ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದ ಶಾಸಕ ಟಿ.ರಘುಮೂರ್ತಿ
ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಕಳೆದ ಹತ್ತು ವರ್ಷಗಳಲ್ಲಿ ಚಳ್ಳಕೆರೆ ತನ್ನ ಬದಲಾವಣೆಯತ್ತ ಸಾಗುತ್ತಿದೆ, ಆಯಿಲ್ ಸಿಟಿಯಾದ ನಂತರ ಪ್ರಸ್ತುತ ವಿಜ್ಞಾನ ನಗರಿಯಾಗಿ ಹೊರಹೊಮ್ಮಿದೆ ವಿಶಾಲವಾದ ರಸ್ತೆ ಅಗಲೀಕರಣ ಸ್ಪೂರ್ತಿದಾಯಾಕವಾಗಿದೆ, ಮತ್ತು ತಾಲ್ಲೂಕಿನಾದ್ಯಾಂತ ನೂರಾರು ಸಮುದಾಯ ಭವನಗಳು, ಮಿನಿ ವಿಧಾನ ಸೌಧ ಕಟ್ಟಡವೂ ಹಾಗೂ ನೂತನ ಕೆಎಸ್‌ಆರ್‌ಟಿಸಿ ಬಸ್ಸ್ ನಿಲ್ದಾಣ, ಈಗೇ ಹಲವು ಕಾರ್ಯಗಳಲ್ಲಿ ಸರ್ಕಾರದ ಪ್ರಮುಖ ಅಂಗವಾಗಿರುವ ವಿದ್ಯಾರ್ಥಿಗಳ ಇತ ದೃಷ್ಟಿಯಿಂದ ಇಂಜಿನಿಯಾರ್ ಕಾಲೇಜ್, ಜಿಟಿಟಿಸಿ ಕೇಂದ್ರ, ಪದವಿ ವಿದ್ಯಾರ್ಥಿಗಳ ಇತ ದೃಷ್ಠಿಯಿಂದ ಸುಮಾರು 4.1ಕೋಟಿ ವೆಚ್ಚದ ಅನುದಾನದಲ್ಲಿ ಬೋಧನ ಕೊಠಡಿಗಳ ನಿರ್ಮಾಣ, ಈಗೇ ಶೈಕ್ಷಣಿಕವಾಗಿ ತಮ್ಮ ಕ್ಷೇತ್ರದಲಿ ಅಕ್ಷರ ಕ್ರಾಂತಿ ನಡೆಸಿದ್ದಾರೆ.
ಜಿಲ್ಲೆಯ ಸುಮಾರು ಗ್ರಾಮೀಣ ಪ್ರದೇಶದ ಬಡ ಮಕ್ಕಳು ಉನ್ನತ ಉದ್ದೆಗಳನ್ನು ಓದಲು ಆಗದೆ ತಮ್ಮ ಆಸೆಯನ್ನು ಅರ್ಧಕ್ಕೆ ಮೊಟಕುಗೊಳಿಸುತಿದ್ದು, ಓದುವ ಆಸೆಯಿದ್ದರು ಆರ್ಥಿಕ ಬಿಕ್ಕಟ್ಟಿನಿಂದ ಸ್ಥಳಿಯವಾಗಿ ಇರುವ ಕಾಲೇಜುಗಳಲ್ಲಿ ವ್ಯಾಸಂಗಮಾಡಿ ಸುಮ್ಮನಾಗುತ್ತಿದ್ದರು. ಇದ್ದನ್ನ ಹರಿತ ಶಾಸಕರು ಹಲವು ಅಭಿವೃದ್ದಿ ಕಾರ್ಯಗಳ ಜೊತೆ ಜೊತೆಗೆ ತಮ್ಮ ಮಕ್ಕಳ ಇತ ದೃಷ್ಟಿಯಿಂದ ನಗರದಲ್ಲೆ ಬೃಹತ್ ಎಂಜಿನಿಯಾರ್ ಕಾಲೇಜು ಸ್ಥಾಪಿಸಿದ್ದಾರೆ, ಇನ್ನೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ನಗರದಲ್ಲಿ ಈಡೀ ಜಿಲ್ಲೆಗೆ ಮಾದರಿಯಾದ ಸುಸಜ್ಜಿತವಾದ ಜಿಟಿಟಿಸಿ ಕೇಂದ್ರ ತೆರೆದು ಸುಮಾರು ಮಕ್ಕಳಿಗೆ ಉದ್ಯೋಗ ಸೃಷ್ಠಿ ಮಾಡಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಶಿಕ್ಷಣಕ್ಕಾಗಿ ಶ್ರಮಿಸಿದ ಶಾಸಕ :
ಆಯಿಲ್ ಸಿಟಿಯಲ್ಲಿ ಸುಮಾರು ಕೋಟಿಗಳನ್ನು ಶಿಕ್ಷಣಕ್ಕೆ ಮೀಸಲಿಡುವುದರ ಮೂಲಕ ಶೈಕ್ಷಣಿಕ ಕ್ರಾಂತಿ ನಡೆಸಿದ್ದಾರೆ. ಇನ್ನೂ ಪ್ರೌಢಶಾಲಾ ವಿಭಾಗದಲ್ಲಿ ಹೆಗ್ಗೆರಿ ತಾಯಮ್ಮ ಪ್ರೌಢಶಾಲೆ, ಬಿಎಂಹೆಚ್‌ಎಸ್ ಪೌಢಶಾಲೆ, ಟಿಎನ್.ಕೋಟೆ, ನನ್ನಿವಾಳ ಪ್ರೌಢಶಾಲೆ ಈಗೇ ಗೊಪನಹಳ್ಳಿ, ಹಾಗೂ ಹುಣಸೆಕಟ್ಟೆ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಈಡೀ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರ ಮೂಲಕ ಶೈಕ್ಷಣಿಕ ಮುನ್ನುಡಿಗೆ ನಾಂದಿ ಹಾಡಿದ್ದಾರೆ.
