ನಾಯಕನಹಟ್ಟಿ:: ಮಕ್ಕಳಿಗೋಸ್ಕರ ಸರ್ಕಾರ ಕಲಿಕಾ ಹಬ್ಬ ಆಯೋಜಿಸಿರುವುದು ಸಂತಸ ತಂದಿದೆ ಎಂದು ಪಿ ಎಂ ಪೂರ್ಣ ಓಬಯ್ಯ ಹೇಳಿದ್ದಾರೆ.
ಅವರು ಬುಧವಾರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಲಿಕಾ ಹಬ್ಬ ಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ. ವಿದ್ಯಾರ್ಥಿಗಳು ಹೆತ್ತವರಿಗೆ ಕೀರ್ತಿ ತರುವ ಗುರಿ ಹೊಂದಬೇಕು ಪರೀಕ್ಷಾ ದಿನಗಳು ಹತ್ತಿರವಿದ್ದು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳ ಪಡೆದು ಗ್ರಾಮಕ್ಕೆ ಕೀರ್ತಿ ತರುವ ಕೆಲಸವಾಗಬೇಕು ಎಂದರು.
ಇದೆ ವೇಳೆ ಮುಖ್ಯೋಪಾಧ್ಯಾಯ ಬಿ ವಿ ನಾಥ್ ಮಾತನಾಡಿ ಕೋವಿಡ್ಗೂ ಮೊದಲು ಜಾರಿಯಲ್ಲಿದ್ದ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಮಾರ್ಪಾಡು ಮಾಡಿ ಕಲಿಕಾ ಹಬ್ಬವನ್ನು ಜಾರಿಗೆ ತರಲಾಗಿದೆ ಇದರಲ್ಲಿ ಶಿಕ್ಷಣದ ಮಹತ್ವ ಸರ್ಕಾರದ ಶೈಕ್ಷಣಿಕ ಯೋಜನೆಗಳ ಬಗ್ಗೆ ಪೋಷಕರು ಮತ್ತು ಸಮುದಾಯಕ್ಕೆ ತಿಳಿಸಿ ಕೊಡುವ ನಿಟ್ಟಿನಲ್ಲಿ ಹೆಚ್ಚು ಹೊತ್ತು ನೀಡಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ
ಬಿ ವಿ ನಾಥ್ ತಿಳಿಸಿದರು.
ನಂತರ ನಲಗೇತನಹಟ್ಡಿ ಗಾಯಕ ಕೆ ಟಿ ಮುತ್ತುರಾಜ್ ಕಲಿಕಾ ಹಬ್ಬವನ್ನು ಕುರಿತು ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡಿದರು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಪಿ ಎಂ ಮುತ್ತಯ್ಯ, ಗ್ರಾಮದ ಮುಖಂಡರಾದ ಎಸ್ ಬಿ ಸಣ್ಣಬೋರಯ್ಯ, ನಿಂಗರಾಜ್, ಎಮ್ ಬಿ ಸಣ್ಣ ಬೋರಯ್ಯ
ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ, ಬಿ ವಿ ನಾಥ್, , ದೈಹಿಕ ಶಿಕ್ಷಕ ಎನ್ ತಿಪ್ಪೇಸ್ವಾಮಿ, ಸಹ ಶಿಕ್ಷಕರಾದ, ಬಿ ಉಮೇಶ್, ಎ ಎನ್ ಹರೀಶ್, ಅಬ್ದುಲ್ ಮುಜೀಬ್ ಸಂಜೀವಿನಿ, ಜಯಚಿತ್ರ, ನಿಂಗರಾಜ್ ಹಾಗೂ ಕಾರ್ಯಕ್ರಮದ ಸಂಪನ್ಮೂಲ ಶಿಕ್ಷಕರಾಗಿ, ಆರ್ ಟಿ ಸತೀಶ್ ಬಾಬು, ಕೃಷ್ಣಮೂರ್ತಿ, ಭೀಮಣ್ಣ, ಸತೀಶ್ ಕಿವಡಿ ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಕೆ ಜಗನ್ನಾಥ್.ನಲಗೇತನಹಟ್ಟಿ ಗಾಯಕ ಕೆ ಟಿ ಮುತ್ತುರಾಜ್ , ಅತಿಥಿ ಕನ್ನಡ ಶಿಕ್ಷಕಿ ಕುಮಾರಿ ಲಾವಣ್ಯ, ಸೇರಿದಂತೆ ಕ್ಲಸ್ಟರ್ ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಶಿಕ್ಷಕಿಯರು ಉಪಸ್ಥಿತರಿದ್ದರು