ಚಿತ್ರದುರ್ಗ : ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಪಂ ಸಿಇಒ ದಿಢೀರ್ ಭೇಟಿ ಹಾಜರಾತಿಯಲ್ಲಿ ಸಹಿ ಸಿಬ್ನಂದಿಗಳು ಗೈರು ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಆರೋಗ್ಯಾಧಿರಿಗಳಿಗೆ ತಾಕೀತು. ಹಿರಿಯೂರು ತಾಲೂಕಿನ ಐಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ಮಧ್ಯಾಹ್ನ 3, ಗಂಟೆಗೆ ಜಿಪಂ ಸಿಇಒ ದಿವಾಕರ್ ಭೇಟಿ ನೀಡಿದಾಗ, ಆರೋಗ್ಯಾಧಿಕಾರಿಗಳು ಹಾಜರಾತಿಯಲ್ಲಿ ಸಹಿ ಮಾಡಿದ್ದು,ಹಾಜರಿರುವುದಿಲ್ಲ.
ಅಲ್ಲಿ ಹಾಜರಿದ್ದ ಸಿಬ್ಬಂದಿ ರಜೆ ಎಂದು ತಿಳಿಸಿರುತ್ತಾರೆ. ಮತ್ತೊಬ್ಬ ಸಿಬ್ಬಂದಿ ಬೆಳಿಗ್ಗೆ ದೂರವಾಣಿ ಕರೆ ಮಾಡಿ ರಜೆ ಎಂದು ತಿಳಿಸಿರುವುದಾಗಿ ಹೇಳಿದ್ದು, ಅವರ ಹೆಸರಿನ ಮುಂದೆ ಸಹಿ ಮಾಡಿರುತ್ತಾರೆ. ಮೇಲ್ನೋಟಕ್ಕೆ ಗೈರು ಹಾಜರಿದ್ದ ಸಿಬ್ಬಂದಿ ಪರವಾಗಿ ಬೇರೆ ಯಾರೋ ಹಾಜರಾತಿಯಲ್ಲಿ ಸಹಿ ಮಾಡಿರುವುದು ಕಂಡು ಬಂದಿದ್ದು, ಇದು ಅಪರಾಧವಾಗಿರುತ್ತದೆ. ಕೆಲವು ಸಿಬ್ಬಂದಿಗಳ ಹೆಸರಿನ ಮುಂದೆ ನಿಯೋಜನೆ ಎಂದು ಬರೆದಿರುತ್ತಾರೆ. ಇನ್ನೂ ಕೆಲವರ ಹೆಸರಿನ ಮುಂದೆ 3 ದಿನ ನಿಯೋಜನೆ ಎಂದು ಬರೆದಿರುತ್ತಾರೆ. ಇವೆಲ್ಲಾ ನಿಯೋಜನೆಗಳು ಸಕ್ರಮ ಪ್ರಾಧಿಕಾರದಿಂದ ಅಗಿದೆಯೇ ಅಥವಾ ಅವರೇ ನಿರ್ಧರಿಸಿರುತ್ತಾರೆಯೇ ಎಂಬ ಬಗ್ಗೆ ಪರಿಶೀಲಿಸಿ ವರದಿ
ನೀಡುವುದು ಹಾಗೂ ಗೈರು ಹಾಜರಾದ ಸಿಬ್ಬಂದಿಗಳ ಮುಂದೆ ಸಹಿ ಮಾಡಿರುವವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿಗೆ ಶಿಫಾರಸ್ಸು ಮಾಡಲು ಸೂಚಿಸಿದೆ.
ಈ ರೀತಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳ ನಿಯೋಜನೆ ಹಾಗೂ ಗೈರು ಹಾಜರಾತಿಯನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲು ಎಚ್ಚರಿಕೆ ನೀಡಿದ್ದಾರೆ. ಗೈರು ಹಾಜರಿ.ನಿಯೋಜನೆ ಬಗ್ಗೆ ತಪ್ಪು ಮಾಹಿತಿ ನೀಡಿ ಸಿಬ್ಬಂದಿ ಗಳ ಬಗ್ಗೆ 7 ದಿನಗಳೊಳಗಾಗಿ ವರದಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿವಾಕರ್ ಸೂಚನೆ ನೀಡಿದ್ದಾರೆ.