ಚಳ್ಳಕೆರೆ : ಬೆಳಂ ಬೆಳಿಗ್ಗೆ ರಸ್ತೆಗಿಳಿದ ನಗರಸಭೆ ಅಧಿಕಾರಿಗಳು, ವಾರ್ಡನ ಜನರ ಸಮಸ್ಯೆಗಳನ್ನು ಆಲಿಸುತ್ತಾ ಸ್ಥಳದಲ್ಲಿ ಪರಿಹಾರ…!!
ಚಳ್ಳಕೆರೆ : ಬೆಳಂ ಬೆಳಿಗ್ಗೆ ರಸ್ತೆ ಗೀಳಿದ ನಗರಸಭೆ ಅಧಿಕಾರಿಗಳು, ವಾರ್ಡನ ಜನರ ಸಮಸ್ಯೆಗಳನ್ನು ಆಲಿಸುತ್ತಾ ಸ್ಥಳದಲ್ಲಿ ಪರಿಹಾರ ರೂಪಿಸುವ ಮಹತ್ವದ ಯೋಜನೆಗೆ ಇಂದು ಚಾಲನೆ ನೀಡಿದರು.
ನಗರದ 31 ವಾರ್ಡ್ ಗಳ ಸರ್ವರ್ತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾದ್ಯಕ್ಷೆ ಮಂಜುಳಾ , ಪೌರಾಯುಕ್ತ ಸಿ.ಚಂದ್ರಪ್ಪ ಮುಂಜಾನೆ ನಸುಕಿನಲ್ಲಿ ರಸ್ತೆಗಿಳಿದು ಜನರ ಸಮಸ್ಯೆಗಳಿಗೆ ಸ್ಥಳದಲ್ಲಿ ಸೂಕ್ತ ಪರಿಹಾರ ಹೊದಗಿಸುವ
31 ವಾರ್ಡ್ ಗಳ 15 ದಿನದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇಂದು ಮುಂಜಾನೆ ನಗರ ವಿಕ್ಷಣೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.
ಇಂದು ಮೊದಲನೇ ದಿನದ ವಾರ್ಡ್ ಒಂದು ಮತ್ತು ಎರಡನೇ ವಾರ್ಡ್ ಗೆ ಬೇಟಿ ನೀಡಿದ ನಗರಸಭೆ ಸಿಬ್ಬಂದಿಗಳ ಜೊತೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ನಗರ ಪ್ರದಕ್ಷಿಣೆ ಮಾಡಿ ವಾರ್ಡ್ ನ ಜನರ ಸಮಸ್ಯೆ ಆಲಿಸಿನಂತರ ಸ್ಥಳದಲ್ಲಿ ಸೂಕ್ತ ಪರಿಹಾರ ಹೊದಗಿಸಿದರು.
ವಾರ್ಡ್ ನಲ್ಲಿ ಚರಂಡಿ ಸಮಸ್ಯೆ,, ರಸ್ತೆ, ಸ್ವಚ್ಛತೆ ಈಗೇ ವಿವಿಧ ಸಮಸ್ಯೆ ಗಳನ್ನು ಆಲಿಸಿದ ಅಧಿಕಾರಿಗಳು ಪಟ್ಟಿಮಾಡಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ನೀಡಿ ಕೆಲವು ಸಮಸ್ಯೆಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಿ ಕಾಮಗಾರಿ ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಸುಮಕ್ಕ ಹೇಳಿದ್ದಾರೆ.
ಇಧೇ ಸಂಧರ್ಭದಲ್ಲಿ ಉಪಾಧ್ಯಕ್ಷೆ ಮಂಜುಳಾ, ಪೌರಾಯುಕ್ತ ಸಿ.ಚಂದ್ರಪ್ಪ, ಸಿಬ್ಬಂದಿ, ಪೌರಕಾರ್ಮಿಕರು ಇದ್ದರು.