ನಾಯಕನಹಟ್ಟಿ: ಸಮೀಪದ ಹಿರೇಕೆರೆ ಕಾವಲಿನಲ್ಲಿ ಬುಡಕಟ್ಟು ಜನರ ಆರಾಧ್ಯ ದೈವ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ ವಿಜೃಂಭಣೆಯಿAದ ನಡೆಯಿತು.
ಶ್ರೀ ಚೌಡೇಶ್ವರಿ ದೇವಿಯು ಹಲವು ಪವಾಡ ಹಾಗೂ ಮಹಿಮೆಗಳ ಮೂಲಕ ಪ್ರಸಿದ್ಧಿ ಪಡೆದಿರುವ ಶ್ರೀ ಚೌಡೇಶ್ವರಿ ದೇವಿಯು ಸುತ್ತಮುತ್ತಲಿನ ಗ್ರಾಮಗಳ ಆರಾಧ್ಯ ದೇವತೆಯಾಗಿದ್ದಾಳೆ ಜಾತ್ರೆಯ ವೇಳೆ ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ನಡೆಯುತ್ತಾ ಬಂದಿದೆ ಪಟೇಲ್ ಜಿಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮನೆಯಿಂದ ಬಲಿ ಅನ್ನ ತರಲಾಯಿತು. ಕಡಬನಕಟ್ಟೆ ಗೊಲ್ಲರಹಟ್ಟಿಯಿಂದ ಕಾಸು ಮೀಸಲು ಮೊಸರು ಕುಂಭ ಜೇನಿನ ಹಾಲು ತಂದು ದೇವರಿಗೆ ಮತ್ತು ರಥಕ್ಕೆ ಹಾಗೂ ಪಾದಗಟ್ಟೆ ಬಳಿ ಎಡೆ ಹಾಕುತ್ತಾರೆ ಶ್ರೀ ಕಾವಲು ಚೌಡೇಶ್ವರಿ ದೇವಿಗೆ ತಮಟೆ ಕಹಳೆ ಉರುಮೆ ಸೇರಿ ಹಲವು ಜಾನಪದ ವಾದ್ಯಗಳು ಕೋಲಾಟ ನಂದಿ ಕೂಲುಗಳ ಮೆರವಣಿಗೆ ನಡೆಯಿತು. ರಥೋತ್ಸವಕ್ಕೆ ಮೊದಲು ಮುಖ್ಯ ಬಾವುಟ ಹಾರಾಜು ಪ್ರಕ್ರಿಯೆ ನಡೆಯಿತು. ನಲಗೇತನಹಟ್ಟಿ ಬೋಸುಡ್ಲು ಚೆನ್ನಕೇಶವಯ್ಯ 36,000 ರೂಪಾಯಿ. ಮುಕ್ತಿ ಬಾವುಟವನ್ನು ಹಾರಜಿನಲ್ಲಿ ತೆಗೆದುಕೊಂಡ ನಂತರ ಮಹಾಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಶಾಸಕ ಟಿ .ರಘುಮೂರ್ತಿ ಶ್ರೀಮತಿ ಗಾಯಿತ್ರಮ್ಮ ರಘುಮೂರ್ತಿ ,ದೇವಾಲಯ ಸಮಿತಿಯ ಅಧ್ಯಕ್ಷ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, , ದೇವಾಲಯದ ಕಾರ್ಯದರ್ಶಿ ಎಂ ವೈ ಟಿ ಸ್ವಾಮಿ, ಮುಖಂಡರಾದ ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್, ಮಾಜಿ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ,
ಮಂಡಲ ಅಧ್ಯಕ್ಷ ಈ ರಾಮರೆಡ್ಡಿ, ಮಂಡಲ ಕಾರ್ಯದರ್ಶಿಗಳಾದ ಬೆಂಕಿ ಗೋವಿಂದಪ್ಪ ಚನ್ನಗಾನಹಳ್ಳಿ ಮಲ್ಲೇಶ್, ಮಲ್ಲೂರಹಳ್ಳಿ ಮಲ್ಲಯ್ಯ, ಪಟ್ಟಣ ಪಂಚಾಯತಿ ಸದಸ್ಯ ಜೆ ಆರ್ ರವಿಕುಮಾರ್,ಎತ್ತಿನಹಟ್ಟಿ ದೇವರಾಜ್, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ನಲಗೇತನಹಟ್ಟಿ ಜಿ ವೈ ತಿಪ್ಪೇಸ್ವಾಮಿ, ನಲ್ಲನ ದೊಡ್ಡ ಬೋರಯ್ಯ, ಕಾಕ ಸೂರಯ್ಯ, ನಲಗೇತನಹಟ್ಟಿ ಗ್ರಾ.ಪಂ.ಜೆ ಮಲ್ಲಿಕಾರ್ಜುನ್, ಗೌಡಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ ಒ ಓಬಳೇಶ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಜಂಬಣ್ಣ (ತಿಪ್ಪೇಸ್ವಾಮಿ), ಹನುಮಣ್ಣ, ಚಿನ್ನಯ್ಯ,ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು