ಚಳ್ಳಕೆರೆ : ವಿಜ್ಞಾನ ನಗರಿಯಾದ ಚಳ್ಳಕೆರೆಗೆ ದಿನ ನಿತ್ಯವೂ ಗ್ರಾಮೀಣ ಪ್ರದೇಶದಿಂದ ಸಾವಿರಾರು ಸಾರ್ವಜನಿಕರು ಆಗಮಿಸುತ್ತಾರೆ, ಅದರಂತೆ ನಗರದಲ್ಲಿ ಅತಿ ಕ್ರಮಣವಾದ ರಸ್ತೆ ಪಕ್ಕದ ಪುಟ್‌ಬಾತ್ ಸಮಸ್ಯೆ ಜಾಲ್ವಾಂತ ಸಮಸ್ಯೆಯಾಗಿ ಅಧಿಕಾರಿಗಳ ನಿದ್ದೆ ಗೆಡಿಸಿದೆ.
ಹೌದು ನಿಜಕ್ಕೂ ಚಿತ್ರದುರ್ಗ ರಸ್ತೆ, ಪಾವಗಡ ರಸ್ತೆ, ಬಳ್ಳಾರಿ ರಸ್ತೆ, ಮೂಲಕ ಹಾದು ಬರುವ ಸಾರ್ವಜನಿಕ ಪಾದಚಾರಿಗಳ ಪರಸ್ಥಿತಿ ಹೇಳತಿರದು ವೇಗವಾಗಿ ಓಡಾಡುವ ವಾಹನಗಳ ಪಕ್ಕದಲ್ಲಿ ಹಾದುಹೊಗುವ ಜನರು ಅಂಗೈಯಲ್ಲಿ ಜೀವ ಹಿಡಿದು ಸಾಗುವು ಪರಸ್ಥಿತಿ ಎದುರಾಗಿದೆ
ಇಂತಹ ಪರಸ್ಥಿತಿಯನ್ನು ಮನಗಂಡ ಪೊಲೀಸ್ ಇಲಾಖೆ ನಗಸಭೆ ವ್ಯಾಪ್ತಿಯ ಅತಿಕ್ರಮಣವಾಗಿರುವ ಪಾದಚಾರಿಗಳ ರಸ್ತೆಗಳನ್ನು ತೆರವುಗೊಳಿಸುವಂತೆ ಪಿಎಸ್‌ಐ ಕೆ.ಸತೀಶ್ ನಾಯ್ಕ್ ನೋಟಿಸ್ ಜಾರಿ ಮಾಡಲು ಮುಂದಾಗಿದ್ದಾರೆ.
ಚಿತ್ರದುರ್ಗ ಮುಖ್ಯ ರಸ್ತೆಯ ಖಾಸಗಿ ಬಸ್ ನಿಲ್ದಾಣದಿಂದ ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢ ಶಾಲೆಯವರೆಗೆ ಮುಖ್ಯ ರಸ್ತೆಯ ಎರಡು ಬದಿಗಳ ಪಾದಚಾರಿಗಳ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ಪೆಟ್ಟಿಗೆ, ಹಾಗೂ ಶೆಡ್ಡ್ಗಳನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು ಕೂಡಲೆ ತೆರೆವುಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹಾಗೂ ಸಾರ್ವಜನಿಕರು ದೂರಿನ ಮೇರಿಗೆ ತೆರವುಗೊಳಿಸಲು ನೋಟಿಸ್ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಪುಟ್ ಬಾತ್ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು, ವೃದ್ದರು, ಸಾರ್ವಜನಿಕರು ಓಡಾಡಲು ತೊಂದರೆಯಾಗುತ್ತಿದ್ದು ವಾಹನಗಳ ಕಿರಿಕಿರಿ, ದಟ್ಟಣೆಯಿಂದಾಗಿ ಅಪಘಾತವಾಗುತ್ತಿರುತ್ತದೆ. ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡತಕ್ಕದ್ದು, ಇಲ್ಲವಾದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆಯ ನೋಟಿಸ್ ಜಾರಿಗೊಳಿಸಿದೆ.