ಚಳ್ಳಕೆರೆ : ವಾಣಿಜ್ಯ ತೆರಿಗೆ ಇಲಾಖೆ ಮೇಲೆ ಲೋಕಾಯುಕ್ತ ದಾಳಿ
ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಬಳ್ಳಾರಿ ರಸ್ತೆಯಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಕಛೇರಿಯ ಕಡತಗಳನ್ನು ಪರೀಶಿಲನೆ ನಡೆಸುತ್ತಿದ್ದಾರೆ.
ರಾಜ್ಯದ 35ತೆರಿಗೆ ಇಲಾಖೆಗಳ ಮೇಲೆ ಪ್ರಕರಣ ದಾಖಲಾಗಿರುವುದು ಮೆಲ್ನೋಟಕ್ಕೆ ಕಂಡು ಬಂದಿದ್ದು ಅದರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ ತೆರಿಗೆ ಇಲಾಖೆ ಕೂಡ ಒಂದಾಗಿದೆ ಆದ್ದರಿಂದ ಮುಂಜಾನೆಯಿAದ ಸುಮಾರು ತಾಸುಗಟ್ಟಲೆ ಕಛೇರಿಯ ಕಡತಗಳನ್ನು ಪರೀಶಿಲನೆ ನಡೆಸುತ್ತಿದ್ದಾರೆ.
ಇನ್ನೂ ಹಿರಿಯೂರು ಮೊಳಕಾಲ್ಮೂರು ಹಾಗೂ ಚಳ್ಳಕೆರೆ ಈ ಮೂರು ತಾಲೂಕುಗಳ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರ ಲೆಕ್ಕ ಪರಿಶೋಧನೆ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳ ಕಛೇರಿ ಮೇಲೆ ಲೋಕಾಯುಕ್ತರ ಪ್ರಕರಣ ದಾಖಲಿಸಕೊಂಡು ದಾಳಿ ನಡೆಸಿದ್ದಾರೆ.
ದಾಳಿ ಸಮಯದಲ್ಲಿ ಕಡತಗಳಿಗೂ ಹಾಗೂ ಲೆಕ್ಕಾ ಪರೀಶಿಲನೆಗೆ ತಾಳೆ ನೋಡಿ ನಂತರ ಪ್ರಕರಣ ತಿರುವು ಪಡೆಯಲಾಗುವುದು ಎನ್ನಲಾಗಿದೆ. ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ್ ನೇತೃತ್ವದ ತಂಡದ ಸಿಬ್ಬಂದಿ ಜಗನ್ನಾಥ್, ಮೃಂತಜಯ ಇತರ ಸಿಬ್ಬಂದಿಯವರು ಪರೀಶಿಲನೆಯಲ್ಲಿ ತೊಡಗಿದ್ದರು.