ತಳಕು :: ಶ್ರೀ ವೀರಭದ್ರೇಶ್ವರ ರಥಕ್ಕೆ ಸಚಿವ ಬಿ ಶ್ರೀರಾಮುಲು ರವರು ವೈಯಕ್ತಿಕವಾಗಿ 2 ಲಕ್ಷ ರೂಪಾಯಿ ರಥಕ್ಕೆ ನೀಡಿದ್ದಾರೆ ಎಂದು ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ ಹೇಳಿದ್ದಾರೆ .
ಅವರು ಸೋಮವಾರ ತಳಕು ವ್ಯಾಪ್ತಿಯ ವಲಸೆ ಗ್ರಾಮದ ಶ್ರೀ ವೀರಭದ್ರಸ್ವಾಮಿಯ ಕರ‍್ತಿಕ ಮಾಸದ ಶ್ರೀ ವೀರಭದ್ರೇಶ್ವರ ರಥೋತ್ಸವದಲ್ಲಿ ಭಾಗವಹಿಸಿ ಶ್ರೀ ವೀರಭದ್ರೇಶ್ವರ ಪೂಜಿ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ ನಮ್ಮ ಸಾರಿಗೆ ಸಚಿವರಾದ ಶ್ರೀ ಬಿ ಶ್ರೀರಾಮುಲು ರವರು ಶ್ರೀ ವೀರಭದ್ರೇಶ್ವರ ಸ್ವಾಮಿಯ ಹೊಸ ಹೊಸ ರಥ ನರ‍್ಮಾಣಕ್ಕೆ ಕೊಟ್ಟ ಮಾತಿನಂತೆ ಮಾನ್ಯ ಸಚಿವರು 2 ಲಕ್ಷ ರೂಪಾಯಿ ಹಣವನ್ನ ತಮ್ಮ ಆಪ್ತ ಸಹಾಯಕರಾದ ಶ್ರೀ ಪಾಪೇಶ್ ನಾಯಕ ರವರ ಮೂಲಕ ಎರಡು ಲಕ್ಷ ರೂಗಳ ಹಣವನ್ನು ನೀಡಿದ್ದು,
ಇಂದು ನಡೆದ ರಥೋತ್ಸವ ಕರ‍್ಯಕ್ರಮದಲ್ಲಿ ಸಚಿವರ ಆಪ್ತ ಸಹಾಯಕರಾದ ಶ್ರೀ ಪಾಪೇಶ್ ನಾಯಕ, ಮಂಡಲ ಅಧ್ಯಕ್ಷರಾದ ಶ್ರೀ ರಾಮರೆಡ್ಡಿ, ಮಂಡಲ ಕರ‍್ಯರ‍್ಶಿಗಳಾದ ಶ್ರೀ ಹೆಚ್ ವಿ ಪ್ರಕಾಶ್ ರೆಡ್ಡಿ, ಬಿಜೆಪಿ ಮುಖಂಡರಾದ ಶ್ರೀ ಸೋಮೇಂದ್ರ, ರಘುನಂದನ್, ಮಂಜುನಾಥ್ ಸೇರಿದಂತೆ ಗ್ರಾಮದ ಅಧ್ಯಕ್ಷರು, ಮುಖಂಡರುಗಳು, ಕರ‍್ಯರ‍್ತರು ಭಾಗವಹಿಸಿದ್ದರು