ಚಳ್ಳಕೆರೆ : ನನ್ನ ಕನಕಪುರ ಕ್ಷೇತ್ರಕ್ಕಿಂತ ಬಯಲು ಸೀಮೆ ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕ ಟಿ.ರಘುಮೂರ್ತಿ ಉತ್ತಮ ಕೆಲಸ ಮಾಡಿದ್ದಾರೆ, ಅಂತಹ ಕೆಲಸಗಳು ನಿಮ್ಮ ಕಣ್ಣಾ ಮುಂದೆ ಇವೆ, ಒಬ್ಬ ಇಂಜಿನಿಯರ್ ಆಗಿ, ಶಾಂತಿಮೂರ್ತಿಯಾದ ಟಿ.ರಘುಮೂರ್ತಿ ಮತ್ತೋಮ್ಮೆ ವಿಧಾನಸೌಧಕ್ಕೆ ಕಳಿಸಿಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವಣರದಲ್ಲಿ ಆಯೋಜಿಸಿದ್ದ ಕಾಂಗ್ರೇಸ್ಪಕ್ಷದ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಇಡೀ ರಾಜ್ಯವೇ ತಿರುಗಿ ನೋಡುವಂತ ಅಭಿವೃದ್ದಿ ಮಾಡಿದ ಶಾಸಕ ಮತ್ತೋಮ್ಮೆ ನಿಮ್ಮ ಆರ್ಶಿವಾದ ಕೋರಿದ್ದಾರೆ, ಆದ್ದರಿಂದ ಈ ಬಿಜೆಪಿ ಸರಕಾರನ್ನು ತೊಲಗಿಸಿ 70 ವರ್ಷ ಆಳ್ವಿಕೆ ಮಾಡಿದ ಇಂದಿರಾ ಗಾಂಧಿ ಕಾಲದ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ತರೋಣ ಎಂದರು.
ಡಬಲ್ ಇಂಜಿನ್ ಸರಕಾರ ಎಂದು ಹೇಳುವ ಬಿಜೆಪಿಗರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ, ಈದೇ ಚಿತ್ರದುರ್ಗ ಮತದಾರಿಂದ ಆಯ್ಕೆಯಾದ ಕೇಂದ್ರದ ಮಂತ್ರ ಎ.ನಾರಾಯಣಸ್ವಾಮಿ ನಿಮ್ಮ ಮತದಾರರ ಋಣ ತೀರಿಸಿ, ಅದನ್ನು ಬಿಟ್ಟು ಲೋಕಸಭಾ ಸದಸ್ಯನಾಗಿ ಮೀಸಲಾತಿ ವಿಚಾರದಲ್ಲಿ ಉತ್ತರ ನೀಡಿದೆ ಜನರಿಗೆ ಮೋಸ ಮಾಡುತ್ತಿರೀ ಎಂದರು.
ಭಾರತ್ ಜೋಡೋ ಯಾತ್ರೆ ನೆನಪು :
ಚಳ್ಳಕೆರೆ ಕ್ಷೇತ್ರದಲ್ಲಿ ಅಭೂತ ಪೂರ್ವವಾದ ಜನ ಬೆಂಬಲ ತೋರಿಸುವ ಮೂಲಕ ಈಡೀ ರಾಜ್ಯದಲ್ಲಿ ಅತೀ ಹೆಚ್ಚಿನ ಜನ ಬೆಂಬಲ ತೊರಿಸಿದ ಕೀರ್ತಿ ಚಳ್ಳಕೆರೆ ಕ್ಷೇತ್ರಕ್ಕೆ ಇದೆ, ಇನ್ನೂ ಕಡಲೆ ಕಾಯಿ ಕೊಟ್ಟು ಬಯಲು ಸೀಮೆ ಪರಿಚಯಿಸಿದ ರೈತ ಕಿಸಾನ್ ಸದಸ್ಯ ನಾಗರಾಜ್, ರಾಹುಲ್ ಗಾಂಧಿಗೆ ಕ್ಷೇತ್ರದ ಪರಿಚಯ ಮಾಡಿದರು, ಇಡೀ ರಾಜ್ಯಕ್ಕೆ ದೊಡ್ಡ ಶಕ್ತಿ ನೀವು ಮಹಿಳಾ ತಾಯಿ ಸೌತೆಕಾಯಿ ಕೊಟ್ಟು ನಿಮ್ಮ ಅಜ್ಜಿ ನೀಡಿದ ಭೂಮಿಯಲ್ಲಿ ಬೆಳೆದ ಬೆಳೆ ತಿನ್ನು ಎನ್ನುವ ಮಾತು ನಿಜಕ್ಕೂ ಧನ್ಯ ಈಡೀ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಡ ಜನರಿಗೆ ಭೂಮಿ ಕೊಟ್ಟವರು ಕಾಂಗ್ರೇಸ್ ಸರಕಾರ ಮಾತ್ರ,
