ಚಳ್ಳಕೆರೆ ತಾಲೂಕಿನ ಓಬಳಾಪುರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ರೇಣುಕಾಪುರ ಕ್ಲಸ್ಟರ್ ಮಟ್ಟದ ಎರಡು ದಿನಗಳ ಕಾಲ ನಡೆಯುವ ಮಕ್ಕಳ ಕಲಿಕಾ ಹಬ್ಬಕ್ಕೆ ಜ್ಯೋತಿ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ ಗ್ರಾಪಂ. ಅಧ್ಯಕ್ಷೆ ಯಶೋದಮ್ಮ, ವಿದ್ಯಾರ್ಥಿಗಳು ಹೆತ್ತವರಿಗೆ ಕೀರ್ತಿ ತರುವ ಗುರಿ ಹೊಂದಬೇಕು. ಪರೀಕ್ಷಾ ದಿನಗಳು ಹತ್ತಿರವಿದ್ದು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳ ಪಡೆದು ಗ್ರಾಮಕ್ಕೆ ಕೀರ್ತಿ ತರುವ ಕೆಲಸವಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ಮುಖ್ಯ ಶಿಕ್ಷಕಿ ಪುಷ್ಪಲತ, ಸಿಆರ್ಪಿ ಸಿದ್ದೇಶ್, ಮಾರಣ್ಣ, ಶ್ರೀನಿವಾಸ, ಮೃತ್ಯುಂಜಯ , ಪುಷ್ಪಲತ ಕೆ. ಎಮ್ .ಮಲ್ಲಮ್ಮ, ಅನುರಾಧ, ಪಾಟೀಲ್ , ಯುವರಾಜ್ , ರೇಣುಕಾಪುರ ಕ್ಲಸ್ಟರ್ ನ ಎಲ್ಲಾ ಶಿಕ್ಷಕರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು .
ಹಾಗು ವಿಶೇಷವಾಗಿ ಗಾನಕೋಗಿಲೆ ನಲಗೇತನಹಟ್ಟಿ ಕೆ ಟಿ ಮುತ್ತುರಾಜ್ ರವರು ಕಲಿಕಾ ಹಬ್ಬ ಕುರಿತು ಮಕ್ಕಳಿಗೆ ಗೀತೆಗಾಯನ ನಡೆಸಿಕೊಟ್ಟರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು