ನಾಯಕನಹಟ್ಟಿ:: ರಾಜ್ಯದ ಅತಿ ದೊಡ್ಡ ವಾಲ್ಮೀಕಿ ಸಮಾಜದ ಸಂಘಟಿತ ಹೋರಾಟ ಮತ್ತು ನಿರಂತರ ಪರಿಶ್ರಮದ ಫಲದಿಂದ ಸರ್ಕಾರದ ಮೇಲೆ ಒತ್ತಡ ಏರಿದ್ದರಿಂದ 30 ವರ್ಷಗಳ ಹೋರಾಟದ ಫಲವಾಗಿ ಪರಿಶಿಷ್ಟ ಪಂಗಡದ ವರೆಗೆ ಶೇಕಡ ಏಳರಷ್ಟು ಮೀಸಲಾತಿಯನ್ನು ಪಡೆಯಲು ಸಾಧ್ಯವಾಯಿತು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನ ನಂದಪುರಿ ಮಹಾಸ್ವಾಮಿಗಳು ಹೇಳಿದರು.

ಅವರು ಭಾನುವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೂರಮಠದ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ಹಟ್ಟಿ ಮಲ್ಲಪ್ಪ ನಾಯಕ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಐದನೇ ವರ್ಷದ ವಾಲ್ಮೀಕಿ ಜಾತ್ರೋತ್ಸವ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ ಕಾಯಕಯೋಗಿ ಶ್ರೀ ಗುರು ತಿಪ್ಪೆರುದ್ರಸ್ವಾಮಿಯ ಜಾತ್ರಾ ಮಹೋತ್ಸವ ಈ ಭಾಗದ ಎಲ್ಲಾ ಸಮುದಾಯದವರು ಅದ್ದೂರಿಯಾಗಿ ಸಂಭ್ರಮ ತಡಗರದಿಂದ ಆಚರಿಸುವುದು ವಾಡಿಕೆ ಆದ್ದರಿಂದ ನಾಯಕ ಸಮುದಾಯದ ರಾಜ್ಯ ನಾಯಕರು ಫೆಬ್ರವರಿ 9 ಮತ್ತು 10 ರಂದು ನಡೆಯುವ ಐದನೇ ವರ್ಷದ ವಾಲ್ಮೀಕಿ ಜಾತ್ರೆಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನಾಂಗದ ಬಂಧುಗಳು ಆಗಮಿಸಿ ಈ ಸಂದರ್ಭದಲ್ಲಿ ಜಾತ್ರೆಗೆ ಸಿದ್ಧಪಡಿಸಿರುವಂತಹ ಹೊಸತೀರನ್ನು ಲೋಕಾರ್ಪಣೆ ಮಾಡಲಾಗುವುದು ಜಾತ್ರೆಯನ್ನು ಯಶಸ್ವಿ ಮಾಡಬೇಕಾಗಿ ವಿನಂತಿಸಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿಗೌಡ್ರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಟೇಲ್ ಜಿ ತಿಪ್ಪೇಸ್ವಾಮಿ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ ತಿಪ್ಪೇಸ್ವಾಮಿ, ಮಾಜಿ ತಾಲೂಕು ಸದಸ್ಯ ಎಸ್ ಓಬಯ್ಯ, ಬಂಡೆ ಕಪಿಲೆ ಓಬಣ್ಣ, ಕಾಕಸೂರಯ್ಯ, ಮಾಜಿ ತಾಲೂಕ ಪಂಚಾಯತ್ ಸದಸ್ಯ ಎಸ್ ಬಸವರಾಜ್, ಪಟ್ಟಣ ಪಂಚಾಯಿತಿ ಸದಸ್ಯ ಓಬಯ್ಯದಾಸ್, ಡಾ. ಬಿ ಗಿರೀಶ್, ಡಾ. ಚಿನ್ನಯ್ಯ ದಾಸರಮುತ್ತೈಯ್ಯನ ಹಳ್ಳಿ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ಬೋರ್ ಸ್ವಾಮಿ ನಲಗೇತನಹಟ್ಟಿ ಜಿ ವೈ ತಿಪ್ಪೇಸ್ವಾಮಿ, ಗೌಡಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ ಒ ಓಬಳೇಶ್, ಮಾಜಿ ಅಧ್ಯಕ್ಷ ಟಿ ರಂಗಪ್ಪ, ಸದಸ್ಯ ಗಿಣಿಯರ್ ತಿಪ್ಪೇಶ್, ನಲಗೇತನಹಟ್ಟಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ ಎನ್ ಮುತ್ತಯ್ಯ, ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಡಾ. ಕಾಟಂಲಿಂಗಯ್ಯ , ಮಾಜಿ ಅಧ್ಯಕ್ಷ ಕಾಟಯ್ಯ ವರವು, ಡಾ ಗೂಡ್ಲಯ್ಯ, ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಿ ಕಾಟಯ್ಯ, ಗ್ರಾಮ ಪಂಚಾಯತಿ ಸದಸ್ಯ ವೀರೇಶ್, ಡಿ ಜಿ ಆರ್ ಓಬಣ್ಣ ರೇಖಲಗೆರೆ, ಗುಂತ ಕೋಲಮ್ಮನಹಳ್ಳಿ ಗ್ರಾ.ಪಂ ಸದಸ್ಯ ಜಯಣ್ಣ, ಮಲ್ಲಿಕಾರ್ಜುನ್, ಶಿವ ತಿಪ್ಪೇಸ್ವಾಮಿ, ಜೆಡಿಎಸ್ ಮುಖಂಡ ಚೌಳಕೆರೆ ಡಿ ಬಿ ಕರಿಬಸಪ್ಪ, ಶಿವರಾಜ್, ರೇಖಲಗೆರೆ ತಿಪ್ಪೇಸ್ವಾಮಿ, ಸೇರಿದಂತೆ ಸಮಸ್ತ ನಾಯಕನಹಟ್ಟಿ ಹೋಬಳಿಯ ನಾಯಕ ಸಮುದಾಯದ ಮುಖಂಡರು ಯುವಕರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!