ಚಳ್ಳಕೆರೆ : ಸಂಗೀತವು ಮನುಕುಲಕ್ಕೆ ಬೇಕಾದ ನೆಮ್ಮದಿ ಸಹಬಾಳ್ವೆ ಸೌಹಾರ್ದತೆ ಪ್ರೀತಿ ಕರುಣೆ ಮಮತೆ ತಂದುಕೊಡುವುದಲ್ಲದೆ ಉತ್ತಮ ಬದುಕನ್ನು ರೂಪಿಸುತ್ತದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಡಾ. ಕಾಟಂಲಿAಗಯ್ಯ ಹೇಳಿದ್ದಾರೆ.
ಅವರು ಹೋಬಳಿಯ ಸಮೀಪದ ಎನ್.ದೇವರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆ ಮುಂದಲಟ್ಟಿ ಗ್ರಾಮದಲ್ಲಿ ಶ್ರೀ ರಾಜರಾಜೇಶ್ವರಿ ಕೃಪಾಪೋಷಿತ ನಾಟಕ ಮಂಡಳಿ ಮತ್ತು ಕಿಚ್ಚ ಸುದೀಪ್ ಗೆಳೆಯರ ಬಳಗ ಹಾಗೂ ಶೂನ್ಯದ ಮಾರಮ್ಮನ ಹಬ್ಬ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಸಾಮಾಜಿಕ ನಾಟಕ ಹೂವಿಗಾಗಿ ದುಂಬಿ ಸಾವು ಅರ್ಥಾರ್ಥ್ ಬಿರುಗಾಳಿಗೆ ಸಿಲುಕಿದ ಪ್ರೇಮಿಗಳು ಎಂಬ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ
ನಾಟಕ ಕಲೆ ಸಂಸ್ಕೃತಿಗಳು ದೇಶದ ಪ್ರತೀಕ ಅವುಗಳನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು.
ಪ್ರತಿಯೊಬ್ಬರಲ್ಲಿ ಕಲೆ ಕಲಾವಿದ ನೀಡುತ್ತಾನೆ ಅದನ್ನು ಇಂತಹ ವೇದಿಕೆಗಳು ಅನಾವರಣಗೊಳಿಸುತ್ತವೆ ಬಹಳ ಹಿಂದಿನ ಕಾಲದಿಂದಲೂ ಗ್ರಾಮೀಣ ಪ್ರದೇಶದಲ್ಲಿ ಯಕ್ಷಗಾನ ಜಾನಪದ ಸಾಮಾಜಿಕ ನಾಟಕಗಳು ನಡೆಸುತ್ತಾ ಬಂದಿದ್ದಾರೆ ಎಲ್ಲರಿಗೂ ಗೊತ್ತಿದ್ದರೂ ಪದೇಪದೇ ನೋಡಬೇಕು ಎಂಬ ಇಂಗಿತ ಎಲ್ಲರಲ್ಲಿ ಇರುತ್ತದೆ ಕಲೆ ಮತ್ತು ಸಂಸ್ಕೃತಿ ನಮ್ಮ ದೇಶದ ಜನರಲ್ಲಿ ಹೇಗೆ ಬೆರೆತಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದರು ಇತ್ತೀಚಿನ ದಿನಗಳಲ್ಲಿ ಟಿವಿ ಸಿನಿಮಾ ಹಾಗೂ ರಿಯಾಲಿಟಿ ಶೋ ಧಾರಾವಾಹಿ ಹೆಚ್ಚುವುದರ ಪರಿಣಾಮ ನಾಟಕಗಳ ಪ್ರದರ್ಶನ ಗಣನೀಯವಾಗಿ ಕಡಿಮೆಯಾಗುತ್ತಾ ಒಂದು ನಶಿಸುವ ಹಂತವನ್ನು ತಲುಪಿರುವುದು ವಿಷಾದನೀಯ ಎಂದರು.
ಇನ್ನೂ ಇದೇ ವೇಳೆ ಗ್ರಾಮಸ್ಥರಿಂದ ಗ್ರಾಮದ ಪ್ರಪ್ರಥಮ ಸರ್ಕಾರಿ ನೌಕರ ಸಾಪಿ ಹರೀಶ್ ಕುಮಾರ್ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಕಾಟಂಲಿAಗಯ್ಯ ಪಿ.ಹರೀಶ್ ಕುಮಾರ್ ರವರನ್ನ ಸನ್ಮಾನಿಸಿ ಮಾತನಾಡಿ ಕಿರ್ಮುನ್ದಟ್ಟಿ ಗ್ರಾಮದಲ್ಲಿ ಪ್ರಪ್ರಥಮವಾಗಿ ಸರ್ಕಾರಿ ನೌಕರಿ ಪಡೆದಂತ ಗ್ರಾಮದ ಏಕೈಕ ಯುವಕ ಎಂದರೆ ಪಿ ಹರೀಶ್ ಕುಮಾರ್ ಅವರ ಸಾಧನೆಯನ್ನು ಮೆಚ್ಚಿ ಇಂದು ಗ್ರಾಮಸ್ಥರಲ್ಲಿ ಸನ್ಮಾನಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಡಾ. ಕಾಟಂಲಿAಗಯ್ಯ. ಮಾಜಿ ಅಧ್ಯಕ್ಷ ಟಿ ಕಾಟಯ್ಯ ವರವು, ಉಪಾಧ್ಯಕ್ಷೆ ಅಕ್ಕಮ್ಮ ರಾಜಣ್ಣ ವರವು, ಸದಸ್ಯರಾದ ಆರ್ ಬಸವರಾಜ್ ,ರತ್ನಮ್ಮ ರಾಜಣ್ಣ, ರಾಯಮ್ಮ ಬೈಯಣ್ಣ, ರಾಜಯ್ಯ ಮರಯ್ಯನಹಟ್ಟಿ, ಮತ್ತು ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ -2 ಎಸ್ ಬಸವರಾಜ್, ಮುಸ್ತೂರಪ್ಪ, ಮಂಜುನಾಥ್ ,ಮಹೇಶ್, ಹಾಗೂ ಊರಿನ ಮುಖಂಡರಾದ ಕೆ ತಿಪ್ಪೇಸ್ವಾಮಿ ,ಚಂದ್ರಣ್ಣ, ಬಿ ತಿಪ್ಪೇಸ್ವಾಮಿ, ಕುರಿ ತಿಪ್ಪಯ್ಯ ನಾಗರಾಜ್ ಸೇರಿದಂತೆ ಕೆರೆಮುಂದಲಹಟ್ಟಿ, ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು