ಚಳ್ಳಕೆರೆ : ಸರ್ಕಾರದ ನಿರ್ದೇಶನದಂತೆ ಹಗಲು ವೇಳೆಯಲ್ಲಿ ರೈತರಿಗೆ ತೊಂದರೆಯಾಗದAತೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲಾಗುವುದು ಎಂದು ಬೆಸ್ಕಾಂನ ಹಿರಿಯೂರು ಕಾರ್ಯನಿರ್ವಾಹಕ ಅಭಿಯಂತರ ಲಿಂಗರಾಜು ಹೇಳಿದರು
ಗ್ರಾಮದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪಿಆರ್‌ಪುರ ಹೋಬಳಿಯ ವಿವಿಧ ಗ್ರಾಮಘಟಕಗಳ ವತಿಯಿಂದ ಬೆಸ್ಕಾಂ ವಿರುಧ್ದ ಚಳುವಳಿ ಮತ್ತು ಇಡೀ ದಿನದ ಪ್ರತಿಭಟನೆಯ ವೇಳೆ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಅವರು,
ಪರಶುರಾಮಪುರ ಹೋಬಳಿಯ ವಿವಿಧ ಗ್ರಾಮಘಟಕಗಳು ಮತ್ತು ರಾಜ್ಯ ತಾಲೂಕು ಹಂತದ ರೈತ ಸಂಘಟನೆಗಳ ಪದಾಧಿಕಾರಿಗಳು ರೈತರ ಪಂಫ್‌ಸೆಟ್‌ಗಳಿಗೆ ಹಗಲೇ ಏಳು ಗಂಟೆ ನಿರಂತರ ವಿದ್ಯುತ್ ನೀಡಬೇಕು, ಮಧ್ಯದಲ್ಲಿ ವೋಲ್ಟೇಜ್ ವ್ಯತ್ಯಯ ವಾಗದಂತೆ ಬೆಸ್ಕಾಂ, ಕೆಪಿಟಿಸಿಎಲ್‌ನ ಅಧಿಕಾರಿಗಳು ಗಮನಹರಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿರುವುದು ಸರಿಯಷ್ಟೇ ಆದರೆ ಪಿಆರ್‌ಪುರ ಹೋಬಳಿ ಕೇಂದ್ರದ ಪವರ್‌ಸ್ಟೇಷನ್‌ನ ವಿದ್ಯುತ್ ಪರಿವರ್ತಕಗಳು ಹಾಳಾಗದಂತೆ ನೋಡಿಕೊಳ್ಳುವ ಸಲುವಾಗಿಯೇ ಹೊಂದಾಣಿಕೆ ಮಾಡಿಕೊಂಡು ಇನ್ನು ಮುಂದೆ ಹಗಲು ಹೊತ್ತಿನಲ್ಲೇ ನಿರಂತರವಾಗಿ ತ್ರಿಪೇಸ್ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಆರ್‌ಪುರದ ಪವರ್‌ಸ್ಟೇಷನ್‌ನ ಸಾಮರ್ಥ್ಯಕ್ಕನುಗುಣವಾಗಿಯೇ ಸರದಿಯ ಪ್ರಕಾರ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಬೇಕಿದೆ ಈಗಾಗಲೇ ಪಿ ಮಹದೇವಪುರ ಮತ್ತು ದೊಡ್ಡಬೀರನಹಳ್ಳಿ ಗ್ರಾಮಗಳಲ್ಲಿ ಸರ್ಕಾರದ ಸೂಚನೆಯನ್ವಯ ವಿದ್ಯುತ್ ಕೇಂದ್ರಗಳನ್ನ ತೆರೆಯಲು ಸಿಧ್ದತೆ ಕೈಗೊಳ್ಳಲಾಗುತ್ತಿದೆ ಈ ಎರಡೂ ಕೇಂದ್ರಗಳು ಆರಂಭವಾದರೆ ಹೋಬಳಿಯ ಎಲ್ಲಾ ಕಡೆಗಳಲ್ಲೂ ರೈತರ ಬೇಡಿಕೆಯಂತೆ ವಿದ್ಯುತ್ ಪೂರೈಸಬಹುದು ಅಲ್ಲಿಯವರೆಗೂ ರೈತರು ಸಹಕರಿಸಬೇಕು ಎಂದರು
ಇನ್ನೂ ಕರ್ನಾಟಕ ರಾಜ್ಯ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿ ಕೆ.