ಚಳ್ಳಕೆರೆ : ಮಕ್ಕಳಿಗೆ ಪ್ರತಿಭಾ ಪುರಸ್ಕಾರದಿಂದ ಅವರ ಮುಂದಿನ ವ್ಯಾಸಂಗಕ್ಕೆ ಸ್ಪೂರ್ತಿ ನೀಡಿದಂತಾಗುತ್ತದೆ, ಅದರಂತೆ ಚಾಲಕ ಮಕ್ಕಳಿಗೆ ಪ್ರತಿಭೆಯನ್ನು ಮತ್ತು ಅವರಿಗೆ ಸಿಗಬೇಕಾದ ಗೌರವವನ್ನು ಇಂತಹ ವೇದಿಕೆಗಳಿಂದ ಮಾತ್ರ ಸಾಧ್ಯವೆಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ನಗರದ ಛೇಂಬರ್ ಆಪ್‌ಕಾಮರ್ಸ್ನಲ್ಲಿ ಶ್ರೀರಾಮ್ ಪೌಂಡೆಷನ್‌ವತಿಯಿAದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಹಧನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶ್ರೀರಾಮ್ ಪೌಂಡೆಷನ್‌ನಿAದ ಪ್ರತಿವರ್ಷ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು, ಇವು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಹಾಗೂ ಚಾಲಕರ ಮಕ್ಕಳಿಗೆ ಸ್ಪೂತಿದಾಯಕವಾಗಿ ಮುಂದಿನ ವಿದ್ಯಾಭ್ಯಾಸಕ್ಕೆ ದಾರಿ ದೀಪವಾಗಬೇಕು ಎಂದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಮಾತನಾಡಿ, ಈ ಪ್ರತಿಭಾ ಪುರಸ್ಕಾರದಿಂದ ಮಕ್ಕಳು ಇನ್ನಷ್ಟು ಪ್ರೇರಣೆಗೊಳ್ಳುವುದರ ಮೂಲಕ ತಮ್ಮ ತಂದೆ ತಾಯಿಗಳಿಗೆ ಕೀರ್ತಿ ತರುವ ನಿಟ್ಟಿನಲ್ಲಿವ್ಯಾಸಂಗ ದೃಷ್ಠಿಕೊನ ಹೊಂದಿರಬೇಕು ಎಂದರು.
ವೃತ್ತ ನೀರಿಕ್ಷ ಕೆ.ಸಮೀವುಲ್ಲಾ ಮಾತನಾಡಿ, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಕ್ಕಳು ಮೊಬೈಲ್ ಪೋನ್‌ಗಳ ವ್ಯಸನಿಗಳಾಗಿದ್ದಾರೆ ದಿನದ ಅರ್ಧದಷ್ಟು ಕಾಲ ಮೊಬೈಲ್‌ಗಳಲ್ಲಿ ಕಾಲ ಕಳೆಯುತ್ತಾರೆ, ಆದ್ದರಿಂದ ಮೊಬೈಲ್ ಗೀಳುಬಿಟ್ಟು ಉತ್ತಮವಾದ ವ್ಯಾಸಂಗ ಮುಂದುವರಿಸಿದಲ್ಲಿ ಮಾತ್ರ ಇಂತಹ ಸಭೆಗಳಲ್ಲಿ ಪುರಸ್ಕಾರ ಸ್ವೀಕರಿಸಲಾಗುವುದು ಎಂದು ಕಿವಿಮಾತು ಹೇಳಿದರು.
ಪಿಎಸ್‌ಐ ಕೆ.ಸತೀಶ್ ನಾಯ್ಕ್ ಮಾತನಾಡಿ, ನಾನು ಕೂಡ ನಿಮ್ಮ ಹಾಗೇ ಒಬ್ಬ ಚಾಲಕನ ಮಗ ನಿಮ್ಮ ಮುಂದೆ ಇದ್ದೇನೆ, ನೀವು ಕೂಡ ನಮ್ಮ ಹಾಗೇ ಸರಕಾರಿ ಸೇವೆ ಮಾಡುವ ಹಂಬಲ ಪ್ರತಿಯೊಬ್ಬರಲ್ಲಿ ಮೈ ಗೂಡಿಸಿಕೊಳ್ಳಬೇಕು ಇಂತಹ ಪ್ರತಿಭಾ ಪುರಸ್ಕಾರ ನಮ್ಮ ಗುರಿಯನ್ನು ಮತ್ತಷ್ಟು ಉನ್ನತ ಶಿಕರಕ್ಕೆ ಕೊಂಡುಯ್ಯುತ್ತದೆ ಎಂದರು.
ಶ್ರೀರಾಮ ಪೌಂಡೆಷನ್ ರಿಜಿನಲ್ ಬ್ಯೂಸಿನೆಸ್ ಹೆಡ್ ಟಿ.ಆರ್.ರಾಘವೇಂದ್ರ ಮಾತನಾಡಿ, ಪ್ರತಿ ವರ್ಷ ನಮ್ಮ ಶ್ರೀರಾಮ್‌ಪೌಂಡೆಷನ್‌ನಿAದ ಚಾಲಕರ ಮಕ್ಕಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಸ್ಪೂರ್ತಿಯಾಗಲು ಇಂತಹ ಪುರಸ್ಕಾರಗಳು ನಡೆಯುತ್ತಾವೆ ಅದರಂತೆ ಈ ವರ್ಷವೂ ಕೂಡ ಚಾಲಕ ಮಕ್ಕಳಿಗೆ ಪ್ರಥಮ ಶ್ರೇಣಿಯಲ್ಲಿ ಪಾಸಾದವರಿಗೆ ಸನ್ಮಾನ ಮಾಡಲಾಗುತ್ತಿದೆ ಎಂದರು.
ಈ ಸಂಧರ್ಭದಲ್ಲಿ ಶ್ರೀರಾಮ್ ಪೈನಾನ್ಸ್ನ ಜಿ.ಹೆಚ್.ಚನ್ನಗೌಡ, ಪಂಪ ವಿರುಪಾಕ್ಷಪ್ಪ, ಚಳ್ಳಕೆರೆ ಬ್ರಾಂಚ್ ಮ್ಯಾನೆಜರ್ ಶಿವಮೂರ್ತಿ, ಕಲೇಕ್ಷನ್ ಮ್ಯಾನೆಜರ್ ರಮೇಶ್ ಬಾಬು, ವಕೀಲರ ಸಂಘದ ಅದ್ಯಕ್ಷ ಆನಂದಪ್ಪ, ವಕೀಲರಾದ ನಾಗರಾಜ್, ನಗರಸಭೆ ಅಧ್ಯಕ್ಷ ಸುಮ್ಮಕ್ಕ, ಉಪಾಧ್ಯಕ್ಷ ಮಂಜುಳಾ ಪ್ರಸನ್ನಕುಮಾರ್, ಹಾಗೂ ಸಿಬ್ಬಂದಿ, ಪ್ರೋತ್ಸಹ ಬಯಸಿದ ವಿದ್ಯಾರ್ಥಿಗಳು ಇತರರು ಇದ್ದರು.
ಪೋಟೋ, ಚಳ್ಳಕೆರೆ ನಗರದ ಛೇಂಬರ್‌ಆಪ್‌ಕಾಮರ್ಸ್ನಲ್ಲಿ ಶ್ರೀರಾಮ್ ಪೌಂಡೆಷನ್‌ವತಿಯಿAದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಹಧನ ವಿತರಣಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಮಕ್ಕಳಿಗೆ ಪುರಸ್ಕರಿಸಿದರು.