ಚಳ್ಳಕೆರೆ : ಬುಡಕಟ್ಟು ಸಾಂಪ್ರಾದಾಯ ಹಾಸು ಹೊದ್ದ ಬಯಲು ಸೀಮೆ ಚಳ್ಳಕೆರೆಯಲ್ಲಿ ಶೂನ್ಯದ ಮಾರಮ್ಮ ಜಾತ್ರೆಗಳು ಅದ್ದೂರಿಯಾಗಿ ಕಳೆದ ಐವತ್ತು ವರ್ಷಗಳಿಂದ ಸ್ಥಗಿತವಾದ ದೇವರ ಕಾರ್ಯಗಳು ಈ ಭಾರಿ ಭರ್ಜರಿಯಾಗಿ ಜಾತ್ರೆಯ ಮೂಲಕ ದೇವರ ಕಾರ್ಯಗಳು ನಡೆಯುತ್ತಿವೆ
ಅದರಂತೆ ತಾಲೂಕಿನ ನನ್ನಿವಾಳ ವ್ಯಾಪ್ತಿಯ ಬಂಡೆಹಟ್ಟಿ ಗ್ರಾಮದಲ್ಲಿ ಶೂನ್ಯ ಮಾರಮ್ಮ ಹಬ್ಬದ ಪ್ರಯುಕ್ತ ಸಾವಿರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.
ಇನ್ನೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಶ್‌ಕುಮಾರ್ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.
ಸ್ಥಳದಲ್ಲಿ ಜೆಡಿಎಸ್ ಪಕ್ಷದ ತಾಲೂಕ್ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ನಗರಸಭಾ ಸದಸ್ಯ ಪ್ರಮೋದ್, ಪಕ್ಷದ ಕಾರ್ಯಕರ್ತರು, ಊರಿನ ಗ್ರಾಮಸ್ಥರು ಹಿರಿಯ ಮುಖಂಡರು ಹಾಜರಿದ್ದರು