ಚಳ್ಳಕೆರೆ : ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಳವಾಗುತ್ತಿದೆ, ಪ್ರಸ್ತುತ ದಿನಗಳಲ್ಲಿ ನಗರದ ಸ್ವಚ್ಛತಾ ಕಾರ್ಯವು ಸವಾಲಿನ ರೂಪದಲ್ಲಿದ್ದು, ಪ್ರತಿಯೊಬ್ಬ ನಾಗರೀಕರು ಸ್ವ-ಇಚ್ಛೆಯಿಂದ ನಗರ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಪೌರಕಾರ್ಮಿಕರು ಮತ್ತು ನಗರಸಭೆಯೊಂದಿಗೆ ಕೈ ಜೋಡಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಷ್ಮೆ ಕಲಕಪ್ಪ ಗೋಣಿ ಅಭಿಪ್ರಾಯ ಪಟ್ಟರು.
ಅವರು ನಗರದ ನಗರಸಭೆ ಹಾಗೂ ಕಾನೂನು ಅರಿವು ನೆರವು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮದ ಕುರಿತು ಮಾತನಾಡಿದರು, ಸಾರ್ವಜನಿಕರು ಮೊದಲು ಸ್ವಚ್ಚತೆಯಿಂದ ಇರುವುದು ಕಲಿಯಬೇಕು, ಹಾಗೂ ಪೌರಕಾರ್ಮಿಕರೊಂದಿಗೆ ಸಹಕರಿಸಲು ಹಾಗೂ ಕಂಡ ಕಂಡಲ್ಲಿ ಉಗುಳುತ್ತಾ ಗಲೀಜು ಮಾಡದಂತೆ ತಿಳಿಸಿದರು.
ಅಪರ ಸಿವಿಲ್ ನ್ಯಾಯಾಧೀಶರಾದ ಗೌಡ ಜಗದೀಶ ರುದ್ರೆ ಮಾತನಾಡುತ್ತಾ ಪ್ರಸ್ತುತ ಚಳ್ಳಕೆರೆ ನಗರವು 70,000 ಜನಸಂಖ್ಯೆಯನ್ನು ಹೊಂದಿದ್ದು, ಸದರಿ ನಗರವನ್ನು ಪ್ರತಿದಿನ ಸ್ವಚ್ಛಗೊಳಿಸಲು ಕೇವಲ 80ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಸದರಿ ಪೌರಕಾರ್ಮಿಕರಿಂದ ನಗರ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುವುದು ಕಷ್ಟಕರವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು, ತಮ್ಮ ಮನೆಯ ಸುತ್ತಮುತ್ತ ಸ್ವತಃ ಸ್ವಚ್ಛತಾ ಕಾರ್ಯಗಳನ್ನು ನಿರ್ವಹಿಸುವಂತೆ ನಗರ ಪ್ರದೇಶದ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯಗಳನ್ನು ಕೈಗೊಂಡು ನಗರಸಭೆಯೊಂದಿಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ವಕೀಲರ ಸಂಘದ ಅಧ್ಯಕ್ಷ ಜಿ.ಎಂ.ಆನAದಪ್ಪ ಮಾತನಾಡುತ್ತಾ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಸರ್ಕಾರದ ಅಧೀನದಲ್ಲಿರುವ ಎಲ್ಲಾ ಕಛೇರಿಗಳ ಸಹಯೋಗದೊಂದಿಗೆ ಪ್ರತಿ ತಿಂಗಳು ಕಾನೂನು ಅರಿವು ಇತ್ಯಾದಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕರು ಸದರಿ ಕಾನೂನು ಸೇವಾ ಸಮಿತಿಯನ್ನು ಸದುಪಯೋಗಪಡಿಸಿಕೊಂಡು ನಗರ ಸ್ವಚ್ಛತೆಗೆ ಪ್ರತಿದಿನ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕಆಂಜನೇಯ, ಉಪಾಧ್ಯಕ್ಷರಾದ ಮಂಜುಳ ಆರ್.ಪ್ರಸನ್ನಕುಮಾರ್, ಸದಸ್ಯೆ ಸುಮಾ,ಜೈತುನ್‌ಬೀ, ನಾಮ ನಿರ್ದೇಶಿತ ಸದಸ್ಯರಾದ ಜಗದಾಂಬ, ಪೌರಾಯುಕ್ತ ಸಿ.ಚಂದ್ರಪ್ಪ, ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Namma Challakere Local News
error: Content is protected !!