ಹಾಗೆಯೇ ವಿದ್ಯಾರ್ಥಿಗಳಿಗೆ ಸುಮಾರು 400 ಟ್ಯಾಬ್ ಕೊಡಿಸುವ ಮೂಲಕ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯ ಬಗ್ಗೆ ಮಕ್ಕಳಿಗೆ ತಿಳಿಯಲಿ ಎಂಬ ಉದ್ದೇಶದಿಂದ ಹೆಚ್‌ಪಿಪಿಸಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಂಪ್ಯೂಟರ್ ಶಿಕ್ಷಣ ಕೇಂದ್ರ ತೆರೆಯಲು ಶಾಸಕರ ಇಚ್ಚಾಶಕ್ತಿಯಿಂದ ಜಿಲ್ಲೆಯಲ್ಲಿ ಬರ ಪೀಡಿತ ಪ್ರದೇಶವೆಂದು ಹೇಳಲಾಗುವ ಚಳ್ಳಕೆರೆ ತಾಲ್ಲೂಕು ಎರಡು ವಿಧಾನಾಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿದೆ. ತಾಲ್ಲೂಕು ಕೇಂದ್ರವಾದ ಚಳ್ಳಕೆರೆ ನಗರದಲ್ಲಿ ಮಕ್ಕಳಿಗೆ ಹೆಚ್ಚು ಉಪಯುಕ್ತತೆಯಾಗಲಿದ್ದು, ಆನೇಕ ವಿದ್ಯಾವಂರ‍್ನು ಸೃಷ್ಟಿಸುತ್ತದೆ, ತಾಲೂಕಿನಲ್ಲಿ ಬರಗಾಲ ವಿದ್ದರು ವಿದ್ಯಾಗೆ ಬರವಿಲ್ಲೆಂಬುದು ಚಿಂತಕರ ಮಾತಾಗಿದೆ.
ಬಾಕ್ಸ್ ಮಾಡಿ.:
ಚಳ್ಳಕೆರೆ ನಗರದಲ್ಲಿ ಹಲವು ಯೋಜನೆಗಳ ಜೊತೆ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ, ಕಳೆದ 10ವರ್ಷಗಳ ನನ್ನ ಅವಧಿಯಲ್ಲಿ ನಗರದಲ್ಲಿ ಇಂಜಿನಿಯಾರ್ ಕಾಲೇಜ್, ಜಿಟಿಟಿಸಿ ಕೇಂದ್ರ, ಸರಕಾರಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಮಿನಿವಿಧಾನ ಸೌಧ, ತಾಯಿ ಮತ್ತು ಮಕ್ಕಳ ಆಸ್ವತ್ರೆ, ಸರಕಾರಿ ಕಾಲೇಜ್ ಕಟ್ಟಡ, ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜ್ ಕಟ್ಟಡ, ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡಗಳು, ಪ್ರೌಢಶಾಲಾ ಕಟ್ಟಡಗಳು, ನೀರಾವರಿ ಯೋಜನೆಗೆ ಬ್ಯಾರೇಜ್‌ಗಳು ಈಗೇ ಸುಮಾರು ನೂರಾರು ಕೋಟಿಗಳ ಲೆಕ್ಕಾದಲ್ಲಿ ಅನುದಾನವನ್ನು ಮೊದಲ ಆಧ್ಯತೆಯಾಗಿ ಶಿಕ್ಷಣಕ್ಕೆ ಹಾಗೂ ನೀರಾವರಿ ಕ್ಷೇತ್ರಕ್ಕೆ ನೀಡಿದೆ, ಗಡಿ ಭಾಗದ ಶಾಲೆಗಳ ಪುನೇಶ್ಚೇತನಕ್ಕೆ ಅವಿರತ ಪ್ರಯತ್ನದ ಮೂಲಕ ಇಂದು ಶೈಕ್ಷಣಿಕವಾಗಿ ಪ್ರಗತಿ ಕಂಡಿದೆ.
–ಶಾಸಕ ಟಿ.ರಘುಮೂರ್ತಿ , ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ

Namma Challakere Local News
error: Content is protected !!