ಚಳ್ಳಕೆರೆ : ಮೊಳಕಾಲ್ಮೂರು ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,500 ಕೋಟಿ ರೂ. ಅನುದಾನವನ್ನು ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿರುವುದು ಅತ್ಯಂತ ಹರ್ಷದಾಯಕ ಸಂಗತಿ ಎಂದು ಬಿಜೆಪಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರಭಾಕರ ಮ್ಯಾಸ ನಾಯಕ ತಿಳಿಸಿದ್ದಾರೆ.
ಬಯಲುಸೀಮೆಯ ದಶಕಗಳ ಬೇಡಿಕೆಯಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಯಿಂದಾಗಿ ಕೃಷಿ ನೀರಾವರಿ ಅಭಿವೃದ್ಧಿಯ ಜೊತೆಗೆ ಈ ಭಾಗದ ರೈತರ ಬವಣೆಯ ಬದುಕು ಸುಧಾರಿಸಲಿದ್ದು ಇದೊಂದು ದೂರದೃಷ್ಟಿತ್ವ ಉಳ್ಳ ಜನಪರ ಬಜೆಟ್ ಇದಾಗಿದೆ.
ಬಜೆಟ್ ನಲ್ಲಿ ಹಲವು ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ ಮಾಡಿರುವುದರ ಜೊತೆಗೆ ಒಂದಷ್ಟು ಉತ್ಪನ್ನ ಪದಾರ್ಥಗಳ ಬೆಲೆಯೂ ಇಳಿಕೆಯಾಗಿದೆ. ಒಟ್ಟಾರೆ ಜನ ಸಾಮಾನ್ಯರಿಗೆ ಅತೀ ಹೆಚ್ಚು ಲಾಭದಾಯಕ ಉಳ್ಳ ಬಜೆಟ್ ಇದಾಗಿದೆ. ಕೋವಿಡ್ ಮಹಮಾರಿ ಜಗತ್ತನ್ನೇ ತಲ್ಲಣಗೊಳಿಸಿದ ಸಂದರ್ಭದಲ್ಲೂ ನಮ್ಮ ಬಜೆಟ್ ವಿಶ್ವಕ್ಕೆ ಒಂದು ಸಂದೇಶ ನೀಡುವುದರ ಜೊತೆಗೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಅತ್ಯಂತ ಸದೃಢವಾಗಿದೆ ಎಂಬುದನ್ನು ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಸಾಬೀತು ಪಡಿಸಿದೆ. ಎಂದು ಪ್ರಭಾಕರ ತಿಳಿಸಿದ್ದಾರೆ.