ಚಳ್ಳಕೆರೆ : ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ವಿಜ್ಞಾನ ನಗರಿಯಲ್ಲಿ ರಾಜಾಕೀಯ ದಿನದಿಂದ ದಿನಕ್ಕೆ ರಂಗೇರಿದ್ದು ಮೂರು ಪಕ್ಷಗಳ ಬಲ ಬಲಾ ತೋರಿಸುವಲ್ಲಿ ಮತದಾರರನ್ನು ಓಲೈಕೆ ಮಾಡುವುದು ಹೆಚ್ಚಾಗಿದೆ. ಆದರಂತೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕೆ ಜಿಗಿಯುವುದು ಕಂಡು ಬಂದಿದೆ.
ಅದರAತೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸಂಭಾವ್ಯ ಅಭ್ಯರ್ಥಿ ನಿಗಧಿಯಾಗದೆ ಇರುವ ಕಾರಣ ಬಿಜೆಪಿಯಿಂದ ಕಾರ್ಯಕರ್ತರು ಪಕ್ಷ ತೊರೆದರೆ, ಇನ್ನೂ ಕ್ಷೇತ್ರದಲ್ಲಿ ಆಡಳಿತ ಪಕ್ಷದ ಕಾಂಗ್ರೇಸ್ ಇದ್ದರು ಕೂಡ ಕೆಲ ಮುಖಂಡರು ಜೆಡಿಎಸ್ ನತ್ತ ಗಮನ ಸೇಳೆಯುವುದು ಕೂತುಹಲ ಮೂಡಿಸಿದೆ .
ಇನ್ನೂ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿ ಇರುವಾಗಲೇ ಪಕ್ಷ ಬದಲಾವಣೆ ಯಾಗುವುದು ಮೂರು ಪಕ್ಷಗಳಲ್ಲಿ ಬಾರೀ ಚರ್ಚೆ ಯಾಗುತ್ತಿದೆ, ಇನ್ನೂ ಮತದಾರರ ಹಾಗೂ ಕಾರ್ಯಕರ್ತರ ಪಕ್ಷ ಸೇರ್ಪಡೆಗೆ ತಾ ಮುಂದು ನೀ ಮುಂದು ಎಂಬAತೆ ಕ್ಷೇತ್ರದಲ್ಲಿ ಬಿಡು ಬಿಟ್ಟಿದ್ದಾರೆ.

ಅದರಂತೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಜಿಗುAಟೆ ಲಂಬಾಣಿಹಟ್ಟಿ ಗ್ರಾಮಸ್ಥರು ಸಾಮೂಹಿಕವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್‌ಕುಮಾರ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಇದೇ ಸಮಯದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ಗ್ರಾಮದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!