ಚಳ್ಳಕೆರೆ : ಯುವಜನತೆ ಕ್ರೀಡಾ ಮನೋಭಾವ ಬೆಳೆಸಿಕೊಂಡು ಪ್ರತಿಯೊಬ್ಬರೂ ಪ್ರೋತ್ಸಾಹವನ್ನು ನೀಡಬೇಕು ಎಂದು ಡಾ. ಯೋಗೇಶ್ ಬಾಬು ಹೇಳಿದ್ದಾರೆ.
ಅವರು ತಾಲೂಕಿನ ನಾಯಕನಹಟ್ಟಿ ಹೋಬಳಿಯ ಭೀಮಗೊಂಡನಹಳ್ಳಿಯಲ್ಲಿ ನಾಲ್ಕನೇ ವರ್ಷದ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಯುವಕರು ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಲು ಕ್ರೀಡೆ ಮಹತ್ವವಾದದ್ದು ಗ್ರಾಮದಲ್ಲಿ ನಾಲ್ಕನೇ ವರ್ಷದ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿರುವುದು ಸಂತಸ ತಂದಿದೆ.
ಕ್ರೀಡಪಟ್ಟುಗಳು ಶಾಂತಿ ರೀತಿಯಿಂದ ಕ್ರೀಡೆಯನ್ನು ಭಾಗವಹಿಸಿ ತೀರ್ಪುಗಾರರು ನೀಡಿದ ತೀರ್ಪಿಗೆ ಬದ್ಧರಾಗಿರಬೇಕು ಅಂಪರ್ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು ಕ್ರೀಡೆ-ಪುಟುಗಳಿಗೆ ತಿಳಿಸಿದರು.
ಇದೆ ವೇಳೆ ಮಾಜಿ ಅಧ್ಯಕ್ಷ ಟಿ ರಂಗಪ್ಪ ಮಾತನಾಡಿ ಕ್ರೀಡೆ ಎಂಬುವುದು ನಮ್ಮ ಜೀವನದ ಭಾಗವಾಗಿದ್ದು ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಭಿವೃದ್ಧಿಯ ಮೂಲವಾಗಿದೆ ಕ್ರೀಡೆಗೆ ಹೆಚ್ಚಿನ ಒಲವು ತೋರಬೇಕು ನಮ್ಮ ದೇಹವನ್ನು ಶಕ್ತಿಯುತಗೊಳಿಸಲು ಕ್ರೀಡೆ ಸಹಕಾರಿಯಾಗಿದೆ ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳು ಕಣ್ಮರೆಯಾಗಿದೆ ಆದ್ದರಿಂದ ಯುವ ಪೀಳಿಗೆ ಗ್ರಾಮೀಣ ಗ್ರಾಮೀಣ ಪ್ರದೇಶದಲ್ಲಿ ನಡೆಯುವಂತಹ ಕಬ್ಬಡಿ ಖೋ ಖೋ ಕ್ರಿಕೆಟ್ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು ನನಗೂ ಸಹ ಚಿಕ್ಕಂದಿನಿAದ ಕ್ರಿಕೆಟ್ ಎಂದರೆ ಬಹಳ ಇಷ್ಟ ಎಂಥ ಕ್ರೀಡೆಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ನಡೆದದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ನಾನು ಮಾಡುತ್ತೇನೆ ಎಂದರು.
ಇನ್ನೂ ಸಮಾರಂಭದಲ್ಲಿ ಗುತ್ತಿಗೆದಾರ ಡಿ ಜಿ ಗೋವಿಂದಪ್ಪ ಹಾಗೂ ಹೆಚ್.ಬಿ. ತಿಪ್ಪೇಸ್ವಾಮಿ ಜೋಗಿಹಟ್ಟಿ ರವರು ಮಾತನಾಡಿದರು.
ಇದೇ ವೇಳೆ ಗ್ರಾಮ ಪಂಚಾಯತಿ ಸದಸ್ಯರಾದ ಜಿ ಎಚ್ ರಂಗಸ್ವಾಮಿ ಮಂಜುಳಾ, ತಿಪ್ಪೇಸ್ವಾಮಿ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ ಹನುಮಂತಪ್ಪ , ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರೇವಕ್ಕ, ಎಸ್ ಓ ತಿಪ್ಪೇಸ್ವಾಮಿ ,ಎಚ್ ಬಿ ತಿಪ್ಪೇಸ್ವಾಮಿ ಎಚ್ ನಾಗೇಂದ್ರಪ್ಪ, ಪಿ ಓ ತಿಪ್ಪೇಸ್ವಾಮಿ, ಜಿ ಡಿ ಆರ್ ತಿಪ್ಪೇಸ್ವಾಮಿ ,ಕೆಇಬಿ ಅಜಯ್, ಗೌತಮ್ ಗೌಡ, ಸೇರಿದಂತೆ ಭೀಮಗೊಂಡನಹಳ್ಳಿ ಸಮಸ್ತ ಗ್ರಾಮಸ್ಥರು ಕ್ರೀಡಾಪಟುಗಳು ಉಪಸ್ಥಿತರಿದ್ದರು