ಚಳ್ಳಕೆರೆ : ತಾಯಿನಾಡಿನ ಜನ್ಮ ಭೂಮಿಯ ಋಣ ತೀರಿಸುವ ಕಾಲ ಬಂದಿದೆ, ಆದ್ದರಿಂದ ನಿಮ್ಮೆಲ್ಲಾರ ಪ್ರೀತಿ ವಿಶ್ವಾಸ ನನ್ನ ಮೇಲೆ ಇದ್ದರೆ ಈ ಬಾರಿ ನಿಮ್ಮ ಸೇವೆ ಮಾಡಲು ಬಂದಿದ್ದನೆ ಎಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಪ್ರಭಕರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಘಟಪರ್ತಿ ಗ್ರಾಮದಲ್ಲಿ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಶುಭೋಧಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇವರೆಡ್ಡಿಹಳ್ಳಿ ಗ್ರಾಮದಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಗೇಶ್ ರೆಡ್ಡಿ ಅವರ ಮನೆ ಮೇಲೆ ಪಕ್ಷದ ಬಾವುಟ ಹಾರಿಸಿದರು.
ಈಡೀ ಕ್ಷೇತ್ರದಲ್ಲಿ ನಿಮ್ಮ ಮನೆ ಮಗನಾಗಿ ನಿಮ್ಮ ಸೇವೆಗೆ ಬಂದಿರುವೆ, ಹಿಂದಿನ ಕಾಲದ ಶ್ರೀರಾಮನಂತೆ ಆಧುನಿಕ ಕಾಲದ ನಿಮ್ಮ ಪ್ರಭಾಕರ್ ಬಂದಿದ್ದಾನೆ ಆರ್ಶಿವದಿಸಿ ಎಂದರು.
ಇನ್ನೂ ಇದೇ ಸಂಧರ್ಭದಲ್ಲಿ ಘಟಪರ್ತಿ ಗ್ರಾಮದ ಬಿಜೆಪಿ ಮುಖಂಡ ನವೀನ್ ಕುಮಾರ್, ಯಲ್ಲಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶ್, ಓಬಳ ರೆಡ್ಡಿ ಮಲ್ಲಿಕಾರ್ಜುನ್, ಎರ್ರಿ ಸ್ವಾಮಿ , ನಾಗರೆಡ್ಡಿ , ನಾಗರಾಜು, ಜಯಣ್ಣ ಮಂಜುನಾಥ್ , ಜಗನ್, ತಿಮ್ಮರಾಜು ಮತ್ತಿತರರು ಉಪಸ್ಥಿತರಿದ್ದರು.