ಚಳ್ಳಕೆರೆ : 9ನೇವಾರ್ಡ್ನ ಅಭಿವೃದ್ದಿಗೆ ಅಧಿಕಾರಿಗಳು ಸನ್ನದರಾಗಿ : ಸದಸ್ಯ ವಿ.ವೈ.ಪ್ರಮೋದ್

ಚಳ್ಳಕೆರೆ : ನಗರದ 9ನೇ ವಾರ್ಡ್ನಲ್ಲಿ ಅಂಗನವಾಡಿ ಕೇಂದ್ರದ ಮುಂದೆ ಸ್ವಚ್ಛತೆ ಮಾಡಲು ನಗರಸಭಾ ಪೌರಾಯುಕ್ತ ಸಿ.ಚಂದ್ರಪ್ಪಗೆ ಸದಸ್ಯ ವಿ.ವೈ ಪ್ರಮೋದ್ ಮನವಿ ಮಾಡಿದರು.
ಅವರು ನಗರದ 9ನೇ ವಾರ್ಡ್ಗೆ ಮುಂಜಾನೆ ಆಗಮಿಸಿದ ಸಂಧರ್ಭದಲ್ಲಿ ವಾರ್ಡನಲ್ಲಿ ಸ್ವಚ್ಚತೆ ಬಗ್ಗೆ ಪರೀಶಿಲನೆ ನಡೆಸಿ ಮನವಿ ಮಾಡಿದರು, ಇತ್ತಿಚೀಗೆ ನಗರದಲ್ಲಿ ಹಂದಿಗಳ ಆವಳಿ ಹೆಚ್ಚಾಗಿದೆ ಇದರಿಂದ ನಗರದಲ್ಲಿ ಖಾಲಿ ನಿವೇಶನಗಳು ಹಂದಿಗಳ ಅಡ್ಡೆಯಾಗಿ ಪರಿವರ್ತನೆಯಾಗುತ್ತಿವೆ ಆದ್ದರಿಂದ ವಾರ್ಡನಲ್ಲಿ ಜೀವನ ಮಾಡುವ ವಸತಿ ಗೃಹಗಳಿಗೆ ಸೂಕ್ತ ರಕ್ಷಣೆ ನೀಡುವ ಹೊಣೆಗಾರಿಕೆ ನಮ್ಮ ಮೇಲೆ ಇದೆ ಆದ್ದರಿಂದ ವಾರ್ಡನಲ್ಲಿ ಇರುವ ಅಂಗನವಾಡಿ ಕೇಂದ್ರ ಮುಂದೆ ಸ್ವಚ್ಚತೆ ಇಲ್ಲ ಆದ್ದರಿಂದ ತುರ್ತಾಗಿ ಸ್ವಚ್ಚತೆ ಮಾಡಿಸಿ ಅನುವು ಮಾಡಿಕೊಡಿ ಎಂದರು.

ಇದೇ ಸಂಧರ್ಭದಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕ ಮಹಾಲಿಂಗಪ್ಪ , ಜೆ.ಡಿ.ಎಸ್ ತಾಲೂಕು ಉಪಾಧ್ಯಕ್ಷರಾದ ಶ್ರೀಧರ ಆಚಾರ್, ಇತರರು ಇದ್ದರು.

About The Author

Namma Challakere Local News
error: Content is protected !!