ಚಳ್ಳಕೆರೆ : ಭೀಮಾ ಕೋರೆಗಾಂವ್ ವಿಜಯೋತ್ಸವ ನಮ್ಮನ್ನು ಎಚ್ಚರಗೊಳಿಸುತ್ತದೆ ಅಂಬೇಡ್ಕರ್ ಚಿಂತನೆಗಳ ಮೂಲಕ ರೂಪಗೊಂಡ ಕೋರೆಗಾಂವ್‌ನ್ನು ಪ್ರತಿ ವರ್ಷ ಡಿಸೆಂಬರ್ 31 ಹಾಗು ಜನವರಿ 1ರಂದು ಆಚರಿಸುತ್ತೆವೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಹೇಳಿದರು.
ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದಲ್ಲಿ ಸಾಮಾಜಿಕ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನದ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ರವರ ಸಾಧನೆಯ ಭಾವ ಚಿತ್ರಗಳ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿ ನಂತರ ಮಾತನಾಡಿದ ಅವರು ಅಂಬೇಡ್ಕರ್ ಹೇಳುವ ಪ್ರತಿಯೊಂದು ವಾಖ್ಯ ಅಕ್ಷರಶಃ ಸತ್ಯ ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಠಿಸಲಾರ ಎಂದರು.
ಈದೇ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತ್ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ ಮಾತನಾಡಿ, ಭಾರತದ ಚರಿತ್ರೆಯಲ್ಲಿ ನಡೆದಿರುವ 1818ರಲ್ಲಿ ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತವಿದ್ದಾಗ 2ನೇ ಬಾಜೀರಾಯ ಅಲ್ಲಿನ ಅಸ್ಪೃಶ್ಯ ಮಹಾರರನ್ನು ಸಾಮಾಜಿಕವಾಗಿ ಅಪಮಾನಕ್ಕೀಡು ಮಾಡಿ ಸೈನ್ಯದಲ್ಲಿ ಕೆಲಸ ಮಾಡಲು ನಿರಾಕರಿಸಿದ್ದರ ಫಲವಾಗಿ ಪೇಶ್ವೆಗಳ ವಿರುದ್ದ 500 ಮಂದಿ ಮಹರ್ ರೆಜಿಮೆಂಟ್ ಭೀಮಾನದಿಯ ತೀರದ ಕೋರೆಗಾಂವ್ ಎಂಬ ಹಳ್ಳಿಯಲ್ಲಿ ನಡೆಸಿದ ಆತ್ಮಾಭಿಮಾನದ ಯುದ್ದವೇ ಇಂದು ಭೀಮಕೋರೆಗಾಂವ್ ಯುದ್ದವೆಂದು ಹೆಸರಾಗಿದೆ ಎಂದರು.
ನಗರಸಭೆ ಸದಸ್ಯ ಕೆ.ವೀರಭದ್ರಯ್ಯ ಮಾತನಾಡಿ, ಅಂಬೇಡ್ಕರ್ ವಿದೇಶಕ್ಕೆ ತೆರಳಿ ಶಿಕ್ಷಣ ಪಡೆದ್ಥ ಭಾಗವಾಗಿಯೇ ಭಾರತಕ್ಕೆ ಬಂದಾಗ ತನ್ನ ಜನಾಂಗದ ತ್ಯಾಗ ಹೋರಾಟಗಳ ನಿಜ ಇತಿಹಾಸ ತಿಳಿಸಲು ಸಾಧ್ಯವಾಯಿತು. 1927ರಲ್ಲಿ ಪ್ರಥಮ ಭಾರಿಗೆ 10 ಸಾವಿರ ಜನತೆಯೊಂದಿಗೆ ಈ ಸ್ಥಳಕ್ಕೆ ತೆರಳಿದ ಅಂಬೇಡ್ಕರರು ವೀರಯೋಧರಿಗೆ ನಮನ ಸಲ್ಲಿಸಿ ಬರುತ್ತಾರೆ. ಅಂದಿನಿAದ ಇಲ್ಲಿಯವರೆಗೆ ಈ ಸ್ಥಳದಲ್ಲಿ ಜ.1ನ್ನು ವಿಜಯದಿವಸ ವೆಂದು ಆಚರಿಸುತ್ತಾ ಬರಲಾಗಿದೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ ಪ್ರಸನಕುಮಾರ್, ಸದಸ್ಯ ಕೆ.ವೀರಭದ್ರಯ್ಯ, ಸುಮಾ, ವಿನೋಧ್ ಕುಮಾರ್, ಡಿಎಸ್‌ಎಸ್ ಸಂಚಾಲಕ ಟಿ.ವಿಜಯ್‌ಕುಮಾರ್, ಉಮೇಶ್‌ಚಂದ್ರ ಬ್ಯಾನರ್ಜಿ, ಹಳೆಟೌನ್ ವೀರಭದ್ರ, ಮಾಜಿ ತಾಪಂ.ಸದಸ್ಯ ಆಂಜನೇಯ, ಕೃಷ್ಣಮೂರ್ತಿ, ಭೀಮನಕೇರೆ ಶಿವಮೂರ್ತಿ, ಪ್ರಸನ್ನಕುಮಾರ್, ಮತ್ತಿತರ ದಲಿತ ಮುಖಂಡರು ಹಾಜರಿದ್ದರು.