ಚಳ್ಳಕೆರೆ : ಇಂದು ದೇಶದ ರಕ್ಷಣೆಗೆ ಸೈನಿಕರು ಒಬ್ಬರಾದರೆ, ದೇಶದ ಆರ್ಥಿಕ ಸುವ್ಯವಸ್ಥೆಗೆ ಎಲ್ಐಸಿ ಜಿವಾ ವಿಮಾ ಇರುವುದು ನಮ್ಮೆಲ್ಲಾರ ಹೆಮ್ಮೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭಾರತೀಯ ಜೀವವಿಮಾ ಪ್ರತಿನಿಧಿಗಳ ಚಳ್ಳಕೆರೆ ಶಾಖೆವತಿಯಿಂದ ಸರ್ವಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು, ಇಂದು ಸುಮಾರು ಕೋಟಿಗಟ್ಟಲೆ ಸದಸ್ಯರು ಹೊಂದಿರುವ ಸಂಸ್ಥೆಯೆAದರೆ ಅದು ಎಲ್ಐಸಿ ಜೀವಾವಿಮಾ ಕಂಪನಿ ಮಾತ್ರ ಇಂತಹ ಒಂದು ದೊಡ್ಡ ಸಂಸ್ಥೆಯಲ್ಲಿ ಸಾವಿರಾರು ಪಾಲಿಸಿದಾರರು ತಮ್ಮ ಜೀವ ರಕ್ಷಣೆಗೆ ಇರುವ ಅಮೂಲ್ಯವಾದ ವಿಮೆ ಕುಟುಂಬದ ಆರ್ಥಿಕ ನೆರವಿಗೆ ಉಪಯುಕ್ತವಾಗುತ್ತದೆ ಎಂದರು.
ಇನ್ನೂ ಲಿಯಾಪಿ ದಕ್ಷಿಣವಲಯ ಅಧ್ಯಕ್ಷ ಮಲ್ಲಿಕಾರ್ಜುನ ನಾಡಗೌಡ, ಸಾಹಿತಿ ತಿಪ್ಪಣ್ಣ ಮರಿಕುಂಟೆ, ಡಾ.ವೀರಭದ್ರಪ್ಪ, ಪೂಜಾರಿ ಪರಸಪ್ಪ, ಮಾತನಾಡಿದರು, ಸಭೆಯಲ್ಲಿ ಎಲ್ಐಸಿ ದುರ್ಗಾವಾರ ರಂಗಸ್ವಾಮಿ, ಲಿಯಾಫಿ ಶಿವಮೊಗ್ಗ ವಿಭಾಗದ ಅಧ್ಯಕ್ಷ ಪಿ.ಕೆ.ನಾಗೇಶ್ರಾವ್, ಸತೀಶ್ ಕುಮಾರ್, ಶೇಖರ್, ನಾಯ್ಕ್, ಕೆಪಿ.ಚನ್ನಪ್ಪ, ಗಂಜೇದ್ರ, ಕುಮಾರ್, ಕರೆಗೌಡ್ರು, ರಘು, ಪ್ರಸನ್ನಕುಮಾರ್, ಎಸ್ಎಸ್.ಕುಮಾರ್, ಎ.ಚಿದಾನಂದಪ್ಪ, ಚಿದಾನಂದಸ್ವಾಮಿ, ಮೈಲಾರಪ್ಪ ಇತರರು ಇದ್ದರು.

