ಚಳ್ಳಕೆರೆ : ಎಗ್ಗಿಲ್ಲದೆ ಮರಳು ಸಾಗಟಕ್ಕೆ ರೋಸಿ ಹೋದ ಜನತೆ ರಸ್ತೆಗೆ ಅಡ್ಡಲಾಗಿ ಕುಳಿತು ಓಬಳಾಪುರ ಹಾಗೂ ಚಳ್ಳಕೆರೆ ಮಾರ್ಗದ ರಸ್ತೆಯನ್ನು ಬಂದ್ ಮಾಡಿದ್ದಂತಹ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ, ಗ್ರಾಮಸ್ಥರನ್ನು ಮನವೊಲಿಸಿ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಟ್ಟಿದ್ದಾರೆ.
ಈ ಓಬಳಾಪುರ,ಮೈಲನಹಳ್ಳಿ, ಗುಡಿ ಹಳ್ಳಿ, ದೊಡ್ಡ ಉಳ್ಳಾರ್ತಿ ಹಾಗೂ ದುರ್ಗಾವಾರ ಮಾರ್ಗದ ರಸ್ತೆಯಲ್ಲಿ ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಮರಳಿನ ಲಾರಿಗಳು ಓಡಾಟ ಮಾಡುತ್ತಿದ್ದು, ಇದರಿಂದ ರಸ್ತೆಗಳು ಹಾಳಾಗಿದ್ದು ಗ್ರಾಮದ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಧೂಳು ಮತ್ತು ಮಾಲಿನ್ಯ ಉಂಟಾಗಿದ್ದುರಿಂದ ಅನೇಕರು ಖಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ, ಎಂಬ ಸುದ್ದಿ ನಮ್ಮ ಚಳ್ಳಕೆರೆ ವೆಬ್ ನ್ಯೂಸ್ ವರದಿ ಬಿತ್ತರಿಸಿದ ಹಿನ್ನಲೆಯಲ್ಲಿ
ತುರ್ತಾಗಿ ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ್ ಎನ್ ರಘುಮೂರ್ತಿ,
ರಸ್ತೆ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರನ್ನು ಕರೆಸಿ ತರಾಟೆಗೆ ತೆಗೆದುಕೊಂಡರು,
ನಂತರ ನಾಳೆ ಬೆಳಿಗ್ಗೆ ಎಂಟು ಗಂಟೆಗೆ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಿದರು ,
ಸಂಬಂಧಿಸಿದ ಗುತ್ತಿಗೆದಾರರು ನಾಳೆ ಬೆಳಗ್ಗೆ 8:00 ಗಂಟೆಗೆ ಕೆಲಸ ಪ್ರಾರಂಭಿಸುವುದಾಗಿ ಭರವಸೆ ನೀಡಿದ ಬಳಿಕ ಮುಷ್ಕರ ನಿರತ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು,
ಇನ್ನೂ ಸ್ಥಳದಲ್ಲಿ ಇದ್ದ ಗ್ರಾಮಸ್ಥರಿಗೆ ಮನವೊಲಿಸಿದ ತಹಶೀಲ್ದಾರ್ ಇಂತಹ ಪ್ರತಿಭಟನೆ ರಸ್ತೆ ಬಂದ್ ಮಾಡುವುದು ಸರಿಯಲ್ಲ, ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಾಬಾರದು ನಿಮ್ಮ ಸೇವೆಗೆ ಸದಾ ಅಧಿಕಾರಿಗಳು ಸಿದ್ದರಿದ್ದಾರೆ, ತಕ್ಷಣವೇ ನಿಮ್ಮ ಮನವಿಗೆ ತುರ್ತಾಗಿ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದು ಮನವೋಲಿಸಿದರು.