ಚಳ್ಳಕೆರೆ : ಚಳ್ಳಕೆರೆ ನಗರದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಭಾರತ್‌ಜೋಡೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಮಾತನಾಡಿದರು.
ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಹಮ್ಮಿಕೊಂಡಿದ್ದ ಭಾರತ್ ಜೋಡೊ ಪಾದಯಾತ್ರೆಯ ಕಾರ್ಯಕ್ರಮದ ಸಮಾರೋಪ ಸಮಾರಂಭದ ಪ್ರಯುಕ್ತ ಚಳ್ಳಕೆರೆ ನಗರದ ಬ್ಲಾಕ್‌ಕಾಂಗ್ರೆಸ್ ಸಮಿತಿ ಕಛೇರಿ ಸಭಾಂಗಣದಲ್ಲಿ ನಡೆದ ಧ್ವಜಾರೋಹಣ ಮತ್ತು ಹುತಾತ್ಮರ ದಿನಾಚರಣೆಯ ಇಂದು ಸಾಪಲ್ಯ ಕಂಡಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಉಪಾಧ್ಯಕ್ಷೆ ಮಂಜುಳಾ ಆರ್.ಪ್ರಸನ್‌ಕುಮಾರ್, ಸದಸ್ಯರುಗಳಾದ ಜೈ ತುಂಬಿ ಮಾಲಿಕ್ ಸಾಬ್, ಚಳ್ಳಕೆರಪ್ಪ, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ ಆರ್ ಕಿರಣ್ ಶಂಕರ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೀತಾ ಬಾಯಿ, ಉಪಾಧ್ಯಕ್ಷರುಗಳಾದ ಓಬಜ್ಜಿ, ಜಮರೂನ್ನಿಸಾ, ನಿಂಗಮ್ಮ ಹಾಗೂ ಮುಖಂಡರುಗಳಾದ ಮಂಜುಳಮ್ಮ, ಉಷಾ, ಮಂಜುಳ, ನಾಗಲಿಂಗಮ್ಮ, ಅನ್ವರ್ ಮಾಸ್ಟರ್, ಎಚ್ ಎಸ್ ಸೈಯದ್, ದೊಡ್ಡರಂಗಪ್ಪ, ಫರೀದ್ ಖಾನ್, ದೇವರಾಜ್, ಯುವ ಕಾಂಗ್ರೆಸ್ ತಾಲೂಕ ಅಧ್ಯಕ್ಷರಾದ ಶಿವಕುಮಾರ್ ಸ್ವಾಮಿ, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.