ಚಳ್ಳಕೆರೆ : ಪೊಲೀಸರ ಸೋಗಿನಲ್ಲಿ ಕಳ್ಳತನ ಮಾಡಿದ ಕದಿಮರು ಮಹಿಳೆ ಸರಕದ್ದು ಬದಲಾಗಿ ಕಲ್ಲು ನೀಡಿರುವ ಪ್ರಕರಣ ಚಳ್ಳಕೆರೆ ನಗರದಲ್ಲಿ ನಡೆದಿದೆ.
ಹೌದು ಚಳ್ಳಕೆರೆ ತಾಲೂಕು ಈಡೀ ಜಿಲ್ಲೆಯಲ್ಲಿ ದೊಡ್ಡದಾದ ವಿಸ್ತೀರ್ಣ ಹೊಂದಿ ತನ್ನ ಭೌಗೋಳಿಕ ವ್ಯಾಪ್ತಿ ವಿಸ್ತರಿಸಿಕೊಂಡಿದೆ ಆದರೆ ಅದಕ್ಕೆ ತಕ್ಕಂತೆ ವ್ಯವಸ್ಥೆ ಕಲ್ಪಿಸಬೇಕಾದ ಸರಕಾರಗಳು ಮಾತ್ರ ವಿಫಲವಾಗಿರುವುದು ಒಂದೆಡೆಯಾದರೆ ಸಿಬ್ಬಂದಿ ಕೊರೆತೆ ಎಂಬ ನಿಲುವು ತಾಳುವು ಪೊಲೀಸ್ ಇಲಾಖೆ ಮತ್ತೊಂಡೆ ಈಗೇ ಸಾರ್ವನಿಕರು ನಿತ್ಯವೂ ತಮ್ಮ ಅಳಲು ತೋಡಿಕೋಳ್ಳುತ್ತಿದ್ದಾರೆ.
ನಗರದಲ್ಲಿ ಹೇರಳವಾಗಿ ಕಳ್ಳತನವಾಗುತ್ತಿದ್ದರು ಕೂಡ ಕಳ್ಳತನಕ್ಕೆ ಬ್ರೇಕ್ ಹಾಕುವಲ್ಲಿ ಪೊಲಿಸ್ ಇಲಾಕೆ ವಿಫಲಾವಾಗಿದೆ. ನಿತ್ಯವೂ ಗ್ರಾಮೀಣ ಭಾಗದ ಸಾರ್ವಜನಿಕರು ಕಳ್ಳತನದ ಬಲೆಗೆ ಸಿಕ್ಕಿಹಾಕೊಳ್ಳುವುದು ಮಾಮೂಲಾಗಿದೆ.
ತಾಲೂಕಿನ ಗೋಪನಹಳ್ಳಿ ಗ್ರಾಮದ ಗೌರಮ್ಮ(65) ನಗರದ ಬೆಂಗಳೂರು ರಸ್ತೆಯ ಸಹಾಯಕ ಪಶು ನಿರ್ದೇಶಕ ಕಚೇರಿ ಮುಂದೆ ನಡೆದುಕೊಂಡು ಬರವಾಗ ಸುಮಾರು ಬೆಳಗ್ಗೆ 10 ಗಂಟೆ ಸಮಯದಲ್ಲಿ ಇವರ ಬಳಿ ಬಂದ ಅಪರಿಚಿತರಿಬ್ಬರು ತಾವು ಪೊಲೀಸರು ಎಂದು ನಂಬಿಸಿದ್ದಾರೆ.
ಮೈಮೇಲೆ ಒಡವೆಗಳನ್ನು ಹಾಕಿಕೊಳ್ಳಬೇಡಿ ಮೊದಲು ಬಿಚ್ಚಿ ಸೆರಗಿನಲ್ಲಿ ಕಟ್ಟಕೊಂಡು ಮನೆಗೆ ಹೋಗಿ ಇಲ್ಲವಾದರೆ ಕಳ್ಳತನವಾದೀತು ಎಂದು ಭಯ ಹುಟ್ಟಿಸಿದ್ದಾರೆ.
ಅಪರಿಚಿತರ ಜತೆಯಲ್ಲಿದ್ದ ವ್ಯಕ್ತಿಯೋರ್ವ ಮೈ ಮೇಲಿನ ಸರವನ್ನು ನೀಡಿದ ನಾಟಕವಾಡಿದ್ದಾನೆ ಅದನ್ನು ನೋಡಿದ ಮಹಿಳೆ ನಂಬಿ ಮೈಮೇಲಿನ ಸುಮಾರು 1.5ಲಕ್ಷ ರೂ ಮೊತ್ತದ ಸರ ಮತ್ತು ಕೈ ಉಂಗುರವನ್ನು ಬಿಚ್ಚಿಕೊಟ್ಟಿದ್ದಾಳೆ, ಅಪರಿಚತರು ಒಡೆವೆಗಳ ಬದಲಾಗಿ ಕಲ್ಲುಗಳನ್ನು ಸುತ್ತಿ ಸೀರೆಯ ಸೆರಗಿಗೆ ಕಟ್ಟಿ ಇಲ್ಲಿ ಬಿಚ್ಚಬೇಡಿ ಮನೆಗೆ ಹೋಗಿ ಬಿಚ್ಚಿ ಎಂದು ಹೇಳಿ ಪರಾರಿಯಾಗಿದ್ದಾರೆ.
ಮಹಿಳೆ ಬಸ್ ನಿಲ್ದಾಣದಲ್ಲಿ ಗಂಟು ಬಿಚ್ಚಿನೋಡಿದಾಗ ಅದರಲ್ಲಿ ಆಭರಣಗಳ ಬದಲು ಕಲ್ಲು ಇದ್ದದ್ದು ಕಂಡು ಗಾಬರಿಗೊಂಡಿದ್ದಾರೆ. ಬಳಿಕ ಮಕ್ಕಳಿಗೆ ಕರೆ ಮಾಡಿ ಕರೆಸಿಕೊಂಡು ಠಾಣೆಗೆ ದೂರು ಸಲ್ಲಿಸಿದ್ದಾರೆ.
ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸಹಾಯಕ ಪಶು ಇಲಾಖೆಗೆ ಬಳಿ ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.