ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ದಿನ ನಿತ್ಯ ಗ್ರಾಮೀಣ ಪ್ರದೇಶದಿಂದ ನೂರಾರು ವಿದ್ಯಾರ್ಥಿಗಳು ನಗರದ ಶಾಲಾ ಕಾಲೇಜಿಗೆ ತೆರಳಬೇಕು ಆದರೆ ಸಮಯಕ್ಕೆ ಸರಿಯಾಗಿ ಬಾರದ ಸಾರಿಗೆಗೆ ನಿತ್ಯವೂ ಶಾಲಾ, ಕಾಲೇಜು ಮಕ್ಕಳ ಗೈರಾಗುವ ಸಾಧ್ಯತೆಗಳಿವೆ.
ಆದರೆ ಕಳೆದ ಹಲವು ದಿನಗಳಿಂದ ಸಾರಿಗೆಗಾಗಿ ಪ್ರತಿಭಟನೆಗಳನ್ನು ಮಾಡಿದರೂ ಕ್ಯಾರೆ ಎನ್ನದ ಸಾರಿಗೆ ಅಧಿಕಾರಿಗಳ ನಿರ್ಲ್ಯಕ್ಷö್ಯಕ್ಕೆ ಸಾರ್ವಜನಿಕರು ಮಕ್ಕಳು ರೋಸಿ ಹೊಗಿದ್ದಾರೆ. ಇನ್ನೂ ಸಾರಿಗೆ ಸಚಿವರು ಪ್ರತಿನಿಧಿಸಿರುವ ಸ್ವ ಜಿಲ್ಲೆಯ ಪರಸ್ಥಿತಿ ಈಗಾದರೇ ರಾಜ್ಯದ ಶಾಲಾ ಮಕ್ಕಳ ಪಾಡೆನೆ ಎಂಬAತಾಗಿದೆ.
ಒAದೆಡೆ ದೇವರು ಕೊಟ್ಟರು ಪೂಜಾರಿ ಕೊಡಲ್ಲ ಎಂಬ ಮಾತಿನಂತೆ ಇಲ್ಲಿನ ಅಧಿಕಾರಿಗಳ ಬೇಜಾವಾಬ್ದಾರಿ ತನ ಎದ್ದು ತೋರುತ್ತದೆ, ಆದ್ದರಿಂದ ಸ್ಥಳೀಯ ಶಾಕರು ಹಾಗೂ ಸಾರಿಗೆ ಸಚಿವರು ಈ ಗ್ರಾಮೀಣ ಪ್ರದೇಶದ ಮಕ್ಕಳ ಕಷ್ಟಕ್ಕೆ ಸ್ಪಂಧಿಸುವರೇ ಕಾದು ನೋಡಬೇಕಿದೆ.
ಅಧಿಕಾರಿಗಳ ನಿರ್ಲಕ್ಷö್ಯ :
ಹೌದು ಸಮಯಕ್ಕೆ ಸರಿಯಾಗಿ ಗ್ರಾಮೀಣ ಪ್ರದೇದ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ನೀಡಲು ಸಾಕಸ್ಟು ಬಾರಿ ಪ್ರತಿಭಟನೆ ಮೂಲಕ ಮನವಿ ನೀಡಿದ್ದಾರೆ, ಆದರೆ ಉಡಾಫೆಯಿಂದ ವಿದ್ಯಾರ್ಥಿಗಳೆಂದರೆ ನಿರ್ಲಕ್ಷö್ಯ, ವಿದ್ಯಾರ್ಥಿಗಳ ಬಸ್‌ಪಾಸ್ ಎಂದರೆ ತಾತ್ಸರ ಈಗೇ ಅಸಡ್ಯ ಮನೋಭಾವ ತಾಳುವ ನಿಯಂತ್ರಣ ಅಧಿಕಾರಿ, ಹಾಗೂ ವ್ಯವಸ್ಥಾಪಕರಿಗೆ ಶಾಸಕರು ಹಾಗೂ ಸಾರಿಗೆ ಸಚಿವರು, ಜಿಲ್ಲಾಧಿಕಾರಿಗಳು ಕ್ರಮ ಜರುಗಿಸುವರೋ ಕಾದು ನೋಡಬೇಕಿದೆ.
