ನಾಯಕನಹಟ್ಟಿ:: ಬಹಳ ಹಿಂದುಳಿದ ಪ್ರದೇಶ ಬರದ ನಾಡು ಮೊಳಕಾಲ್ಮೂರು ಕ್ಷೇತ್ರದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಎನ್‌ವೈ.ಸುಜಯ್ ಹೇಳಿದ್ದಾರೆ.
ಅವರು ಬೆಳಗ್ಗೆಯಿಂದಲೇ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಾದ ಹನುಮಂತನಹಳ್ಳಿ, ಕೊಂಡ್ಲಹಳ್ಳಿ,ಅಜ್ಜನಹಳ್ಳಿ, ತಳಕು ನಾಯಕನಹಟ್ಟಿ ಮನಮೈನಹಟ್ಟಿ ಹಳ್ಳಿಗಳಲ್ಲಿ ಮಿಂಚಿನ ಸಂಚಾರ ಮಾಡಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ನಮ್ಮ ಕುಟುಂಬದವರು ನಮ್ಮ ತಂದೆ ಎನ್‌ವೈ ಹನುಮಂತಪ್ಪನವರು ಲೋಕಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು ನಮ್ಮ ಚಿಕ್ಕಪ್ಪ ಎನ್‌ವೈ.ಗೋಪಾಲಕೃಷ್ಣ ರವರು ಮೊಳಕಾಲ್ಮುರು ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ ಕ್ಷೇತ್ರದ ಜನತೆ ಒಡನಾಟ ನಮ್ಮ ಕುಟುಂಬದ ಮೇಲೆ ಹೆಚ್ಚಾಗಿದೆ ಮತ್ತು ಕ್ಷೇತ್ರದ ಜನತೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರದಾದ್ಯಂತ ಆಗಿವೆ ಇದರ ಬೆನ್ನಲ್ಲಿ ಕ್ಷೇತ್ರದ ಜನತೆ ನಮ್ಮ ನಮ್ಮ ಕುಟುಂಬದ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸ ಆದ್ದರಿಂದ 2023ರ ಸಾವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರದ ಜನತೆ ಅಪೇಕ್ಷೆ ಪಡುತ್ತಿರುವ ಕಾರಣ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿ ಸ್ಪರ್ಧಿಸಲು ಇಚ್ಛೇಯಿಸುತ್ತೇವೆ ಎಂದು ಎನ್ ವೈ ಸುಜಯ್ ಎಂದರು
ಈ ಸಂದರ್ಭದಲ್ಲಿ ಎನ್‌ವೈ.ಚೇತು, ರಾಂಪುರ ಗ್ರಾಮ ಪಂಚಾಯತಿ ಸದಸ್ಯ ಮಧುಸೂದನ್, ದೇವಸಮುದ್ರ ಗ್ರಾಮ ಪಂಚಾಯತಿ ಸದಸ್ಯ ಚಂದ್ರು, ವಡರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್, ಕೆ ಜಿ ಪ್ರಕಾಶ್ ಕುದಾಪುರ, ಟಿ ರಾಜಣ್ಣ ಎನ್ ದೇವರಹಳ್ಳಿ, ಆರ್ ಬಸವರಾಜ್ ಜಾಗನೂರಹಟ್ಟಿ ಮಂಜುನಾಥ್ ಎತ್ತಿನಹಟ್ಟಿ ಓಬಳೇಶ್, ತಿಪ್ಪೇಸ್ವಾಮಿ, ಸೇರಿದಂತೆ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು