ಚಳ್ಳಕೆರೆ : ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಾಕೀಯ ನೆತಾರರು ವಿವಿಧ ಕ್ರೀಡೆಗಳನ್ನು ಹಾಡಿಸುವುದು, ಹಣ ನೀಡಿವುದು ಮಾಮೂಲು ಹಾಗಿದೆ ಆದರೆ ಇಲ್ಲೋಂದು ಪ್ರಕರಣ ಮಾತ್ರ ಬೇರೆ ಹಾಗಿದೆ ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಕಾಣದೆ ನಮ್ಮ ದುಡ್ಡು ನಮ್ಮ ಆಟ ಎಂಬAತೆ ನಾವೇ ಬರಬೇಕು ಅನ್ಯ ಪಕ್ಷದವರು ಬರಬಾರದು ಎಂಬ ನಿಲುವಿನಲ್ಲಿ ಇಲ್ಲೋಂದು ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಭೀಮಗೊಂಡನಹಳ್ಳಿ ಗ್ರಾಮದ ಯುವಕರು ಜ.3ರಿಂದ 6ರ ತನಕ ಮೂರು ದಿನಗಳ ಕಾಲ ಆಯೋಜನೆ ಮಾಡಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್‌ಗೆ ಕ್ರೀಡೆಯಲ್ಲಿ ಗೆದ್ದ ಕ್ರೀಡಾಪಟುಗಳಿಗೆ 30ಸಾವಿರ ರೂ ಕೊಡುವುದಾಗಿ ಬಿಜೆಪಿ ಪಕ್ಷದ ಮುಖಂಡರು ಭರವಸೆ ನೀಡಿದ್ದರು ಎನ್ನಲಾಗಿದೆ.

ಕ್ರೀಡಾಕೂಟಕ್ಕೆ ಕಾಂಗ್ರೆಸ್ ಮುಖಂಡ ಡಾ.ಯೋಗೇಶ್ ಬಾಬು ಆಹ್ವಾನ ನೀಡಿದ್ದಕ್ಕೆ ಕ್ರೀಡಾ ಕೂಟಕ್ಕೆ ಅವರನ್ನು ಕರೆಸಿದ್ದೀರಿ ಎಂದು ಹಣ ನೀಡದೆ ಇರುವುದರಿಂದ ಪಂದ್ಯಾವಳಿಯ ಆಯೋಜಕರು ಕಿಡಿಕಾರಿದ್ದಾರೆ.
ಪಂದ್ಯಾವಳಿ ಉದ್ಘಾಟನೆಗೆ ಕಾಂಗ್ರೆಸ್ ಮುಖಂಡ ಡಾ.ಬಿ. ಯೋಗೇಶ್‌ಬಾಬು ಅವರನ್ನು ಆಹ್ವಾನಿಸಿದ್ದ ಕಾರಣಕ್ಕಾಗಿ ಬಹುಮಾನದ ಹಣವನ್ನು ಕೊಡಲು ಆಗುವುದಿಲ್ಲ ಎಂದು ಕೀಳು ಮಟ್ಟದ ರಾಜಕಾರಣದಂತೆ ಮುಖಂಡರು ನಡೆದುಕೊಂಡಿದ್ದಾರೆ ಎಂದು ಯುವಕರು ಬೇಸರ ವ್ಯಕ್ತಪಡಿಸಿದ್ದಾರೆ.
ಸುತ್ತ ಹಳ್ಳಿಗಳಿಂದ ಸುಮಾರು 12ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಉತ್ಸಾಹದಿಂದ ಪ್ರದರ್ಶನ ಮಾಡಿದ್ದಾರೆ. ಕ್ರೀಡಾ ಸಂಸ್ಕೃತಿ ಮತ್ತು ಗ್ರಾಮದ ಮರ್ಯಾದೆ ಉಳಿಸಿಕೊಳ್ಳಲು ಆಯೋಜಕರ ಸಮಿತಿಯ ಪಿ.ಒ. ತಿಪ್ಪೇಸ್ವಾಮಿ, ಎಚ್. ನಾಗೇಂದ್ರಪ್ಪ ಮತ್ತು ಗೆಳೆಯ ಬಳಗದವರು ಗೆದ್ದ ಕ್ರೀಡಾ ಪಟುಗಳಿಗೆ ಬಹುಮಾನದ ಹಣ ನೀಡಲು ಗ್ರಾಮದಲ್ಲಿ ಇತರರು .ಇಂತಿಷ್ಟು ಚಂದಾ ಹಣ ಸಂಗ್ರಹ ಮಾಡಿ ಗೆಲುವಿನ ತಂಡಗಳಿಗೆ ಗೌರವ ನೀಡಿದ್ದೇವೆ ಎಂದು ಮಾಧ್ಯಮದೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಸ್ಥಳೀಯ ಗೌಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಒ. ಓಬಳೇಶ್ ಅವರು ಬಿಜೆಪಿ ಪಕ್ಷದ ಮುಖಂಡರ ಬಳಿ ಮಾತನಾಡಿಕೊಂಡು ಮೊದಲ ಬಹುಮಾನದ 30 ಸಾವಿರ ರೂಗೆ ಒಪ್ಪಿಗೆ ಪಡೆಯಲಾಗಿತ್ತು. ಇದರಂತೆ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಜ.6ರಂದು ಪಂದ್ಯಾವಳಿ ಅಂತಿಮವಾಗಿರುವ ಕಾರಣ ಬಹುಮಾನದ ಹಣ ಕೇಳಿದ್ದಕ್ಕೆ ಕಾಂಗ್ರೆಸ್‌ನ ಮುಖಂಡರನ್ನು ಆಹ್ವಾನಿಸಿದ್ದಕ್ಕೆ ಬಹುಮಾನದ ಹಣ ಕೊಡಲು ನಿರಾಕರಿಸಿದ್ದಾರೆ ಎಂದು ಒ. ನಾಗರಾಜನಾಯಕ, ಎನ್. ನಾಗೇಂದ್ರಪ್ಪ, ಪಿ.ಒ. ತಿಪ್ಪೇಸ್ವಾಮಿ, ಕೆ.ಒ. ಓಬಳೇಶ, ಟಿ. ರಮೇಶ, ಕೆ.ಪಿ. ಓಬಳೇಶ, ಇ. ಇಪ್ಪೇಸ್ವಾಮಿ, ಎನ್. ಸುದೀಪ್, ಕೆ. ವೆಂಕಟೇಶ, ಕೆ.ಜಿ. ಕುಮಾರ, ಬಿ. ನಾಗೇಶ ಬೇಸರ ವ್ಯಕ್ತಪಡಿಸಿದ್ದಾರೆ.

About The Author

Namma Challakere Local News
error: Content is protected !!