ಚಳ್ಳಕೆರೆ : ಬಿಜೆಪಿಯಿಂದ ಸೆರ್ಪಡೆಯಾಗಿರುವ ಮಾಜಿ ಶಾಸಕ ಬಸವರಾಜ್ ಮಂಡಿಮಠ ಹಾಗೂ ಅವರ ಅಭಿಮಾನಿ ಬಳಗದ ಆಗಮನದಿಂದ ಜೆಡಿಎಸ್ ಪಕ್ಷಕ್ಕೆ ಆನೆ ಬಲ ಬಂದAತಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯಶೋದರ ಹೇಳಿದರು.
ನಗರದ ಬೆಂಗಳೂರು ರಸ್ತೆಯ ಮಂಡಿಮಠ್ ಮಿಲ್ ಆವರಣದಲ್ಲಿ ಬಿಜೆಪಿ ಪಕ್ಷ ತೊರೆದು ಬೆಂಬಲಿಗರೊAದಿಗೆ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈಡೀ ಚಳ್ಳಕೆರೆ ಕ್ಷೇತ್ರದಲ್ಲಿ ಹೊಸ ರಾಜಾಕೀಯ ಸ್ವಾಥ್ಯ ಬರೆಯುವ ಸುದೀನ ಈ ದಿನವಾಗಿದೆ, ಕಳೆದ ಹಲವು ವರ್ಷಗಳ ಕಾಲ ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಬಸವರಾಜ್ ಜೆಡಿಎಸ್ ಪಕ್ಷದ ಸಿದ್ದಾಂತಗಳನ್ನು ಮೆಚ್ಚಿ ಇಂದು ಪಕ್ಷಕ್ಕೆ ಸೆರ್ಪಡೆಯಾಗಿರುವುದು ಸಂತಸ ತಂದಿದೆ, ಹಿರಿಯ ಮುತ್ಸದಿ ನಾಯಕರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಲಾಗವುದು, ಮುಖ್ಯಮಂತ್ರಿ ಅವಧಿಯಲ್ಲಿ ರೈತರ ಸಾಲಮನ್ನ. ಬಡವರಿಗೆ, ಅಶಕ್ತರಿಗೆ ಸೇರಿದಂತೆ ರೈತರಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಉತ್ತಮ ಆಡಳಿತ ನಡೆಸಿದ್ದಾರೆ. ಇಂದಿನ ಎರಡು ರಾಷ್ಟ್ರೀಯ ಪಕ್ಷಗಳು ಭ್ರಷ್ಟಚಾರದÀಲ್ಲಿ ತೊಡಗಿದ್ದು ಈ ಬಾರಿ ವಿಧಾನ ಸಭೆ ಚುನಾವಣೆಯಲ್ಲೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಚಳ್ಳಕೆರೆ ಕ್ಷೇತ್ರದಲ್ಲಿ ರವೀಶ್‌ಕುಮಾರ್ ಶಾಸಕರಾಗಲಿದ್ದಾರೆ ಎಂದು ತಮ್ಮ ಹಿಂಗಿತ ಹಂಚಿಕೊAಡರು.
ಇನ್ನೂ ಬಿಜೆಪಿ ಮಾಜಿ ಶಾಸಕ ಬಸವರಾಜ್ ಮಂಡಿಮಠ್ ಜೆಡಿಎಸ್ ಪಕ್ಷಕ್ಕೆ ಸೇಪರ್ಡೆಯಾಗಿ ನಂತರ ಮಾತನಾಡಿದ ಅವರು, ಚಳ್ಳಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಇವರನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಬೇಕು, ಕಾರ್ಯಕರ್ತರಲ್ಲಿ ಗೊಂದಲ ಇರುಬಹುದು ರವೀಶ್ ಗೆದ್ದ ಮೆಲೆ ಬೆಂಗಳೂರು, ದೆಹಲಿ ಈಗೇ ಕ್ಷೇತ್ರ ಬಿಡಬಹುದು ಎಂಬ ವಿರೋಧ ಪಕ್ಷದವರ ಮಾತು ಕೇಳಬೇಡಿ ನಿಮಗೆ ನಾನು ಇದ್ದೆನೆ ನಿಮ್ಮ ಕಷ್ಟದಲ್ಲಿ ಬಾಗಿಯಾಗುತ್ತೆನೆ, ಚುನಾವಣೆಗೆ ಮೊದಲೆ ನಾವು ಸಂಭ್ರಮಿಸುವುದು ಬೇಡ, ರವೀಶ್ ಕುಮಾರ್ ಗೆಲುವಿಗೆ ಎಲ್ಲಾರೂ ಶ್ರಮಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಶ್ ಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಬಸವರಾಜ್ ಮಂಡಿಮಠ್ ಕಳೆದ 30 ವರ್ಷಗಳಿಂದ ನೇರನುಡಿಯಿಂದ ಸ್ವಚ್ಚ ರಾಜಕೀಯ ಮಾಡಿದ ಇವರು ಜೆಡಿಎಸ್ ಪಕ್ಷಕ್ಕೆ ಸೆರ್ಪಡೆಯಾಗಿರುವುದು ಕ್ಷೇತ್ರದಲ್ಲಿ ಜೆಡಿಎಸ್‌ಗೆ ಆನೆ ಬಲಬಂದಾAಗಿದೆ ಇಂದರಿAದ ಗೆಲವು ನಿಶ್ಚಿತ, ಕ್ಷೇತ್ರದಲ್ಲಿ ಜೆಡಿಎಸ್ ಪರ್ವ ಆರಂಭವಾಗಿದೆ. ಇದು ಮುಂದಿನ ವಿಧಾನಸಭೆ ಚುನಾವಣೆ ದಿಕ್ಸೂಚಿಯಾಗಲಿದೆ. ಕ್ಷೇತ್ರದಲ್ಲಿ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲುಕಂಡಿದ್ದೆವೆ, ಈ ಬಾರಿ ಕ್ಷೇತ್ರದಲ್ಲಿ ಸಮರ್ಥವಾಗಿ ಪಕ್ಷವನ್ನು ಸಂಘಟಿಸೊಣ ಎಂದರು.
