ಅಧಿಕಾರಿಗಳ ಇಚ್ಚಾಶಕ್ತಿ…! ಚಳ್ಳಕೆರೆಯಲ್ಲಿ ಕೆಎಎಸ್/ಐಎಎಸ್ ಉಚಿತ ತರಬೇತಿ : ಇಓ.ಹೊನ್ನಯ್ಯ
ಚಳ್ಳಕೆರೆ ; ನಗರದ ತಾಲ್ಲೂಕು ಪಂಚಾಯಿತಿ ಇಓ ಕಚೇರಿಯಲ್ಲಿ ನಡೆದ ಎಸ್ ಸಿಪಿ-ಟಿಎಸ್ ಪಿ ಯೋಜನೆ ಅನುದಾನದ ಕುರಿತ ಅಧಿಕಾರಿಗಳ ಸಭೆಯಲ್ಲಿ ತಾಲೂಕು ಪಂಚಾಯಿತಿ ಇಓ ಹೊನ್ನಯ್ಯ ಮಾತನಾಡಿ, ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ನಗರಸಭೆಗೆ ಬರುವ ಎಸ್‌ಸಿಪಿ-ಟಿಎಸ್‌ಪಿ ಯೋಜನೆ ಬಳಕೆ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು….
ಇನ್ನೂ ಎಸ್ ಸಿ ಪಿ-ಟಿಎಸ್ ಪಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿಗಳು ನಿರ್ಮಾಣ ಮಾಡಬೇಕು, ಸಾಕಷ್ಟು ಗ್ರಾಪಂ ವ್ತಾಪ್ತಿಗಳಲ್ಲಿ ಚರಂಡಿಗಳೇ ನಿರ್ಮಾಣವಾಗಿಲ್ಲ ಎಂದು ಪಂಚಾಯತ್ ರಾಜ್ ಇಲಾಖೆ ಎಇಇ ಕಾವ್ಯ ಸಭೆಯ ಗಮನ ಸೆಳೆದರು..
ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ, ಕೃಷಿ ಸಹಾಯಕ ನಿರ್ದೇಶಕ ಆಶೋಕ್, ಪಶು ಇಲಾಖೆ ಸಹಾಯಕ ನಿರ್ದೇಶಕ ರೇವಣ್ಣ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ಪಂಚಾಯತ್ ರಾಜ್ ಇಲಾಖೆ ಎಇಇ ಕಾವ್ಯ ಸೇರಿದಂತೆ ಮುಂತಾದವರು ಇದ್ದರು…