ಚಳ್ಳಕೆರೆ : ಸಾಹಿತ್ಯದ ಸಾಧಕರನ್ನು ಗುರುತಿಸುವ ಕೆಲಸ ತನುಶ್ರೀ ಸಂಸ್ಥೆಯ ಎಸ್.ರಾಜು ಸೂಲೇನಹಳ್ಳಿ ಮಾಡಿದ್ದಾರೆ, ಇಂದಿನ ಸಂಧರ್ಭದಲ್ಲಿ ಸಾಹಿತಿಗಳೆಂದರೆ ತಾತ್ಸರ ಮನೋಭಾವ, ಆದರೆ ಇಂತಹ ಸಾಹಿತಿಗಳೆ ಈ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ರಾಜ್ಯ ಘಟಕ ಇವರ ಸಹಯೋಗದಲ್ಲಿ ಮೊದಲ ವಾರ್ಷಿಕೋತ್ಸವ ದ್ವಿತೀಯ ಸಾಹಿತ್ಯ ಸಂಭ್ರಮದಲ್ಲಿ ಸುಮಾರು ನಾಲ್ಕು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು,
ಇಂದು ನಾವು ಸಾಹಿತ್ಯ ಆಸಕ್ತರಾಗಬೇಕು, ನಮ್ಮ ಮನೆಗಳಲ್ಲಿ ನಮ್ಮ ಮನ ಮನಗಳಲ್ಲಿ ಕನ್ನಡದ ಕಂಪು ಪಸರಿಸಬೇಕು ಗಡಿಭಾಗದ ಸಾಹಿತ್ಯ ಉಳಿವಿಗೆ ಉತ್ತಮವಾದ ಲೇಖನಗಳ ಮೂಲಕ, ಕವನಗಳ ಮೂಲಕ ಕಟ್ಟಿಕೊಡುವ ಕಾರ್ಯ ಲೇಖಕರು, ಸಾಹಿತ್ಯದ ಆಸಕ್ತರು ಮಾಡಬೇಕು ಎಂದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಸಾಹಿತ್ಯದ ಸೇವೆಯಲ್ಲಿ ಅಧಿಕಾರಿ ಅಂತಸ್ತು ಇದ್ದರು ಸೇವೆ ಮಾಡುವ ಗುಣ ಇರಬೇಕು. ಈ ಕ್ಷೇತ್ರದಲ್ಲಿ ಸೇವೆ ಮಾಡುವುದು ಸಾಹಿತಿಕ ಬದುಕು ಕಟ್ಟಿಕೊಂಡುವ ಮೂಲಕ ಪುಣ್ಯದ ಕೆಲಸ ಗಡಿಭಾಗದ ಚಳ್ಳಕೆರೆ ಸಾಹಿತಿಗಳು ಮಾಡಿದ್ದಾರೆ, ತಳಕಿನ ವೆಂಕಣ್ಣಯ್ಯ, ಬೆಳಗೆರೆ ಕೃಷ್ಣಾಶಾಸ್ತಿç, ಈಗೀನ ತಿಪ್ಪಣ್ಣ ಮರಿಕುಂಟೆ ಈಗೇ ಅನೇಕ ಸಾಹಿತಿಗಳು ನಮ್ಮ ಮುಂದೆ ಇದ್ದಾರೆ, ಆದ್ದರಿಂದ ಜ್ಞಾನದ ಜೊತೆ ಜೊತೆಗೆ ಸಾಹಿತ್ಯಸ್ತಕರಾಗುವ ನಿಟ್ಟಿನಲ್ಲಿ ಇನ್ನೂ ಹೆಚ್ಚು ಕೃತಿ ಕವನಗಳನ್ನು ಬರೆಯುವುದರ ಮೂಲಕ ಈಗೀನ ಪ್ರಸ್ತುತ ಯುವ ಪೀಳಿಗೆಯನ್ನು ಎಚ್ಚರಗೊಳ್ಳುವ ಆಯ್ದ ಲೇಖನಗಳು ದಾರಿ ದೀಪವಾಗಬೇಕು ಎಂದರು.
