ಚಳ್ಳಕೆರೆ : ಮನುಷ್ಯನು ಇಂದು ಮಾನಸಿಕ ಸಮಾತೋಲನ ಕಾಪಾಡಿಕೊಳ್ಳವ ನಿಟ್ಟಿನಲ್ಲಿ ದಿನ ನಿತ್ಯದ ಯೋಗದ ಬದುಕು ಸಾರ್ಥಕ ಇದರಿಂದ ರೋಗಗಳು ದೂರವಾಗಲಿವೆ ಮತ್ತು ಮುಪ್ಪಿನ ವರ್ಷಗಳು ದೂರ ಸರಿಯಲಿವೆ ಎಂದು ನರಹರಿ ಗುರುಪೀಠದ ಶ್ರೀ ರಾಜಾರಾಮ್ ಸ್ವಾಮಿಜೀ ಹೇಳಿದ್ದಾರೆ.
ಅವರು ನಗರದ ವಾಸವಿ ಮಹಲ್ನಲ್ಲಿ ಶ್ರೀಪÀತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಥಸಪ್ತಮಿ ಪ್ರಯುಕ್ತ ಆಮ್ಮಿಕೊಂಡಿದ್ದ ಅರುಣಹೋಮ, 108 ಸೂರ್ಯ ನಮಸ್ಕಾರ, ಸತ್ಸಂಘ, ಹಾಗೂ ಇಂದಿನ ಬೆಳೆಗ್ಗೆಯಿಂದ 6 ಗಂಟೆಯಿAದ ಸಂಜೆ 6ರವರೆಗೆ ಅಖಂಡ ಸೂರ್ಯ ನಮಸ್ಕಾರ ಯೋಗದ ಶಿಬಿರವನ್ನು ಉದ್ಟಾಟಿಸಿ ಮಾತನಾಡಿದ ಅವರು ಮನುಷ್ಯ ಒತ್ತಡರಹಿತ ಜೀವನ ವೃತ್ತಿಯಲ್ಲಿ ನಾವೀನ್ಯತೆ ಮತ್ತು ಆಧ್ಯಾತ್ಮಿಕತೆಗಳು ಯೋಗದಿಂದ ಲಭಿಸುತ್ತವೆ. ತಾಲ್ಲೂಕಿನಾದ್ಯಂತ ನಮ್ಮ ಹಲವು ಶಾಖೆಗಳಲ್ಲಿ ಇಂದು ಯೋಗದ ಅಭ್ಯಾಸ ನಡುಸುವ ಮೂಲಕ ದೇಶದ ಪಾರಂಪರಿಕ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡಲಾಗುತ್ತದೆ, ಯೋಗದಿಂದ ಮನುಷ್ಯನ ಆಯಸ್ಸು ವೃದ್ದಿಸುವುದಲ್ಲದೆ ಆರೋಗ್ಯವಂತವಾಗಿರಬಹುದು ಎಂದು ತಿಳಿಸಿದರು.
ಯೋಗ ಬಂಧು ಮನೋಹರ ಅಣ್ಣಾ ಮಾತನಾಡಿ, ಯೋಗ ಭಾರತದ ಆಧ್ಯಾತ್ಮಿಕ ಶಿಸ್ತು” ಇದು ಸರ್ವ ರೋಗಗಳಿಗೂ ರಾಮಬಾಣ ಇದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಯೋಗದಿಂದ ಅನೇಕ ರೋಗಗಳನ್ನು ಮತ್ತು ಜೀವನದ ತೊಳಲಾಟವನ್ನು ದೂರಮಾಡುವುದು, ದಿನ ನಿತ್ಯಯೋಗ ಮಾಡುವುದರಿಂದ ನಮ್ಮ ಮನಸ್ಸಿನಲ್ಲಿರುವ ದುಖಃ ದುಮನ್ನಗಳನ್ನು ದೂರಮಾಡಿ ಸಂತೋಷದಿAದ ಇರುವಂತೆ ಯೋಗದಿಂದ ಪಡೆಯಬಹುದು, ಸಮಾಜದ ಅವಶ್ಯಕತೆಗಳಾದ ಆರೋಗ್ಯ, ಮಕ್ಕಳಿಗೆ ದೈಹಿಕ ಶಿಕ್ಷಣ, ಯುವಕರಿಗೆ ಮಾರ್ಗದರ್ಶನ ಸೇರಿದಂತೆ ಅನೇಕ ಉಪಯೋಗಗಳನ್ನು ಪಡೆಯಬಹುದಾಗಿದೆ ಎಂದರು.
ಈ ಸಂಧರ್ಭದಲ್ಲಿ ಪುರೋಹಿತರಾದ ಗೌತಮ್, ಸಂಚಾಲಕ ಮಹೇಶ್, ಪ್ರಚಾರ ಸಮಿತಿ ತಿಪ್ಪೆಸ್ವಾಮಿ, ಶಿವನಾಗಪ್ಪ, ಜರಾಂ, ಬಾಬಣ್ಣ, ಗಂಗಾಧರ್, ಬಾಬುರೆಡ್ಡಿ, ತಿಮ್ಮಣ್ಣ, ಈಗೇ 300 ಜನ ಯೋಗ ಬಂಧುಗಳು ಆಗಮಿಸಿದ್ದರು.
ಪೋಟೋ, 1. ಚಳ್ಳಕೆರೆ ನಗರದ ವಾಸವಿ ಮಹಲ್ ನಲ್ಲಿ ಆಮ್ಮಿಕೊಂಡಿದ್ದ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಥಸಪ್ತಮಿ ಕಾರ್ಯಕ್ರಮದಲ್ಲಿ ಯೋಗ ಬಂಧುಗಳು ಬಾಗಿಯಾಗಿದ್ದರು.