ಚಳ್ಳಕೆರೆ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬAತೆ ವಿದ್ಯಾರ್ಥಿ ದೆಸೆಯಲ್ಲಿ ಕಲಿತ ಚಟುವಟಿಕೆಗಳು ಜೀವನದುದ್ದಕ್ಕೂ ದಾರಿ ದೀಪವಾಗುವುದು ಎಂದು ಹೆಗ್ಗೆರೆ ತಾಯಮ್ಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಾಧವ ಹೇಳಿದ್ದಾರೆ.
ಅವರು ನಗರದ ಹೆಗ್ಗೆರೆ ತಾಯಮ್ಮ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕರಕುಶಲ ತರಬೇತಿ ವೇಳೆಯಲ್ಲಿ ಮಾತನಾಡಿದ ಅವರು ಇಂದಿನ ಮಕ್ಕಳು ಶಾಲೆಯಿಂದ ಮನೆಗೆ ಹೋದರೆ ಹೆಚ್ಚು ಕಾಲ ಮೊಬೈಲ ನಲ್ಲಿ ಕಾಲ ಕಳೆಯುತ್ತಾರೆ, ಆದರೆ ಪೋಷಕರು ಇಂತಹ ಮೊಬೈಲ್ ವ್ಯಾಸನದಿಂದ ತಪ್ಪಿಸಿ ಮಕ್ಕಳ ಸ್ವಂತ ಚಟುವಟಿಕೆಗಳಿಗೆ ಉತ್ತೆಜನ ನೀಡಬೇಕು, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು, ವಿದ್ಯಾವಂತ ಯುವಕ ಯುವತಿಯರು ಕೇವಲ ಸರ್ಕಾರಿ ಕೆಲಸ ಬೇಕೆಂದು ಮನೆಯಲ್ಲಿ ಕೂರುತ್ತಿರುವುದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಕರ ಕೌಶಲ್ಯಗಳು ಕರಗತವಾಗಿದ್ದರೆ ಜೀವನ ನಡೆಸಲು ಕಷ್ಟಕರವಾಗುವುದಿಲ್ಲ ಎಂದರು.
ಮಕ್ಕಳಿಗೆ ಈ ಕರ ಕೌಶಲ್ಯವನ್ನು ಕಲಿಸುತ್ತಿರುವ ನಮ್ಮ ಶಾಲೆ ಶಿಕ್ಷಕಿ ನಾಗರತ್ನ ರವರ ಕೊಡುಗೆ ಅಪಾರವಾದದ್ದು ಮಕ್ಕಳು ಆಟ ಪಾಟದ ಜೋತೆಗೆ ಕರ ಕುಶಲ ಕಲೆಯನ್ನು ಕಲಿಯುಲು ಎಲ್ಲಾ ರೀತಿ ಸಹಕಾರ ಮಾಡುವುದಾಗಿ ತಿಳಿಸಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ. ರಾಜಕುಮಾರ್ ಮಾತನಾಡಿ ಈ ಶಾಲೆಯಲ್ಲಿ ಮಕ್ಕಳಿಗೆ ಆಟ ಪಾಠದ ಜೊತೆ ಇಂತಹ ಕರಕುಶಲಗಳನ್ನು ಕಲಿಸುತ್ತಿರುವುದರಿಂದ ಮುಂದಿನ ಜೀವನಕ್ಕೆ ಈಗಿನಿಂದಲೇ ಭದ್ರ ಬುನಾದಿ ಹಾಕಿದಂತಾಗುತ್ತದೆ. ಉದ್ಯೋಗ ಸಿಗದಿದ್ದರೂ ತಾನು ಬದುಕುತ್ತೇನೆ ಎಂಬ ಅಚಲ ವಿಶ್ವಾಸ ಅವರಲ್ಲಿ ಮೂಡಿಸಿದಂತಾಗುತ್ತದೆ. ಇಂತಹ ಕಾರ್ಯಕ್ರಮಗಳು ಎಲ್ಲಾ ಶಾಲೆಗಳಲ್ಲಿ ಪ್ರಾರಂಭವಾದರೆ ಮಕ್ಕಳ ಆಸಕ್ತಿ ಮತ್ತು ಪ್ರತಿಭೆ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.

About The Author

Namma Challakere Local News
error: Content is protected !!