ಚಿಕ್ಕಣ್ಣ ಮಾತನಾಡಿ ಬಯಲು ಸೀಮೆಯ ರೈತರು ಕಳೆದ ಹತ್ತಾರು ವರ್ಷಗಳಿಂದ ಅನಾವೃಷ್ಟಿಗೆ ಒಳಗಾಗಿ ಇಟ್ಟ ಬೆಳೆ ಕೈಗೆ ಸಿಗದೇ ಆರ್ಥಿಕ ನಷ್ಟ ಕಂಡಿದ್ದಾರೆ ಸರ್ಕಾರ ಕೂಡಲೇ ರೈತರ ಅನುಕೂಲಕ್ಕಾಗಿ ಹಗಲಿನಲ್ಲೇ ನಿರಂತರವಾಗಿ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ ರಾತ್ರಿ ಹೊತ್ತು ವಿದ್ಯುತ್ ಸಮರ್ಪಕವಾಗಿ ನೀಡದೇ ರೈತರ ಜೀವ ಹಿಂಡುತ್ತಿದ್ದಾರೆ. ರೈತರು ನೆಮ್ಮದಿಯಾಗಿ ಊಟ ತಿಂದು ನಿದ್ರೆ ಮಾಡಲೂ ಬಿಡುತ್ತಿಲ್ಲ ಈ ಹಿನ್ನೆಲೆ ರೈತರಿಗೆ ಹಗಲು ಹೊತ್ತಿನಲ್ಲೇ ಏಳು ಗಂಟೆ ನಿರಂತರವಾಗಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಿ ರೈತರಿಗಾಗುತ್ತಿರುವ ತೊಂದರೆ ನೀಗಿಸಬೇಕು ಇಲ್ಲದೇ ಹೋದರೆ ತಾಲೂಕು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ರೈತರ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರದ ವಿರುಧ್ದ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಿಆರ್‌ಪುರ ಹೋಬಳಿಯ ವಿವಿಧ ಗ್ರಾಮಗಳಿಂದ ಸಹಸ್ರಾರು ರೈತರು ಸೋಮವಾರ ಹಿಂಡು ಹಿಂಡಾಗಿ ಗ್ರಾಮದ ಕೊಲ್ಲಾಪುರದಮ್ಮ ದೇವಸ್ಥಾನದ ಬಳಿ ಸೇರಿಕೊಂಡು ಅಲ್ಲಿಂದ ಗ್ರಾಮದ ಮುಖ್ಯವೃತ್ತದ ಬಳಿ ಬಂದು ಮಾನವ ಸರಪಳಿ ರಚಿಸಿ ಸರ್ಕಾರ ಮತ್ತು ಬೆಸ್ಕಾಂ ಇಲಾಖೆಯ ವಿರುಧ್ದ ಘೋಷಣೆ ಕೂಗಿದರು ಗ್ರಾಮದ ಬೀದಿಗಳಲ್ಲಿ ಪ್ರತಿಭಟನಾ ರ‍್ಯಾಲಿ ಹೊರಟು ಗ್ರಾಮದ ಬೆಸ್ಕಾಂ ಕಚೇರಿಯ ಎದುರು ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಸಂಜೆಯ ವರೆಗೆ ಪ್ರತಿಭಟಿಸಿದರು ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಬಂದು ಹಗಲಿನಲ್ಲೇ ನಿಯಮಿತವಾಗಿ ವಿದ್ಯುತ್ ನೀಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು
ಸಂದರ್ಭದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಾದ ಕೆ ಚಿಕ್ಕಣ್ಣ, ಸೋಮಗುದ್ದು ರಂಗಸ್ವಾಮಿ, ಗ್ರಾಮ ಘಟಕದ ಅಧ್ಯಕ್ಷ ನವೀನ್‌ಗೌಡ, ಪದಾಧಿಕಾರಿಗಳಾದ ಜಂಪಣ್ಣ, ಪರಮೇಶಣ್ಣ, ಭಾಷಾ, ಹನುಮಂತಪ್ಪ, ಚೌಳೂರು ಪ್ರಕಾಶ, ಎಇಇ ಎನ್ ಎಸ್ ರಾಜು, ಎಸ್‌ಒ ಶಿವಕುಮಾರ, ತಿಮ್ಮಣ್ಣ, ಕೃಷ್ಣಮೂರ್ತಿ, ರಾಜಣ್ಣ, ಗಿರೀಶಣ್ಣ, ತಿಪ್ಪೇಸ್ವಾಮಿ, ಚಿತ್ತಪ್ಗ, ರುದ್ರಣ್ಣ, ಚಿಕ್ಕಣ್ಣ, ಪ್ರಕಾಶಣ್ಣ, ರಾಜಣ್ಣ, ಪಿಆರ್‌ಪುರ, ಟಿಎನ್‌ಕೋಟೆ, ಜಾಜೂರು, ಚೌಳೂರು, ಎಸ್‌ದುರ್ಗ, ಪಿ ಮಹದೇವಪುರ ಸೇರಿದಂತೆ ಹತ್ತಾರು ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ರೈತರು ಗ್ರಾಮಸ್ಥರು ಇದ್ದರು