ಚಿತ್ರದುರ್ಗ: ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಗ್ರಾಜ್ಯೂಯೇಷನ್ ಡೇ-2023 ಕಾರ್ಯಕ್ರಮವನ್ನು ಶ್ರೀಮರುಘಾಮಠದ ಅನುಭವಮಂಟಪದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಇಸ್ರೋದ ಯು.ಆರ್.ರಾವ್ ಸ್ಯಾಟಲೈಟ್ ಸೆಂಟರ್‌ನ ಗ್ರೂಪ್ ಡೈರೆಕ್ಟರ್ ಶ್ರೀ ರಮೇಶ್ ವಿ ನಾಯ್ಡು ಮಾತನಾಡಿ, ನಾವುಗಳು ಜೀವನದ ಪ್ರತಿ ಹಂತದಲ್ಲೂ ಕಲಿಯುತ್ತಾ ಬರುತ್ತೇವೆ. ಜೀವನವಿರುವವರೆಗೂ ಕಲಿಕೆ ಇದ್ದೇ ಇರುತ್ತದೆ, ಕಲಿಕೆ ನಿರಂತರ. ನಮ್ಮ ಪ್ರತಿ ಚಿಕ್ಕ-ಪುಟ್ಟ ಅನುಭವಗಳು ನಮಗೆ ಪಾಠವನ್ನು ಹೇಳಿಕೊಡುತ್ತವೆ. ನಮ್ಮ ಸ್ವಂತ ಮತ್ತು ಬೇರೆಯವರ ಅನುಭವಗಳಿಂದ ಕಲಿಯಬೇಕು. ಓದಿದ ಮಾತ್ರಕ್ಕೆ ವಿದ್ಯಾವಂತರಾಗುವುದಿಲ್ಲ. ಜೀವನದÀ ಅನುಭವ ಕಂಡಾಗ ನಿಜವಾದ ವಿದ್ಯಾವಂತರಾಗುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಶ್ರೀ ವಿ ಎಸ್ ವಸ್ತçದ್ ಮಾತನಾಡಿ, ವಿದ್ಯಾರ್ಥಿಗಳಿಗೆ ತರಬೇತಿ ತುಂಬ ಮುಖ್ಯ ನಾವು ಹಿಂದೆ ಅಲೆಕ್ಸಾಂಡರ್‌ನ ಚಿಕ್ಕ ಸೈನ್ಯದ ಮುಂದೆ ಮೊದಲು ಸೋಲಲು ಮುಖ್ಯ ಕಾರಣ ತರಬೇತಿ ಕೊರತೆ. ಹೆಚ್ಚು ತರಬೇತಿ ಪಡೆದವನು ಸಮಸ್ಯೆಗಳನ್ನು ನಿರ್ಭೀತವಾಗಿ ನಿಭಾಯಿಸಬಲ್ಲ. ಹೀಗಾಗಿ ವಿದ್ಯಾರ್ಥಿಗಳು ತರಬೇತಿಯ ಕಡೆ ಗಮನ ಹರಿಸಬೇಕು. ಸವಾಲುಗಳನ್ನು ಎದುರಿಸಬೇಕು ಎಂದು ನುಡಿದರು.
ಪ್ರಾಂಶುಪಾಲರಾದ ಡಾ.ಭರತ್ ಪಿ.ಬಿ. ಮಾತನಾಡಿದರು, ಸಮಾರಂಭದಲ್ಲಿ ಡಾ.ಬಿ.ಜಿ.ಕುಮಾರಸ್ವಾಮಿ, ಡಾ. ಎನ್ ಜಗನ್ನಾಥ್, ಪ್ರೊ.ಪೋರಾಳ್ ನಾಗರಾಜ್, ಡಾ.ಸಿದ್ಧೇಶ್ ಕೆ.ಬಿ., ಡಾ.ಶ್ರೀಶೈಲ ಜೆ.ಎಂ., ಡಾ.ಲೋಕೇಶ್ ಹೆಚ್. ಜೆ. ಡಾ.ನಿರಂಜನ್ ಈ, ಪ್ರೊ.ಶಶಿಧರ ಎ.ಪಿ., ಸಂಚಾಲಕ ಪ್ರೊ.ಲವಕುಮಾರ್ ಟಿ.ಬಿ. ಉಪಸ್ಥಿತರಿದ್ದರು.
ಪ್ರೊ.ಪೋರಾಳ್ ನಾಗರಾಜ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಅನುಷಾ ವಿ ನಿರೂಪಿಸಿ, ಪ್ರೊ.ಚೇತನ್ ಎಸ್ ಸ್ವಾಗತಿಸಿ, ಅನನ್ಯಾ ಮೋನಿಕಾ ವಿ ಕೆ ಪ್ರಾರ್ಥಿಸಿ, ಪ್ರೊ.ಅಪೂರ್ವ ಜಿ.ಓ. ವಂದಿಸಿದರು.
ಸಮಾರAಭದಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪದಕ ನೀಡಿ ಗೌರವಿಸಲಾಯಿತು. ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆದ 260 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

About The Author

Namma Challakere Local News
error: Content is protected !!