ಚಳ್ಳಕೆರೆ : ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಪ್ರತಿಭೆ ಎನ್ನುವುದು ಹಾಸುಹೊಕ್ಕಾಗಿದೆ ಅಂತಹ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮಾತ್ರ ಸಾರ್ಥಕವಾಗುತ್ತದೆ ಎಂದು ಸಮಾಜ ಸೇವೆಕ ಎಲ್‌ಐಸಿ.ರಂಗಸ್ವಾಮಿ ಹೇಳಿದ್ದಾರೆ.
ಅವರು ತಾಲೂಕಿನ ತಳಕು ಸಮೀಪದ ಹೊಸಳ್ಳಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭೆ ಎಂಟನೇ ತರಗತಿ ವಿದ್ಯಾರ್ಥಿ ಮಂಜುನಾಥ ಎಂಬುವವರಿಗೆ ಉಪ್ಪಾರ ಸಂಘದಿAದ ಆರ್ಥಿಕ ಸಹಾಯ ಮಾಡುವ ಮೂಲಕ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದರು.
ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಪ್ರಾಣಿಗಳ ಮಿಮಿಕ್ರಿ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಎಂಟನೇ ತರಗತಿ ವಿದ್ಯಾರ್ಥಿ ಮಂಜುನಾಥ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ಕೆ ಹೋಗಲು ಹಣದ ಕೊರತೆ ಇರುವುದರಿಂದ ಹಿನ್ನಡೆಯಾಗಿತ್ತು ಆದರೆ ವಿಷಯ ತಿಳಿದ ತಾಲೂಕು ಉಪ್ಪಾರ ಸಮುದಾಯದವತಿಯಿಂದ ಉನ್ನತೀಕರಿಸಿದ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿ ರಾಜ್ಯಮಟ್ಟದಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಿ ಜಯಶೀಲರಾಗಲೆಂದು ಸನ್ಮಾನಿಸಿ ಗೌರವಿಸಿ ಸಹಾಯ ಧನವನ್ನು ನೀಡಿದರು.
ತಾಲೂಕು ಉಪ್ಪಾರ ಸಂಘದ ಗೌರವ ಅಧ್ಯಕ್ಷ ಯಲ್ಲಪ್ಪ, ತಾಲೂಕು ಉಪ್ಪಾರ ಸಂÀಘದ ಅಧ್ಯಕ್ಷ ಹನುಮಂತಪ್ಪ, ಕಾರ್ಯಾಧ್ಯಕ್ಷ ಎಲ್‌ಐಸಿ.ರಂಗಸ್ವಾಮಿ, ತಾಲೂಕು ಉಪ್ಪಾರ ಯುವಕ ಸಂಘದ ತಾಲೂಕು ಅಧ್ಯಕ್ಷ ಡಿ.ಎಂ.ಕೆ.ರವಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎಸ್‌ಟಿ.ತಿಪ್ಪೇಸ್ವಾಮಿ, ಹೆಚ್ ರಂಗನಾಥ, ಮುಖ್ಯ ಶಿಕ್ಷಕ ಶ್ರೀಕಂಠ ಇತರರಿದ್ದರು