ಚಳ್ಳಕೆರೆ : ಇಂದಿರಾಗಾAಧಿ ವಸತಿ ಶಾಲೆಗಳು ಬಡಮಕ್ಕಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದ್ದು ವಿದ್ಯಾರ್ಥಿಗಳು ಶಿಕ್ಷಕರು ಭೋದಿಸಿದ ಪಠ್ಯವನ್ನು ಗ್ರಹಿಸಿಕೊಂಡು ಉತ್ತಮ ಕಲಿಗೆಯಲ್ಲಿ ತೊಡಗಿ ಎಂದು ಜಿಪಂ ಸಿಇಒ ದಿವಾಕರ್ ಹೇಳಿದ್ದಾರೆ.
ತಾಲೂಕಿನ ಎನ್.ಮಹದೇವಪುರ ಗ್ರಾಪಂ ವ್ಯಾಪ್ತಿಯ ಇಂದಿರಾಗಾAಧಿ ವಸತಿ ಶಾಲೆಗೆ ಜಿಪಂ ಸಿಇಒ ದಿವಾಕರ್ ಭೇಟಿ ನೀಡಿ ಶುಚಿತ್ವ ಕಾಪಾಡುವಂತೆ ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ನೀಡುವಂತೆ ಸೂಚನೆ ನೀಡಿದರು.
ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಾಡೆಯಾಗಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿತರುವಂತೆ ವಿದ್ಯಾರ್ಥಿಗಳೊಂದಿಗೆ ಸಂವಾದ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಹಾಲಿಸಿದರು.
ಗುಣ ಮಟ್ಟದ ಆಹಾರ ಪದಾರ್ಥಗಳನ್ನುಬಳಕೆ ಮಾಡಿಕೊಂಡುಗುಣ ಮಟ್ಟದ ಆಹಾರ ನೀಡಬೇಕು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳದಂತೆ ಶುಚಿತ್ವವುಳ್ಳ ಆಹಾರ ಪದಾರ್ಥಗಳನ್ನೇ ಮಕ್ಕಳಿಗೆ ನೀಡಿ ಸ್ವಚ್ಛತೆಗೆ ಮಹತ್ವ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ಹೊನ್ನಯ್ಯ, ವಸತಿ ಶಾಲೆಯ ಮುಖ್ಯ ಶಿಕ್ಷರು ಇತರರಿದ್ದರು.