ಹಿರಿಯ ಸಾಹಿತಿ ತಿಪ್ಪಣ್ಣ ಮರಿಕುಂಟೆ ಮಾತನಾಡಿ, ಇಂದಿನ ಪರಸ್ಥಿಯಲ್ಲಿ ರಾಜಾಕರಣ ಬದಲಾಗುತ್ತಿದೆ, ಆಗೀನ ಕಾಲದಲ್ಲಿ ದೇಶದ ಮುಖ್ಯ ಮಂತ್ರಿ, ರಾಜ್ಯದ ಮಂತ್ರಿ ಎನ್ನುತ್ತಿದ್ದರು. ಆದರೆ ಈಗ ದೇಶ, ರಾಜ್ಯ ಬಿಟ್ಟು ಗ್ರಾಮದ ಮಂತ್ರಿಯಾಗಬೇಕು ಎನ್ನುವುದು ಈಗೀನ ಪರಿಸ್ಥಿತಿ. ಇಲ್ಲಿನ ಬುಡಕಟ್ಟು ಸಮಯದಾಯಗಳು, ವಿಭಿನ್ನವಾಗಿವೆ ಆದ್ದರಿಂದ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಮೌಲ್ಯ ನೀಡುವ ಮೂಲಕ ಸಾಹಿತ್ಯದ ನಾಡನ್ನಾಗಿ ಮಾಡೋಣ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ತನುಶ್ರೀ ಪ್ರಕಾಶಕರಾದ ಎಸ್.ರಾಜು ಸೂಲೇನಹಳ್ಳಿ, ಸಾಂಸ್ಕೃತಿಕ ರಾಜಾಕರಣ ಅತೀ ವೇಗವಾಗಿ ಕಟ್ಟುವ ಅವಶ್ಯಕತೆ ಇದೆ. ಕುಲ ಮೂಲಗಳ ಅಧ್ಯಯನ ಬಹುಮುಖ್ಯವಾಗಿದೆ. ಕುಲ ಸಂಭAಧಗಳು, ದೈವ ಸಂಬAಧಗಳು, ಈಗೇ ಹಲವು ಒಂದೇ ಮುಖ್ಯ ವಾಹಿನಿಗೆ ಬರಬೇಕಿದೆ, ಇಂದಿನ ದಿನಗಳಲ್ಲಿ ಸಾಂಸ್ಕೃತಿಕ ರಾಜಾಕರಣ ಅತ್ಯವಶ್ಯಕ ಇಂತಹ ಪ್ರಯತ್ನಗಳನ್ನು ಪುಸ್ತಕ ರೂಪದಲ್ಲಿ ಬರೆಯಲು ಸಾಧ್ಯ ಎನ್ನಬಹುದು. ಎದುರಾಳಿ ಇದ್ದರೆ ಸಂಘಟನೆ ಬಹು ಬೇಗವಾಗುತ್ತದೆ ಆದರೆ ಎದುರಾಳಿ ಇಲ್ಲದೆ ಹೋದರೆ ಅಸಂಘಟಿತ ವಾಗುತ್ತೆವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಮಯೂರ ಪ್ರಶಸ್ತಿ ಪುರಸ್ಕೃತರಾದ ಗಣಪತಿ ಗೋ ಛಲವಾದಿ ಮಾತನಾಡಿ, ಲೇಖನಗಳು ಪುಸ್ತಕ ರೂಪದಲ್ಲಿ ಹೊರ ಬಂದರೆ ವಿದ್ಯಾರ್ಥಿ ಜೀವನ ಸುಗಮವಾಗುತ್ತದೆ, ಕೇವಲ ಡಾಕ್ಟರೇಟ್ ಗಳಿಸಲು ಸಂಶೋಧನೆ ಮಾಡಬಾರದು. ಹೊರ ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡಬೇಕು ವೀರರ ಸಂಗತಿಗಳನ್ನು ನಶಿಸಿ ಹೊದ ಚರಿತ್ರೆಯನ್ನು ವರ್ತಮಾನಕ್ಕೆ ತಿಳಿಸುವ ಪ್ರಯತ್ನ ಮಾಡಬೇಕು ಎಂದಿದ್ದಾರೆ.
