ಚಳ್ಳಕೆರೆ : ವಾಹನ ಸಾವರರು ಹೆಲ್ಮೆಟ್ ಹಾಗೂ ಸಂಚಾರ ನಿಯಮಗಳನ್ನು ಪಾಲಿಸಿದರೆ ಸವಾರರು ತಮ್ಮ ಪ್ರಾಣ ಉಳಿಸಿಕೊಳ್ಳಬಹುದು ಎಂದು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಅಧ್ಯಕ್ಷ ಡಿ.ರಂಗಸ್ವಾಮಿ ಹೇಳಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರಲ್ಲಿ ಜ.17 ರಂದು ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ವತಿಯಿಂದ ರಾಜ್ಯ ರಸ್ತೆ ಸುಕ್ಷತೆ ಜಾಗೃತಿ ಸಮಾವೇಶದ ಪೂರ್ವ ಬಾವಿ ಸಭೆಯಲ್ಲಿ ಮಾತನಾಡಿದರು. ವಾಹನ ಸವಾರರು ರಸ್ತೆ ಸಂಚಾರಿ ನಿಯಮ ಹಾಗೂ ಹೆಲ್ಮೆಟ್ ಧರಿಸದೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ ಆದ್ದರಿಂದ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡುವ ಹೆಲ್ಮೆಟ್ ಬಳಕೆ ಮಾಡದೆ ಇರುವುದು ಹಾಗೂ ಚಾಲನೆ ಪರವಾನಿಗೆ ಇರುವುದಿಲ್ಲ ಆದರೂ ಸಹ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎಂದರು.
ಇನ್ನೂ ಟ್ರಸ್ಟನ ಸದಸ್ಯ ಶಶಿಧರ ಮಾತನಾಡಿ, ಹೆಲ್ಮೆಟ್ ಹಾಗೂ ಸಂಚಾರ ನಿಯಮಗಳನ್ನು ಪಾಲಿಸಿದರೆ ಸವಾರರು ತಮ್ಮ ಪ್ರಾಣ ಉಳಿಸಿಕೊಳ್ಳಬಹುದು ಆದ್ದರಿಂದ ಜಾಗೃತಿ ಮೂಡಿಸುವ ಜತೆಗೆ ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುವುದು ಎಂದು ತಿಳಿಸಿದರು.
ಕಾಟೇಶ್ ಮಾತನಾಡಿ ಸಂಜೀನಿಜೀವ ರಕ್ಷಕ ಟ್ರಸ್ಟ್ವತಿಯಿಂದ ರಕ್ಷಣೆಯಿಂದ ಪಾರಾದರೂ ಸುಮಾರು 2 ಸಾವಿರು ಯುಕವರು ಟ್ರಸ್ಟ್ಗೆ ಸೇರಿಕೊಂಡು ರಸ್ತೆ ಸುಕ್ಷತಾ ಬಗ್ಗೆ ಜಾಗೃತಿ ಹಾಗೂ ಪ್ರಾಣ ಉಳಿಸಲು ಮುಂದಾಗಿದ್ದಾರೆ ಎಂದರು.
ಅಪಘಾತವಾದ ಸ್ಥಳಕ್ಕೆ ಗಾಯಾಳುಗಳನ್ನು ಸಾಗಿಲು ನಮ್ಮಲ್ಲಿ ಯಾವುದೇ ವಾಹನವಿಲ್ಲ ತುರ್ತುವಾಹನಕ್ಕೆ ಕರೆ ಮಾಡುತ್ತೇವೆ ಬರದಿದಲ್ಲ ಆಟೋ, ಹಾಗೂ ನಮ್ಮಲ್ಲಿ ಕೆಲಸ ಮಾಡುವ ಯುವಕ ವಾಹನಗಳನ್ನು ತರಿಸಿ ಕರೆದುಕೊಂಡು ಹೋಗಿ ಜೀವ ರಕ್ಷಣೆ ಮಾಡುತ್ತೇವೆ ನಗರದಲ್ಲಿ ನಡೆಯುವ ಸಮವೇಶದಲ್ಲಿ ರಸ್ತೆ ಸುಕ್ಷತಾ ಜಾಗೃತಿ ಮೂಡಿಸಲಾಗುವದುದು ಜಿಲ್ಲೆಯ ವಿವಿಧ ಕಡೆಗಳಿಂದ ಸಮವೇಶಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಶ್ರೀನಿವಾಸ್, ಮಂಜುನಾಥ್, ಪ್ರಭು, ಶರತ್,
ಇತರರಿದ್ದರು.