ಬಿಜೆಪಿ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿಗೆ ಟಾಂಗ್ ಡಿಕೆಶಿ :
ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಎಲ್ಲಿ ಹೋಯಿತು ನಿಮ್ಮ ಭರವಸೆಯ ಪ್ರಣಾಳಿಕೆಗಳು, ನುಡಿದಂತೆ ನಡೆಯೋದಕ್ಕೆ ಹಾಗಿಲ್ಲ ರೈತರಿಗೆ ಬೆಂಬಲ ಬೆಲೆ ಇಲ್ಲ. ಕೊವಿಡ್ ಸಂಧರ್ಭದ ಆಸ್ವತ್ರೆಯ ಬಿಲ್ಗೆ ಹಣವಿಲ್ಲ, ಸುಖಸುಮ್ಮನೆ ಜನಧನ್ ಖಾತೆ ಮಾಡಿಸಿದಿರೀ, ಅದಕ್ಕೆ ಹಣ ಹಾಕಿಲ್ಲ. ಎಲ್ಲಿಯೋಯಿತು ನಿಮ್ಮ ಅಚ್ಚೆದಿನ ಕೇಂದ್ರ ಮಂತ್ರಿ ನಾರಾಯಣಸ್ವಾಮಿಗಳೆ ಎಂದು ವ್ಯಂಗ್ಯ ಮಾಡಿದರು.
ಇಡೀ ರಾಜ್ಯದಲ್ಲಿ ಭ್ರಷ್ಟ ಸರಕಾರ ತೆಗೆಯಬೇಕು ಎಂದು ನಿಮ್ಮ ಶಾಸಕರೇ ಹೇಳುತ್ತಾರೆ, 40ರಷ್ಟು ಕಮಿಷನ್ ದಂದೆಯನ್ನು ನಿಮ್ಮ ಶಾಸಕ ಗೂಲಿಹಟ್ಟಿ ಶೇಖರ್ ಆರೋಪಕ್ಕೆ ನಮ್ಮ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ತನಿಖೆ ಮಾಡಿಸಿ ನಿಮ್ಮ ಬಣ್ಣ ಬಯಲು ಮಾಡುತ್ತೆವೆ, 2023ಕ್ಕೆ ಕಾಂಗ್ರೇಸ್ ಅಧಿಕಾರಕ್ಕೆ ಬರುತ್ತದೆ 136 ಸ್ಥಾನ ಗೆಲ್ಲುತ್ತೆವೆ, ಈಗಾಗಲೇ ನಮ್ಮ ಪ್ರಣಾಳಿಕೆಯಲ್ಲಿ ಇದ್ದ ಸುಮಾರು 169 ಅಂಶಗಳಲ್ಲಿ ಸು.165 ಅಂಶಗಳನ್ನು ಜಾರಿಗೆ ತಂದಿದ್ದೆವೆ ಬಿಜೆಪಿ ಸುಳ್ಳು ಪ್ರಣಾಳಿಕೆಯಲ್ಲಿ 600ಅಂಶಗಳಲ್ಲಿ ಕನಿಷ್ಟ 60 ಈಡೇರಿಸಲು ಹಾಗಿಲ್ಲ ಎಂದು ಆರೋಪ ಮಾಡಿದರು.
ಪ್ರತಿ ಕುಟುಂಬದ ಯಜಮಾನಿಕೆಗೆ 2 ಸಾವಿರ :
ಕಾಂಗ್ರೇಸ್ ಅಧಿಕಾರಕ್ಕೆ ಬಂದ ತಕ್ಷಣೆವೇ ಬಡ ಜನರ ಹೊಟ್ಟೆಗೆ ತಿನ್ನುವ ಅಕ್ಕಿಯನ್ನು ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನಿಡಲಾಗುತ್ತದೆ, ಇನ್ನೂರು ಯುನಿಟ್ ವಿದ್ಯುತ್ ಉಚಿತ, ಗ್ಯಾಸ್ ಬೆಲೆ ಹೆರಿಕೆ, ಪೆಟ್ರೋಲ್, ಡಿಸೆಲ್ ಹಾಗೂ ಅಡುಗೆ ಎಣ್ಣೆ ದುಬಾರಿ ಇದೆಲ್ಲವು ಮನಗಂಡು ಪ್ರತಿ ತಿಂಗಳು ಮನೆ ಯಾಜಮಾನಿಗೆ ಎರಡು ಸಾವಿರ ಉಚಿತವಾಗಿ ನೀಡಲಾಗುತ್ತದೆ. ಎಂದು ಗ್ಯಾರಂಟಿ ಇರುವಬಾಂಡ್ ಕಾರ್ಡ್ನ್ನು ತೋರಿಸಿದರು.
ಸಾರಿಗೆ ಸಚಿವ ಶ್ರೀರಾಮುಲು ಟೂರಿಂಗ್ :
ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ ಕ್ಷೇತ್ರದಲ್ಲಿ ಈಡೀ ರಾಜ್ಯವೇ ತಿರುಗಿ ನೋಡುವಂತ ಅಭಿವೃದ್ದಿ ಮಾಡಿದ್ದಾರೆ ಆದರೆ ಪಕ್ಕದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಬರೀ ಟೂರಿಂಗ್ ಮಾಡಿಕೊಂಡು ಇದ್ದಾರೆ, ಇನ್ನೂ ಜನರ ಕಷ್ಟ ಕೇಳದೆ ಇರವುದು ಅವರ ಬಿಜೆಪಿ ಪಕ್ಷದ ವೈಪಲ್ಯ ಎಂದು ರಾಮುಲು ವಿರುದ್ದ ಚಾಟಿ ಬೀಸಿದರು.
ಇನ್ನೂ ಕೇವಲ 40ದಿನ ಬಿಜೆಪಿ ಸರಕಾರ ಅಧಿಕಾರ :
ಬಿಜೆಪಿ ಸರಕಾರ ಆಡಳಿತದಲ್ಲಿ ಕೇವಲ ಜನಪರ ಅಭಿವೃದ್ದಿಗಿಂತ, ಅವರ ಅಗರಣಗಳು ಸರಮಾಲೆಗಳೆ ಹೆಚ್ಚು ಪಿಎಸ್ಐ ಅಗರಣ, ಇಂಜಿನಿಯಾರ್ ಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಗರಣ, ಕಂಟ್ರಾಕ್ಟೆರ್ ಬಿಜೆಪಿ ಆಡಳಿತಕ್ಕೆ ರೋಸಿ ಆತ್ಮಹತ್ಮೆ ಮಾಡಿಕೊಂಡರು, ಇನ್ನೂ 40ದಿನ ಬಿಜೆಪಿ ಸರಕಾರ ತದನಂತರ ನಿಮ್ಮ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುತ್ತದೆ ಎಂದು ಡಿಕೆ ಭರವಸೆ ನೀಡಿದರು.
ಮಸ್ಟ್ ಹಾಕಿ ಬಾಕ್ಸ್ ಮಾಡಿ :
ಇನ್ನೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು ಕ್ಷೇತ್ರದ ಎರಡು ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಇನ್ನೂ ಕ್ಷೇತ್ರವಾಪ್ತಿಯಲ್ಲಿ ಅಕ್ರಮ ಮರಳು ಗಾರಿಕೆ, ಅಕ್ರಮ ಮಧ್ಯ ಮಾರಾಟ ಈಗೇ ಎಲ್ಲಾವುದಕ್ಕೂ ಕಡಿವಾಣ ಹಾಕಿ, ಇನ್ನೂ ಆರ್ಥಿಕ ಅಭಿವೃದ್ದಿಗೆ ಹೆಚ್ಚು ಹೊತ್ತು ನೀಡಿಲಾಗಿದೆ 2023ಕ್ಕೆ ಮತ್ತೋಮ್ಮೆ ಶಾಸಕನಾಗಲು ನಿಮ್ಮ ಆರ್ಶಿವಾದ ಅಗತ್ಯ ಎಂದರು.
ಇದೇ ಸಂಧರ್ಭದಲ್ಲಿ ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿಕೆ.ಶಿವಕುಮಾರ್, ಮಾಜಿ ಉಪಮುಖ್ಯ ಮಂತ್ರಿ ಪರಮೇಶ್ವರ್. ಮಾಜಿ ಸಚಿವರಾದ, ಮುನಿಯಪ್ಪ, ರಾಮಲಿಂಗರೆಡ್ಡಿ, ಸಲೀಮ್ಆಹ್ಮದ್, ,ಸುದರ್ಶನ್, ರೇವಣ್ಣ, ಮಾಜಿ ಸಚಿವ ಡಿ.ಸುಧಾಕರ್, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಶಾಸಕ. ಎಸ್.ತಿಪ್ಪೆಸ್ವಾಮಿ, ನಲಪಾಡ್, ನಿಕೇತ್ರಾಜ್, ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಹಾಗೂ ಕಾಂಗ್ರೇಸ್ ಪದಾಧಿಕಾರಿಗಳು ಮುಂಚೂಣಿ ಘಟಕದ ಅಧ್ಯಕ್ಷರು ಕಾರ್ಯಕರ್ತರು ಇತರರು ಇದ್ದರು.