ಚಳ್ಳಕೆರೆ : ಮಾಚಿದೇವರ ಈಡೀ ಜಗತ್ತಿಗೆ ಉತ್ತಮ ಸಂಧೇಶ ಸಾರುವ ಮೂಲಕ ಈಡೀ ಮನುಕುಲದ ಒಳಿತೆಗೆ ಶ್ರಮಿಸಿದ್ದಮಹಾನ್ ಕಾಯಕ ಯೋಗಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ತಾಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಈಡೀ ಕ್ಷೇತ್ರದ ಎಲ್ಲಾ ಜಾತಿ ಜನಾಂಗಕ್ಕೆ ಸಮುದಾಯ ಭವನಗಳನ್ನು ನಿರ್ಮಿಸುವ ಮೂಲಕ ಈಡೀ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದೆವೆ ಎಂದರು.
ಇನ್ನೂ ಸಮುದಾಯದ ತಾಲೂಕು ಅಧ್ಯಕ್ಷ ನಾಗರಾಜ್ ಮಾತನಾಡಿ ಜಾತಿ, ಲಿಂಗ, ಸಮಾನತೆ ವಂಚಿತದ ಕಾಲಘಟ್ಟದಲ್ಲಿ ಕಾಯಕವೇ ಭಕ್ತಿ, ಕಾಯಕವೇ ಜೀವನ ಎಂದು ಶ್ರದ್ಧೆ ಇಟ್ಟು ಸಮಾಜದ ಕಂಟಕದ ವಿರುದ್ದ ವಿರೋಧ ವ್ಯಕ್ತಪಡಿಸಿದವರು ಮಡಿವಾಳ ಮಾಚಿದೇವರು ಎಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಗ್ರೇಡ್ 2 ಸಂದ್ಯಾ, 12ಶತಮಾನದ ಬಿಜ್ಜಳನ ಆಸ್ಥಾನದಲ್ಲಿ ಆದ ಬದಲಾವಣೆಯಿಂದ ವಚನ ಮತ್ತು ವಚನಕಾರರಿಗೆ ಅಪಾಯವಿದ್ದ ಕಾಲದಲ್ಲಿ ವಚನ ಮತ್ತು ವಚನಕಾರರನ್ನು ರಕ್ಷಿಸಿದ ಕೀರ್ತಿ ಮಾಡಿವಾಳ ಮಾಚಿದೇವರಿಗೆ ಸಲ್ಲುತ್ತದೆ, ಮಡಿ ಎಂದರೆ ಶುದ್ಧ, ಶುದ್ಧ ಮಾಡುವುದೆ ಮಾಡಿವಾಳನ ಕುಲ ಕಸುಬು. ಬಟ್ಟೆಯನ್ನಷ್ಟೆ ಅಲ್ಲದೇ ಮನಸ್ಸು, ದಾರಿ, ಜೀವನ ಶೈಲಿ, ವಿವೇಚನೆಗಳನ್ನು ಶುದ್ಧ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಡಿವಾಳ ಸಮುದಾಯದ ಮುಖಂಡರು ಗಳಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳ, ಸದಸ್ಯ ರಮೇಶ್ ಗೌಡ, ಸಮುದಾಯದ ಅಧ್ಯಕ್ಷ ಮಂಜುನಾಥ, ನಾಗರಾಜ್, ಶಿವರಾಜ್, ಕುಶಲಾ, ಪುಟ್ಟ ಲಿಂಗಪ್ಪ, ವಿಜಯ್, ಆರ್ಟ್ಬಸನ್ ಪ್ರಕಾಶ. ಅಂಜಿನಪ್ಪ, ರಂಗಣ್ಣ, ಸೈಯದ್, ಜುಬೇರ್ ಬೈ, ಶೈಲಮ್ಮ, ಎಸ್ ರಾಜು, ಭೀಮಣ್ಣ, ಮಡಿವಾಳ ಸಮಾಜದ ಬಂಧುಗಳು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Namma Challakere Local News
error: Content is protected !!