ಚಳ್ಳಕೆರೆ : ನಮ್ಮನ್ನು ಹಾಳುವ ಸರ್ಕಾರಗಳು ನಮಗೆ ಭಾಗ್ಯಗಳ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಎನ್ ಪ್ರಕಾಶ್ ಹೇಳಿದ್ದಾರೆ.
ನಾಯಕನಹಟ್ಟಿ ಪಟ್ಟಣದ ಒಂಬತ್ತನೇ ವಾರ್ಡಿನ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಹಕ್ಕ ಮಾಯಾವತಿ ರವರ 67ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಜನಕಲ್ಯಾಣ ದಿನ ಹಾಗೂ ಆರ್ಥಿಕ ಸಹಾಯಕ ದಿನ ಆಚರಣೆ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ, ಕಾಂಗ್ರೆಸ್ ಈ ದೇಶವನ್ನು ಅರುವತ್ತು ವರ್ಷ ಆಳ್ವಿಕೆ ಮಾಡಿದ್ದು ಬಿಜೆಪಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದರು ದಲಿತರು ದಲಿತರಾಗಿ ಬಡವರು ಬಡವರಾಗಿ ಇದ್ದೇವೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳಿಗೆ ದಲಿತರ ಮತ ಬೇಕು ಅಷ್ಟೇ ದಲಿತರು ದಲಿತರಾಗಿ ಇರಬೇಕು ನಮ್ಮನ್ನು ಆಳುವ ಸರ್ಕಾರಗಳು ಭಾಗ್ಯಗಳ ಮೂಲಕ ಬಣ್ಣದ ಮಾತುಗಳ ನಾಡಿ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಿವೆ ಅಕ್ಕ ಮಾಯಾವತಿ ಉಕ್ಕಿನ ಮಹಿಳೆ ಎಂದೇ ಖ್ಯಾತಿ ಪಡೆದವರು ಅವರ 67ನೇ ವರ್ಷದ ಹುಟ್ಟುಹಬ್ಬದ ನಾಯಕನಹಟ್ಟಿ ಪಟ್ಟಣದಲ್ಲಿ ಆಚರಣೆ ಮಾಡುತ್ತಿರುವುದು ಸಂತಸದ ತಂದಿದೆ ಎಂದು ಜಿಲ್ಲಾಧ್ಯಕ್ಷ ಎನ್ ಪ್ರಕಾಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಟಿ. ರುದ್ರಮನಿ, ತಾಲೂಕು ಅಧ್ಯಕ್ಷ ಬಿ ಟಿ ಶಿವಕುಮಾರ್, ಮಹಿಳಾ ತಾಲೂಕು ಉಪಾಧ್ಯಕ್ಷ ಸರಸ್ವತಿ, ಎತ್ತಿನಹಟ್ಟಿ ಬಿ ರಾಮಚಂದ್ರಪ್ಪ, ಓಬಳೇಶ್, ತಿಪ್ಪೇಸ್ವಾಮಿ ,ಕಾಲೋನಿಯ ಮುಖಂಡ ಗಂಗಣ್ಣ, ಟಿ ಬಸವರಾಜ್ ,ಚೌಡಣ್ಣ, ಆರ್ ತಿಪ್ಪೇಸ್ವಾಮಿ (ಸಾಯಿಬಾಬಾ), ಆರ್ ಯನ್ನಪ್ಪ, ಸಮರಸಿಂಹರೆಡ್ಡಿ, ತಿಪ್ಪೇಸ್ವಾಮಿ, ಆಟೋ ಮಹಾಂತೇಶ್, ನಲಗೇತನಹಟ್ಟಿ ಪಿ ಟಿ ನಾಗರಾಜ್, ಕಾಳೆ ತಿಮ್ಮದಾಸಯ್ಯ, ಹಟ್ಟಿಯ ಯುವಕರು ಉಪಸ್ಥಿತರಿದ್ದರು