ಈ ಸಂಧರ್ಭದಲ್ಲಿ ಸಾಹಿತಿ ತಿಪ್ಪಣ್ಣ ಮರಿಕುಂಟೆ, ಡಿ.ಜಿ.ತುರುಮಲ, ಕೊರ್ಲಕುಂಟೆ ತಿಪ್ಪೆಸ್ವಾಮಿ, ಕೊಂಡ್ಲಹಳ್ಳಿ ಜಯಪ್ರಕಾಶ್, ಶಿವಮೂರ್ತಿ ಟಿ.ಕೋಡಿಹಳ್ಳಿ, ಪತ್ರಕರ್ತರಾದ ರಾಮಾಂಜನೇಯ, ಅಂಜಿನಪ್ಪ, ಚಿದಾನಂದಮೂರ್ತಿ, ಉದಯ್ ಬಡೀಗೇರ್, ತಿಪ್ಪೆಸ್ವಾಮಿ, ಡಾ.ಕಾಟಮಲಿಂಗಯ್ಯ, ಕೆ.ಬಿ.ರವಿಕುಮಾರ್, ಪ್ರೀಯಾ ಇನ್ನಿತರರು ಪಾಲ್ಗೋಡಿದ್ದರು.

ಲೋಕಾರ್ಪನೆ ಗೊಂಡ ಪುರಸ್ತಕಗಳು :
ಅನಿತಾ ಕೆ.ಆರ್.ಇವರು ಬರೆದ ನನ್ನೋಳಗಿನ ದನಿ, ಬಸವರಾಜ್ ಪೂಜಾರ್ ಕೋಡಿಹಳ್ಳಿ ಬರೆದ ರೈತರ ನೋವಿನ ಹನಿಗಳು, ಶೂಭಾ ವಿಷ್ಣು ಸಭಾಹಿತ ಅಗ್ರಹಾರ ಹಳದೀಪುರ ರಚಿಸಿದ ಕಂಗಳ ಬೆಳದಿಂಗಳು, ಕೆ.ಬಿ.ರವಿಕುಮಾರ್ ರವರ ಒಡಲಾಳ ನುಡಿಯೊಡೆದು ಕವನ ಸಂಕಲನ ಬಿಡುಗಡೆಗೊಂಡವು.
ಪ್ರಶಸ್ತಿ ಪುರಸ್ಕೃತರು :
ಇನ್ನೂ ತನುಶ್ರೀ ಜೀವಸಮ್ಮಾನ ಪುರಸ್ಕಾರವನ್ನು ಹಿರಿಯ ಸಾಹಿತಿಗಳಾದ ತಿಪ್ಪಣ್ಣ ಮರಿಕುಂಟೆಗೆ ನೀಡಿದರು ತನುಶ್ರೀ ವಾರ್ಪಿಕ ಸಾಧಕ ರತ್ನ ಪುರಸ್ಕಾರ ಎಂ.ಕೆ.ಶೇಖ್, ಹಿರಿಯ ಸಾಹಿತಿಗಳಿಗೆ ನೀಡಿದರು, ತನುಶ್ರೀ ಕಲಾ ರತ್ನ ಪುರಸ್ಕಾರವನ್ನು ಅಜಿರತ್ ಆಲಿ ದಾವಣಗೆರೆಗೆ ನೀಡಲಾಯಿತು, ತ್ರಿವೇಣಿ ರತ್ನ ಪುರಸ್ಕಾರ ಅರ್ಚನಾ ಎನ್.ಪಾಟೀಲ ಹಾವೇರಿಗೆ ನಿಡಿದರು, ತನುಶ್ರೀ ಕಾವ್ಯ ರತ್ನ ಪುರಸ್ಕಾರ ಅನಂತ್ ಕುಣಿಗಲ್ ತುಮಕೂರು ಯುವ ಕವಿಗಳಿಗಳಿಗೆ ನೀಡಲಾಯಿತು.

ಪೋಟೋ ಚಳ್ಳಕೆರೆ ನಗರದ ರೋಟರಿಬಾಲ ಭವನದಲ್ಲಿ ನಾಲ್ಕು ಪುಸ್ತಕರಗಳನ್ನು ಶಾಸಕ ಟಿ.ರಘುಮೂರ್ತಿ ಲೋಕಾರ್ಪಣೆ ಮಾಡಿದರು. ಜೊತೆಗೆ ತಹಶೀಲ್ದಾರ್ ಎನ್.ರಘುಮೂರ್ತಿ, ತಿಪ್ಪಣ್ಣಮರಿಕುಂಟೆ ಇದ್ದರು.

About The Author

Namma Challakere Local News
error: Content is protected !!