ಚಳ್ಳಕೆರೆ : ನಗರದ ಸರ್ವತೋಮುಖ ಅಭಿವೃದ್ದಿಗೆ ಕಂಕಣ ಬದ್ಧರಾದ ನಗರದ ಪ್ರಥಮ ಪ್ರಜೆಗಳು ಬಿಡುವಿಲ್ಲದೆ ನಗರ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.
ಅದರಂತೆ ನಗರಸಭೆ ಉಪಾಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ಪ್ರತಿ ನಿತ್ಯವೂ ಕೂಡ ನಗರದ ವಿವಿಧ ವಾರ್ಡಗಳ ವಿಕ್ಷಣೆ, ಸಾರ್ವಜನಿಕ ಶೌಚಾಲಯ, ಬಸ್ ನಿಲ್ದಾನ, ಸಂತೆ ಪೇಟೆ ಈಗೇ ವಿವಿಧ ಪ್ರಮುಖ ಸ್ಥಳಗಳಿಗೆ ಬೇಟಿ ನೀಡುವ ಮೂಲಕ ಸ್ವಚ್ಚತೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.
ಅದರಂತೆ ನಗರದ ಹೊರ ವಲಯದಲ್ಲಿ ಇರುವ ಘನ ತ್ಯಾಜ್ಯ ವಿಲೆವಾರಿ ಘಟಕಕ್ಕೆ ಬೆಳಂ ಬೆಳಗ್ಗೆ ಬೇಟಿ ನೀಡಿದ ಮಂಜುಳ ಪ್ರಸನ್ನಕುಮಾರ್ ರವರು, ನೂತನ ಯಂತ್ರೋಪಕರಣಗಳನ್ನು ವೀಕ್ಷಣೆ ಮಾಡಿ ನಂತರ ಪರಿಸರ ಅಭಿಯಂತರಿಗೆ ದೂರವಾಣಿ ಕರೆಮಾಡಿ ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಕುಡಿಯುವ ನೀರು, ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು…
ಈ ಬಗ್ಗೆ ಮಾಧ್ಯಮದೊಂದಿಗೆ ಮಾತಾನಾಡಿದ ಅವರು ನಗರವು ದಿನೇ ದಿನೇ ಬೆಳೆಯುತ್ತಿರುವ ಹಿನ್ನಲೆಯಲ್ಲಿ ತ್ಯಾಜ್ಯ ವಿಲೆವಾರಿ ಮಾಡುವ ವಾಹನಗಳನ್ನು ಖರೀದಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು ರಿಪೇರಿಯಲ್ಲಿರುವ ಇನ್ನು ಎರಡು ಜೆಸಿಬಿಗಳನ್ನು ಕೂಡಲೆ ರಿಪೇರಿ ಮಾಡಿಸಲು ಸೂಚಿಸಿದರು….