ಚಳ್ಳಕೆರೆ : ಜಾನಪದ ಕಲೆ ಅಳಿವಿನಂಚಿನಲ್ಲಿವೆ ಅವುಗಳನ್ನು ಸಂರಕ್ಷಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಈರಣ್ಣ ಹೇಳಿದ್ದಾರೆ.
ಅವರು ನಾಯಕನಹಟ್ಟಿ ವ್ಯಾಪ್ತಿಯ ನೇರಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಟವ್ವನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಭಜನಾ ತಂಡ (ರಿ) ಭತ್ತಯ್ಯನಹಟ್ಟಿ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಸಂಯುಕ್ತಾಶ್ರದಲ್ಲಿ ಜಾನಪದ ಉತ್ಸವ ಸಾಂಸ್ಕೃತಿಕ ಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮಟೆ ಹೊಡೆಯುವುದರ ಮುಖಾಂತರ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ್ದಾರೆ, ದೈವದತ್ತವಾಗಿ ಬಂದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಕಲಾವಿದರಿದ್ದಾರೆ ಅವರಿಗೆ ಸರಿಯಾದ ರೀತಿಯಲ್ಲಿ ಅವಕಾಶಗಳು ಸಿಗುತ್ತಿಲ್ಲ ತಮಟೆ, ನುಡುಕ್ರ, ಉರಿಮೆ ಕೋಲಾಟ ಸೋಬಾನ ಭಜನೆ ಯಕ್ಷಗಾನ ಸೇರಿದಂತೆ ಸಾಕಷ್ಟು ಪ್ರತಿಭೆಗಳು ಗ್ರಾಮೀಣ ಪ್ರದೇಶದಲ್ಲಿ ಇದ್ದಾರೆ ಮಾಯವಾಗಿ ಬಿಡುತ್ತಾರೆ ಅದರಿಂದ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಕಲಾವಿದರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಮುಂದಾಗಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಈರಣ್ಣ ತಿಳಿಸಿದ್ದಾರೆ.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯೆ ಎಂ ಸುಷ್ಮಾ ಮಾತನಾಡಿ ಜಾನಪದ ಕಲೆಯನ್ನ ಉಳಿಸಲು ಪ್ರತಿಯೊಬ್ಬ ಕಲಾವಿದರು ಗ್ರಾಮದ ಯುವಕರು ಸೇರಿದಂತೆ ಮುಂದಾಗಬೇಕು. ತಮ್ಮ ಇಡೀ ಜೀವನವನ್ನೇ ಕಲೆಗಾಗಿ ಮೀಸಲಿಟ್ಟ ಅನೇಕ ಕಲಾವಿದರು ಹೃದಯವಂತಿಕೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಆದ್ದರಿಂದ ನಮ್ಮ ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಇಂತ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಜಾನಪದ ಕಲೆ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬ ಕಲಾವಿದರು ಪಣತೊಡಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯೆ ಎಂ ಸುಷ್ಮಾ ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗವೇಣಿ ಮಂಜಣ್ಣ, ಸದಸ್ಯರಾದ ಶಾಂತಮ್ಮ, ನಾಗವೇಣಿ, ಡಿ ನಾಗವೇಣಿ, ಎ ಓ ಗೋಪಾಲ, ರುದ್ರಮುನಿ, ಚಳ್ಳಕೆರಮ್ಮ, ದುರುಗಮ್ಮ, ಭೀಮನಕೆರೆ ದುರುಗಮ್ಮ, ತಿಪ್ಪೇಸ್ವಾಮಿ, ಗೌರಣ್ಣ, ಚಂದ್ರಶೇಖರ್, ಅತಿಥಿಗಳಾದ ಅಜ್ಜನಬೋರೆಯ್ಯ ಗೊಂಚಿಪಾಲಯ್ಯ, ಮತ್ತು ಶ್ರೀ ವಾಲ್ಮೀಕಿ ಭಜನಾ ಕಲಾಸಂಘದ ಕಾರ್ಯದರ್ಶಿ ಚಿತ್ರಯ್ಯ, ಗ್ರಾಮದ ಸಮಾಜ ಸೇವಕ ಎಸ್ ಸೂರಯ್ಯ, ಕಲಾವಿದ ಮುನಿಯಪ್ಪ, ಸೇರಿದಂತೆ ಭಜನಾ ಕಲಾವಿದರು ಕೋಲಾಟ ಕಲಾವಿದರು ಕಾಟವ್ವನಹಳ್ಳಿಯ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು