ನಾಯಕನಹಟ್ಟಿ:: ಹೋಬಳಿಯ ಸಮೀಪದ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊರೆಗಳಹಟ್ಟಿಯಲ್ಲಿ ಚೌಡೇಶ್ವರಿ ಜಾತ್ರೋತ್ಸವ ಸಂಭ್ರಮ ಸಡಗರದಿಂದ ಪ್ರತಿವರ್ಷವೂ ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯದಂತೆ ಚೌಡೇಶ್ವರಿಯ ಜಾತ್ರೋತ್ಸವವನ್ನು ಗ್ರಾಮಸ್ಥರು ಆಚರಿಸುತ್ತಾ ಬಂದಿದ್ದಾರೆ. ಎಂದು ಪೂಜಾರಿ ಮಲ್ಲಿಕಾರ್ಜುನ್ ರವರು ಹೇಳಿದ್ದಾರೆ.
ಅವರು ಮಂಗಳವಾರ ಗ್ರಾಮದ ವರವಲಯದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಗಂಗಾಪೂಜಾ ಕಾರ್ಯ ಪೂಜಾ ಕೈಕರಿಗಳು ನೆರವೇರಿಸಿ ಮಾತನಾಡಿದ್ದಾರೆ ಗ್ರಾಮದಲ್ಲಿ ಮಳೆ ಹೋದ ಕಾಲಕ್ಕೆ ನಮ್ಮ ಪೂರ್ವಜರು ಸುಮಾರು 200 ವರ್ಷಗಳ ಕಾಲದಿಂದಲೂ ಶ್ರೀ ಚೌಡೇಶ್ವರಿ ದೇವಿಯನ್ನು ಪೂಜಿಸುತ್ತಾ ಬಂದಿದ್ದಾರೆ ಮಳೆಗಾಲದಲ್ಲಿ ಮಳೆ ಸರಿಯಾಗಿ ಬರದಿದ್ದಲ್ಲಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಗಡಿಗೆ ಪೂಜೆ ನಿರ್ವಹಿಸುತ್ತಿದ್ದರು ಗಡಿಗೆ ಬಲಭಾಗಕ್ಕೆ ತಿರುಗಿದರೆ ಮಳೆ ಬರುತ್ತಿದೆ ಗಡಿಗೆ ಎಡ ಭಾಗಕ್ಕೆ ತಿರುಗಿದರೆ ಮಳೆ ಬರುವುದಿಲ್ಲ ಎಂಬುದು ಗ್ರಾಮಸ್ಥರ ನಂಬಿಕೆ ಅಂದಿನಿಂದ ಇಂದಿನವರೆಗೂ ಗ್ರಾಮಸ್ಥರು ಒಕ್ಕೊರಳ್ಳಿನಿಂದ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೊರೆಗಳ ಹಟ್ಟಿ ರಾಮದುರ್ಗ ಬೋಸೆದೇವರಹಟ್ಟಿಯ ಗುರು ಹಿರಿಯರು ಮಹಿಳೆಯರು ಯುವಕರು ಸೇರಿದಂತೆ ಸಮಸ್ತ ಗ್ರಾಮಸ್ಥರು ಇದ್ದರು ಇನ್ನೂ ಜಾತ್ರೋತ್ಸವದಲ್ಲಿ ಯುವಕರಾದ ಡಿ ಬಿ ಬೋರಯ್ಯ, ವಿರುಪಾಕ್ಷಿ, ಮನು, ಮಣಿಕಂಠ ,ಸತೀಶ್, ವೈ ಒ ಮಂಜುನಾಥ್, ರವಿಕುಮಾರ್ ಚಂದ್ರಣ್ಣ ವಿಶ್ವನಾಥ್ ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!