ಚಳ್ಳಕೆರೆ : ಚಳ್ಳಕೆರೆ ನಗರದ ಅಭಿಷೇಕ್ ನಗರ ಸಮೀಪದ ರೈಲ್ವೆ ಟ್ರಾಕ್ ಮೇಲೆ ನೇರಲಗುಂಟೆ ಗ್ರಾಮದ ಶಶಾಂಕ್ (18)ಸೋಮವಾರ ಬೆಳಗ್ಗೆ ಯುವಕನ ಮೃತ ದೇಹ ಪತ್ತೆಯಾಗಿದೆ ಸ್ಥಳಕ್ಕೆ ರೈಲ್ವೇ ಹಾಗೂ ಸ್ಥಳಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಇದು ಕೊಲೆಯೋ ಆತ್ಮಹತ್ಯೆಯೋ ಎಂಬ ಅನುಮಾನಕ್ಕೆ ಎಡೆ ಮಾಡಿದ್ದು ತನಿಖೆಯ ನಂತರವೇ ಬಯಲಾಗಬೇಕಿದೆ.
ತಾಲೂಕಿನ ನೇರಕಲಗುಂಟೆ ವಿದ್ಯಾರ್ಥಿ ಶಶಾಂಕ್ ನಗರದ ಸರಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಈ ಘಟನೆ ಭಾನುವಾರ ತಡ ರಾತ್ರಿ ನಡೆದಿದ್ದು ಸ್ಥಳೀಯರು ಯುವಕನನ್ನು ಕೊಲೆ ಮಾಡಿ ರೈಲ್ವೆ ಟ್ರಾಕ್ ಗೆ ಹಾಕಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಯುವಕನ ದೇಹವು ಸಂಪೂರ್ಣವಾಗಿ ಚಿದ್ರ ಚಿದ್ರವಾಗಿದ್ದು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಿದ್ದಾರೆ ಎನ್ನಲಾಗಿದೆ.