ಬಾಕ್ಸ್ ಮಾಡಿ :
ಈಡೀ ರಾಜ್ಯದಲ್ಲಿ ಎರಡು ರಾಷ್ಟಿçÃಯ ಪಕ್ಷಗಳ ಬಿಜೆಪಿ 40, ಕಾಂಗ್ರೆಸ್ ಪಕ್ಷದ 50 % ಕಮೀಷನ್ ಹಾವಳಿಗೆ ರಾಜ್ಯದಲ್ಲಿ ಜನರು ಬೇಸತ್ತು, ಪ್ರಾದೇಶಿಕ ಪಕ್ಷದ ಕಡೆ ಮುಖಮಾಡಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಜಯಗಳಿಸಿದರೆ ಮಾಜಿ ಶಾಸಕ ಬಸವರಾಜು ಮಂಡಿಮಠ್ ಗೆದ್ದಂತೆ.—ಎA.ರವೀಶ್ ಕುಮಾರ್, ಚಳ್ಳಕೆರೆ ಕ್ಷೇತ್ರದ ಅಭ್ಯರ್ಥಿ
ಬಾಕ್ಸ್ ಮಾಡಿ :
ಚಳ್ಳಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಇವರನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಬೇಕು, ಕಾರ್ಯಕರ್ತರಲ್ಲಿ ಗೊಂದಲ ಇರುಬಹುದು ರವೀಶ್ ಗೆದ್ದಮೇಲೆ ಬೆಂಗಳೂರು, ದೆಹಲಿ ಈಗೇ ಕ್ಷೇತ್ರ ಬಿಡಬಹುದು ಎಂಬ ವಿರೋಧ ಪಕ್ಷದವರ ಮಾತು ಕೇಳಬೇಡಿ ನಿಮಗೆ ನಾನು ಇದ್ದೆನೆ ನಿಮ್ಮ ಕಷ್ಟದಲ್ಲಿ ಬಾಗಿಯಾಗುತ್ತೆನೆ, ರವೀಶ್ ಕುಮಾರ್ ಗೆಲುವಿಗೆ ಎಲ್ಲಾರೂ ಶ್ರಮಿಸಬೇಕು.—ಮಾಜಿ ಶಾಸಕ ಬಸವರಾಜ್ ಮಂಡಿಮಠ್
ಇದೇ ಸಂಧರ್ಭದಲ್ಲಿ ಜೆಡಿಎಸ್ ಕಾರ್ತಾಧ್ಯಕ್ಷ ಆನಂದಪ್ಪ. ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾವಿ, ನಗರಸಭೆ ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿದರು. ಸಭೆಯಲ್ಲಿ ನಗರಸಭೆ ಸದಸ್ಯರಾದ ಶ್ರೀನಿವಾಸ್, ವಿ.ವೈ.ಪ್ರಮೋದ್, ನಾಗವೇಣಿ, ಕವಿತಾ ನಾಯಕಿ, ವಿಶುಕುಮಾರ್, ವಿಜಯ್ ಕುಮಾರ್, ತಿಪ್ಪೆಸ್ವಾಮಿ, ರಂಗಸ್ವಾಮಿ, ಭೂಲಿಂಗಪ್ಪ, ಬೀರಲಿಂಗಪ್ಪ ಚಂದ್ರಣ್ಣ, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡಗೊಂಡರು