ಚಳ್ಳಕೆರೆ : ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಚಳ್ಳಕೆರೆ ತಾಲ್ಲೂಕು ಸಮಿತಿ ವತಿಯಿಂದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಕೋದಂಡರಾಮ್, ಮಾರ್ಗದರ್ಶನದಲ್ಲಿ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರಾದ ವಿನೋದ್ಕುಮಾರ್ ರವರ ಅಧ್ಯಕ್ಷತೆಯಲ್ಲಿ ಡಿ.18 ರಂದು ಹೆಗ್ಗೆರೆ ಗ್ರಾಮ ಶಾಖೆ ಉದ್ಘಾಟನೆ ಮಾಡಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾಕಾರ್ಯಧ್ಯಕ್ಷರಾದ ವೃಷಬೆಂದ್ರ ಬಾಬು ರವರು ಮಾತನಾಡಿ ಬಾಬಾ ಸಾಹೇಬ್ ಡಾ”ಬಿ. ಆರ್. ಅಂಬೇಡ್ಕರ್ ರವರ ಬಗ್ಗೆ ಗ್ರಾಮಸ್ಥರಿಗೆ ಮತ್ತು ನೂತನ ಪದಾಧಿಕಾರಿಗಳಿಗೆ ಅರಿವು ಮೂಡಿಸಿದರು ನಂತರ ಮಾತನಾಡಿದ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಅಧ್ಯಕ್ಷರಾದ ರಾಮಚಂದ್ರ. ಕೆ, ಸ್ವಾಭಿಮಾನಿ ಸೇನೆ ಸಂಘಟನೆ ಬೆಳೆದು ಬಂದ ದಾರಿ ಸಂಘಟನೆಯ ನಿಯಮಗಳ ಬಗ್ಗೆ ನೂತನ ಪದಾಧಿಕಾರಿಗಳಿಗೆ ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರುಗಳು ಸಿದಪ್ಪ(ಮಲ್ಲಪನಹಳ್ಳಿ)ಹನುಮಂತು, ಮುಜಾಹಿದ್, ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಚಂದ್ರಣ್ಣ. ಟಿ. ಸಿ. ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ರೇವಣ್ಣಸಿದಪ್ಪ. ಬಿ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷರಾದ ಮೊಹಮ್ಮದ್ ರಫಿ ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷರಾದ ತಿಪ್ಪೇಶ್ ಹಿರಿಯೂರು ತಾಲ್ಲೂಕು ಕಾರ್ಯಧ್ಯಕ್ಷರಾದ ರಾಘವೇಂದ್ರ. ಆರ್ ಹಿರಿಯೂರು ತಾಲ್ಲೂಕು ಕಾರ್ಯದರ್ಶಿ ಕಣುಮೇಶ್ ಚಿತ್ರದುರ್ಗ ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ದಾದಾಪೀರ್ ತಾಲ್ಲೂಕು ಪ್ರದಾನ ಕಾರ್ಯದರ್ಶಿಗಳಾದ ಜಾಕಿರ್ ತಾಲ್ಲೂಕು ಕಾರ್ಯದರ್ಶಿ ಖಾಸಿಂ ತಾಲ್ಲೂಕು ಉಪಾಧ್ಯಕ್ಷರಾದ ದುರ್ಗೇಶ್ ತಾಲ್ಲೂಕು ಯುವ ಘಟಕದ ಅಧ್ಯಕ್ಷರಾದ ಗೌತಮ್ ಮತ್ತು ಹೆಗ್ಗೆರೆ ಗ್ರಾಮದ ಎಲ್ಲಾ ನೂತನ ಪದಾಧಿಕಾರಿಗಳು ಮತ್ತು ಹೆಗ್ಗೆರೆ ಗ್ರಾಮದ ಎಲ್ಲಾ ಗ್ರಾಮಸ್ಥರು ಭಾಗವಹಿಸಿ ಉದ್ಘಾಟನೆ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು ಜೈ ಭೀಮ್ ಜೈ ಅಂಬೇಡ್ಕರ್ ಸ್ವಾಭಿಮಾನಿ ಸೇನೆ