ಚಳ್ಳಕೆರೆ : ವೇದಚಿತ್ರದ ಪ್ರೋಮೋಷನ್ಗೆ ಆಗಮಿಸಿದ ಶಿವರಾಜ್ ಕುಮಾರ್, ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿಪ್ರಹಾರ
ಚಳ್ಳಕೆರೆ : ವೇದ ಚಿತ್ರದ ಪ್ರೋಮೋಷನ್ ಗೆ ಆಗಮಿಸಿದ ಚಿತ್ರನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ರವರು ಇಂದು ನಗರದ ಬೆಸ್ಕ್ಂ ಸಮೀಪದ ಅಭಿಮಾನಿಗಳೆ ರೂಪಿಸಿದ ಪುನಿತ್ ರಾಜ್ಕುಮಾರ್ ವೃತ್ತದಲ್ಲಿ ಸಾವಿರಾರು ಅಭಿಮಾನಿಗಳ ಆಯೋಜಿಸಿದ್ದ ವೇದ ಚಿತ್ರದ ರೋಡೊ ಶೋ ನಡೆಸಿದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗೂ ಅಪಾರ ಅಭಿಮಾನಿ ಬಳಗ ವೃಂಧ ಸಾಥ್ ನೀಡುವ ಮೂಲಕ ಬೃಹತ್ ಗಾತ್ರದ ಹೂವಿನ ಹಾರವನ್ನು ಕ್ರೇನ್ ಮೂಲಕ ನೆಚ್ಚಿನ ನಟನಿಗೆ ಹಾಕುವ ಮೂಲಕ, ಎರಡು ಕಡೆಯಿಂದ ಜೆಸಿಬಿಗಳಿಂದ ಹೂವಿನ ಸುರಿಮಳೆ ಗೈದರು ಈಗೇ ನಗರದ ಅಂಬೇಡ್ಕರ್ ವೃತ್ತ, ನೆಹರು ವೃತ್ತದ ಮೂಲಕ ಸಾವಿರಾರು ಅಭಿಮಾನಿಗಳದತ್ತ ಶಿವರಾಜ್ ಕುಮಾರ್ ಹಾಗೂ ಚಿತ್ರತಂಡ ಕೈ ಬೀಸಿ ಮುಂದೆ ಸಾಗಿತು.
ನಂತರ ನಗರದ ರಾಮಕೃಷ್ಣ ಚಿತ್ರಮಂದಿರಕ್ಕೆ ತೆರಳಿ ವೇದ ಸಿನಿಮಾವನ್ನು ಕೆಲ ಕಾಳ ವೀಕ್ಷಣೆ ಮಾಡಿದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಪತ್ನಿ ಗೀತಾ ಹಾಗೂ ಚಿತ್ರ ತಂಡ ಮತ್ತೆ ಅಭಿಮಾನಿಗಳತ್ತ ಕೈಬೀಸಿ ಬಳ್ಳಾರಿಗೆ ನಿರ್ಗಮಿಸಿದರು.
ಆದರೆ ನಿರೀಕ್ಷೆ ಮೀರಿದ ಅಭಿಮಾನಿಗಳ ದಂಡು ಬಂದಿದ್ದರಿAದ ಪೊಲೀಸ್ ಇಲಾಖೆ ಬಂದೋ ಬಸ್ತ್ ನೀಡುವ ಸಲುವಾಗಿ ಲಘು ಲಾಠಿ ಪ್ರಹಾರ ಮಾಡಲಾಯಿತು, ಇನ್ನೂ ಚದುರಿದ ಅಭಿಮಾನಿಗ ಬಿದ್ನೋ ಎದ್ನೋ ಎಂದು ಓಡಿ ಹೋದರು, ಅದರೂ ನೆಚ್ಚಿನ ನಟನ ಸೆಲ್ಪಿಗಾಗಿ ಮುಗಿಬಿದ್ದ ಅಭಿಮಾನಿಗಳ ದೃಶ್ಯ ಕಂಡು ಬಂದಿತು.