಘಟಕ ಅಧ್ಯಕ್ಷ ಸುರೇಶ್, ಶಿವಮೂರ್ತಿ, ಪ್ರಕಾಶ್ ಕೋಟಿ, ವಿಶ್ವನಾಥ್ ಮಂಜು ರಾಷ್ಟ್ರೀಯ ಕಿಸಾನ್ ಸಂಘದ ಅಧ್ಯಕ್ಷ ಬಿ ಟಿ ಪ್ರಕಾಶ್, ನಾಗರಾಜ್, ರಾಘವೇಂದ್ರ ಚಾರಿ, ವೀರಣ್ಣ, ಸೇರಿದಂತೆ ಮುಂತಾದವರು ಇದ್ದರು