ಚಿತ್ರದುರ್ಗ(ಚಳ್ಳಕೆರೆ) : ಹೊಸ ವರ್ಷದ ಸಂಭ್ರಮಾಚರಣೆಗೆ ಷರತ್ತುಗಳನ್ನು ವಿಧಿಸಲಾಗಿದ್ದು, ಮಾರ್ಗಸೂಚಿಯನ್ವಯ ಆಚರಣೆ ಡಿಸೆಂಬರ್ 31 ಹಾಗೂ ಜನವರಿ 01ರ ಮಧ್ಯರಾತ್ರಿ 01 ಗಂಟೆಯೊಳಗಾಗಿ ಮುಕ್ತಾಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಹೇಳಿದರು.
ಈ ಬಗ್ಗೆ ಮಾತನಾಡಿದ ದಿವ್ಯಪ್ರಭು ಜಿ.ಆರ್.ಜೆ. ತಪ್ಪದೇ ಎಲ್ಲರೂ ಮಾಸ್ಕ್ ಧರಿಸಬೇಕು, ಅಲ್ಲದೆ ಎಲ್ಲ ಹೊಟೇಲ್, ಪಬ್, ಬಾರ್ ಅಂಡ್ ರೆಸ್ಟೋರೆಂಟ್ಸ್, ಕ್ಲಬ್ಸ್ ಇತ್ಯಾದಿಗಳು ಕೂಡ ಮಧ್ಯರಾತ್ರಿ 01ಕ್ಕೆ ಮುಚ್ಚಬೇಕು. ದೊಡ್ಡ ಪ್ರಮಾಣದ ಗುಂಪು ಸೇರುವ ಸಭೆಯನ್ನು ಆದಷ್ಟು ಮಧ್ಯಾಹ್ನದ ಸಮಯದಲ್ಲಿ ಮತ್ತು ಹೊರಾಂಗಣ ಪ್ರದೇಶದಲ್ಲಿ ಹಮ್ಮಿಕೊಳ್ಳಬೇಕು.
ನಿಗದಿತ ಸಂಖ್ಯೆಗಿAತ ಹೆಚ್ಚು ಜನರನ್ನು ಸೇರಿಸುವಂತಿಲ್ಲ ಹಾಗೂ ಹೋಟೆಲ್, ಪಬ್, ರೆಸ್ಟೋರೆಂಟ್ಗಳಲ್ಲಿ ನಿಗದಿತ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಆಸನ ವ್ಯವಸ್ಥೆ ಮಾಡುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಸಮಾರಂಭಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಬಳಸುವುದು ಮತ್ತು ಬಂದವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಸಮಾರಂಭ ಆಯೋಜಕರು, ಸಿಬ್ಬಂದಿ ಬೂಸ್ಟರ್ ಡೋಸ್ ತೆಗೆದುಕೊಳ್ಳುವುದು, ಎರಡು ಡೋಸ್ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ. ಸಿನಿಮಾ ಮಂದಿರ ಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಬೇಕು, ಉಲ್ಲಂಘನೆ ಕಂಡುಬAದಲ್ಲಿ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ಪ್ರಕರಣಗಳಿಗೆ ಸಂಬAಧಿಸಿದAತೆ ಕೋವಿಡ್ ಟೆಸ್ಟ್ ಮಾಡಬೇಕು, ಪಾಸಿಟಿವ್ ಬಂದ ಎಲ್ಲ ಪ್ರಕರಣಗಳನ್ನು ಜಿನೋಟಿಕ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಿಕೊಡಬೇಕು, ಇದರಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸುವಂತಿಲ್ಲ. ಖಾಸಗಿ ಆಸ್ಪತ್ರೆಯವರೂ ಕೂಡ ಜ್ವರ, ಶೀತ ಹಾಗೂ ಕೆಮ್ಮು ರೋಗಗಳ ಪ್ರಕರಣಗಳನ್ನು ಟೆಸ್ಟ್ಗೆ ಒಳಪಡಿಸಬೇಕು. ಟೆಸ್ಟ್ ವರದಿಗಳನ್ನು 24 ಗಂಟೆಗಳ ಒಳಗಾಗಿ ನೀಡಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರು.
ಇನ್ನು ಸೋಂಕಿನ ಲಕ್ಷಣಗಳನ್ನು ಹೋಂದಿರುವವರನ್ನು ಪರೀಕ್ಷೆ ಮಾಡಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಈ ವೇಳೆ ಉಪಸ್ಥಿತರಿದ್ದ ಡಿಹೆಚ್ಒ ಡಾ. ರಂಗನಾಥ್ ಪ್ರತಿಕ್ರಿಯಿಸಿ, “ಕೊರೊನಾ ಸೋಂಕಿನ ಮಾದರಿಗಳನ್ನು ಪರೀಕ್ಷಿಸುವ ಮೂರು ಪ್ರಯೋಗಾಲಯ ಯೂನಿಟ್ಗಳು ನಮ್ಮಲ್ಲಿವೆ. ದಿನಕ್ಕೆ ಗರಿಷ್ಟ 4 ಸಾವಿರ ಮಾದರಿಗಳನ್ನು ಟೆಸ್ಟ್ ಮಾಡುವ ಸಾಮರ್ಥ್ಯವಿದೆ” ಎಂದರು.