ಗಜ್ಜುಗಾನಹಳ್ಳಿಯಲ್ಲಿ ಮನೆ ಮನೆಗೆ ಉಚಿತ ಕಸದ ಬುಟ್ಟಿ ವಿತರಣೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ಎಸ್ ಮಂಜಣ್ಣ
ನಾಯಕನಹಟ್ಟಿ:: ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ಎಸ್ ಮಂಜಣ್ಣ.
ಅವರು ತಾಲೂಕಿನ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಹಸಿ ಕಸ ಒಣಕಸ ವಿಂಗಡಣೆಗೆ ಉಚಿತ ಕಸದ ಬುಟ್ಟಿ ವಿತರಿಸಿ ಮಾತನಾಡಿದ್ದಾರೆ
ಸ್ವಚ್ಛತೆಯ ಕಾಪಾಡುವ ನಿಟ್ಟಿನಲ್ಲಿ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಉಚಿತ ಹಸಿ ಕಸ ಒಣ ಕಸ ಬುಟ್ಟಿ ವಿತರಿಸಲಾಗಿದೆ ಗ್ರಾಮದಲ್ಲಿ ಹಸಿ ಕಸ ಒಣ ಕಸ ವಿಂಗಡಣೆಗೋಸ್ಕರ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾಗಿದೆ ಹಸಿ ಕಸ ಒಣಕಸ ಬೇರ್ಪಡಿಸುವ ಸಲುವಾಗಿ ಗೊಬ್ಬರವಾಗಿ ಮಾರ್ಪಡಿಸಿ ರೈತರ ಜಮೀನಿಗೆ ಮಾರಲು ಅನುಕೂಲವಾಗುತ್ತದೆ ಆದ್ದರಿಂದ ಸಾರ್ವಜನಿಕರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ಎಸ್ ಪಂಜಣ್ಣ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಸ್ ಸದಾಶಿವಯ್ಯ, ಶಂಕರ್ ಮೂರ್ತಿ, ಗುಡ್ಡದ ತಿಪ್ಪೇಸ್ವಾಮಿ, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಚ್ ತಿಪ್ಪಯ್ಯ, ಯುವಕ ಮಲ್ಲೇಶ್, ತಿಪ್ಪೇಸ್ವಾಮಿ ಅರೇಹಳ್ಳಿ ಗೌರಮ್ಮ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸೇರಿದಂತೆ ಮುಂತಾದವರು ಇದ್ದರು