ಸಾರಿಗೆ ಸಚಿವ ಹಾಗೂ ಅಧ್ಯಕ್ಷರ ತವರು ಕ್ಷೇತ್ರದಲ್ಲಿ ಸಮರ್ಪಕವಾಗಿ ಬಸ್ಸುಗಳ ಸೌಲಭ್ಯ ಇಲ್ಲದೆ ಇರುವುದು ದಿನ ನಿತ್ಯ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಹ ಸ್ಥಿತಿ ಗಂಭೀರವಾಗಿದೆ.
ಚಳ್ಳಕೆರೆ ನಗರದ ಹೊರವಲಯಲ್ಲಿ ಸುಸಜ್ಜಿತ ಸಾರಿಗೆ ಘಟಕ ಹಾಗೂ ಹೈಟೆಕ್ ಬಸ್ ನಿಲ್ದಾಣವಿದ್ದರೂ ಸಹ ಸಾರಿಗೆ ಘಟಕಕ್ಕೆ ತಕ್ಕಂತೆ ಬಸ್‌ಗಳ ಕೊರತೆಯಿಂದ ಗ್ರಾಮೀಣ ಹಾಗು ವಿವಿಧ ನಗರಗಳಿಗೆ ಬಸ್ ಸಂಚಾರ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಗೂಡ್ಸ್, ಆಟೋ, ಹಿಡಿದು ಜೀವ ಕೈಯಲ್ಲಿಡಿದು ಕುರಿಗಳಂತೆ ಪ್ರಯಾಣ ಮಾಡಬೇಕಾದ ಅನಿವಾರ್ಯವಿದೆ.
ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ವಿವಿಧ ಉನ್ನತ ವ್ಯಾಸಂಗ ಮಾಡಲು ಶಾಲಾ ಮಕ್ಕಳು ಬೆಳಗ್ಗೆ 9ಗಂಟೆಯವರೆಗೆ ಕಾದರೂ ಬಸ್‌ಗಳ ಸಂಚಾರ ಇಲ್ಲದೆ, ನೂರಾರು ವಿದ್ಯಾರ್ಥಿಗಳು ಪರದಾಡುವಂತಾಗುತ್ತದೆ.
ತಾಲೂಕಿನ ವಿವಿಧ ಗ್ರಾಮಗಳಿಂದ ಸಾಕಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುತ್ತಾರೆ. ವಿದ್ಯಾರ್ಥಿಗಳು ವರ್ಷದ ಶುಲ್ಕ ಕಟ್ಟಿ ಬಸ್ ಪಾಸ್ ಮಾಡಿಸಿಕೊಂಡಿರುತ್ತಾರೆ, ಒಂದು ಸಾರಿಗೆ ಡಿಪೋಗೆ ಕನಿಷ್ಟ ನೂರು ಬಸ್‌ಗಳಿರ ಬೇಕು ಆದರೆ ಸುಮಾರು 40 ಬಸ್‌ಗಳಿವೆ,
ಡಕೊಟೋ ಬಸ್‌ಗಳ ಸಂಚಾರ :
ಜಿಲ್ಲೆಯಲ್ಲಿ ಅತೀ ಹೆಚ್ಚಿನ ಭೂ ವಿಸ್ತೀರ್ಣದ ವ್ಯಾಪ್ತಿ ಹೊಂದಿರುವ ಹಾಗೂ ಅತೀ ಹೆಚ್ಚಿನ ಬುಡಕಟ್ಟು ಸಂಪ್ರಾದಾಯಗಳು ಇರುವ ಚಳ್ಳಕೆರೆ ತಾಲೂಕಿಗೆ ಕಳೆದ ಹಲವು ದಿನಗಳ ಹಿಂದೆ ಸುಮಗ ಸಂಚಾರಕ್ಕೆ ನೂತನ ಬಸ್ ನಿಲ್ದಾಣ ಅದಕ್ಕೆ ತಕ್ಕಂತೆ ಸಾರಿಗೆ ಡಿಪೋ ಪ್ರಾರಂಭವಾಯಿತು ಆದರೆ ಸಾರ್ವಜನಿಕರಿಗೆ ತಕ್ಕಂತೆ ವ್ಯವಸ್ಥೆ ಕಲ್ಪಿಸುವಲ್ಲಿ ಸರಕಾರ ಎಡವಿದೆ, ಇನ್ನೂ ಇಲ್ಲಿ ಸರಿಸುಮಾರು ಡಕೊಟೋ ಬಸ್ ಗಳೆ ಹೆಚ್ಚಿವೆ ಎಂಬುದು ಮೆಲ್ನೋಟಕ್ಕೆ ಕಂಡು ಬಂದಿವೆ, ಇನ್ನೂ ಇದರ ಬಗ್ಗೆ ಯಾವ ಜನಪ್ರತಿನಿಧಿಗಳು ಚಕಾರ ಎತ್ತದೆ ಇರುವುದು ವಿಪರ್ಯಾಸದ ಸಂಗತಿ, ಹೆಚ್ಚಿನ ಮಾಹಿತಿಗೆ ಸಾರಿಗೆ ವ್ಯವಸ್ಥಾಪಕರು ದೂರವಾಣಿ ಕರೆಗೆ ಸ್ವೀಕರಿಸಲಿಲ್ಲ.
ಬಾಕ್ಸ್ ಮಾಡಿ :
ನಗರದಲ್ಲಿ ಸೈನಿಕರೊಂದಿಗೆ ವಿದ್ಯಾರ್ಥಿಗಳು ಬಸ್ಸಿಗಾಗಿ ಸುಮಾರು ತಾಸುಗಟ್ಟಲೆ ಕಾದರು ಅಧಿಕಾರಿಗಳು ಬಸ್ ವ್ಯವಸ್ಥೆ ಮಾಡದೆ ನಿರ್ಲಕ್ಷವಹಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯಾಸಂಗದೊAದಿಗೆ ಚೆಲ್ಲಾಟವಾಡುತ್ತಿದ್ದಾರೆ ಕೂಡಲೆ ಸಾರಿಗೆ ಸಚಿವರು ಸಕಾಲಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದ ಕಿಡಿಕಾರಿದರು.– ———-ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾ ಸಮಿತಿ ಮಹಂತೇಶ್
ಬಾಕ್ಸ್ ಮಾಡಿ :
ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗದ ರೀತಿಯಲ್ಲಿ ಅಧಿಕಾರಿಗಳು ಬಸ್ ವ್ಯವಸ್ಥೆ ಮಾಡಬೇಕು, ವಿನಾಃ ಕಾರಣ ವಿದ್ಯಾರ್ಥಿಗಳ ವ್ಯಾಸಂಗದ ಜೊತೆ ಚೆಲ್ಲಾಟವಾಡಬೇಡಿ, ನಿಮ್ಮ ಪ್ರಮುಖ್ಯತೆ ವಿದ್ಯಾರ್ಥಿಗಳ ವ್ಯಾಸಂಗದ ಕಡೆ ಇರಲಿ, ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಜರುಗಿದರೆ ರೈತ ಸಂಘದಿAದ ಉಗ್ರವಾದ ಹೋರಾಟ ಮಾಡುತ್ತೆವೆ.————- ಕೆ.ಪಿ.ಭೂತಯ್ಯ, ರಾಜ್ಯ ರೈ ಸಂಘ ರಾಜ್ಯ ಉಪಾಧ್ಯಕ್ಷ