ಚಳ್ಳಕೆರೆ : ತಾಲೂಕಿನ ಕರೀಕೆರೆ ಗ್ರಾಮದಲ್ಲಿ ನಡೆದ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿಯ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಭಾವಚಿತ್ರಕ್ಕೆ ಪುಷ್ಪ ನಮನ ಮತ್ತು ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ನಮ್ಮ ಚಳ್ಳಕೆರೆ ಕ್ಷೇತ್ರ ಬುಡಕಟ್ಟು ಸಂಪ್ರಾದಯಗಳ ನೆಲೆಬಿಡು ಇಂತಹ ನೆಲದಲ್ಲಿ ಧಾರ್ಮಿಕ ಪರಂಪರೆಗಳು ಇನ್ನು ಜೀವಂತವಾಗಿರುವುದು ನಮ್ಮ ಪುಣ್ಯ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ಆರಾಧಿಸಿಕೊಂಡು ಬಂದ ಸಂಪ್ರಾದಾಯಗಳನ್ನು ಮುಂದುವರೆಸಿಕೊAಡು ಹೋಗೊಣ ಎಂದರು.
ಈ ಸಂದರ್ಭದಲ್ಲಿ ಬೋವಿ ಸಮುದಾಯದ ತಾಲೂಕ ಅಧ್ಯಕ್ಷ ಎಚ್.ಆಂಜನೇಯ, ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್ ರೆಡ್ಡಿ, ಸದಸ್ಯರುಗಳಾದ ರಾಜಪ್ಪ, ಮಂಜಣ್ಣ ಹಾಗೂ ಮುಖಂಡರುಗಳಾದ ವೆಂಕಟಪ್ಪ, ಜಗದೀಶ್, ಆಂಜನೇಯ ಪಿ, ಕೃಷ್ಣಪ್ಪ, ಭೀಮಣ್ಣ, ಕಾಂತರಾಜ್, ತಿಮ್ಮಣ್ಣ, ಕೃಷ್ಣಪ್ಪ, ಹನುಮಂತಪ್ಪ, ಪೆದ್ದಣ್ಣ, ವೀರೇಶ್, ಕರಿಬಸವ, ಮನೋಹರ್, ಸೈಯದ್, ಹನುಮಂತಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ ಸ್ವಾಮೀ, ಮಂಜುನಾಥ್, ಮುಖಂಡರು, ಕಾರ್ಯಕರ್ತರು ಮತ್ತು ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.